Friday, November 22, 2024
Homeರಾಷ್ಟ್ರೀಯ | Nationalಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ಭಾಷಣ : ಇಲ್ಲಿದೆ ಸಾರಾಂಶ

ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ಭಾಷಣ : ಇಲ್ಲಿದೆ ಸಾರಾಂಶ

ನವದೆಹಲಿ,ಜ.31- ನಾವು ಬಾಲ್ಯದಿಂದಲೂ ಗರೀಬಿ ಹಠಾವೋ ಘೋಷಣೆಯನ್ನು ಕೇಳಿದ್ದೇವೆ. ಆದರೆ, ಇಂದು ನಮ್ಮ ಜೀವನದಲ್ಲಿ ಮೊದಲ ಬಾರಿಗೆ ಬಡತನ ನಿವಾರಿಸುವುದನ್ನು ದೊಡ್ಡ ಪ್ರಮಾಣದಲ್ಲಿ ಕಾಣುತ್ತಿದ್ದೇವೆ. ವಿಶ್ವದಾದ್ಯಂತ ಇರುವ ಗಂಭೀರ ಬಿಕ್ಕಟ್ಟುಗಳ ನಡುವೆ ಭಾರತದ ಆರ್ಥಿಕತೆಯು ಅತಿ ವೇಗವಾಗಿ ಬೆಳೆಯುತ್ತಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಸಂತಸ ವ್ಯಕ್ತಪಡಿಸಿದರು.

ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಹಿಂದೆ ಐದು ದುರ್ಬಲ ಆರ್ಥಿಕತೆಗಳ ಸಾಲಿಗೆ ಸೇರಿದ್ದ ಭಾರತ ಈಗ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ ಎಂದು ಕೇಂದ್ರ ಸರ್ಕಾರದ ಸಾಧನೆಗಳನ್ನು ಕೊಂಡಾಡಿದರು. ಹೊಸ ಸಂಸತ್ ಕಟ್ಟಡದಲ್ಲಿ ಇದು ನನ್ನ ಮೊದಲ ಭಾಷಣ. ಅಮೃತ ಕಾಲದ ಆರಂಭದಲ್ಲಿ ಈ ಭವ್ಯ ಕಟ್ಟಡವನ್ನು ನಿರ್ಮಿಸಲಾಗಿದೆ.

21ನೇ ಶತಮಾನದ ಹೊಸ ಭಾರತದ ಹೊಸ ಸಂಪ್ರದಾಯಗಳನ್ನು ನಿರ್ಮಿಸುವ ಸಂಕಲ್ಪವನ್ನು ಸಹ ಹೊಂದಿದೆ. ಈ ಹೊಸ ಕಟ್ಟಡದಲ್ಲಿ ನೀತಿಗಳ ಬಗ್ಗೆ ಅರ್ಥಪೂರ್ಣ ಸಂಭಾಷಣೆ ನಡೆಯಲಿದೆ ಎಂದು ನನಗೆ ವಿಶ್ವಾಸವಿದೆ ಎಂದರು.

ಕಳೆದ ವರ್ಷ ಭಾರತವು ಅನೇಕ ಸಾಧನೆಗಳನ್ನು ಮಾಡಿದೆ ಮತ್ತು ಅನೇಕ ಯಶಸ್ಸುಗಳು ದಕ್ಕಿವೆ. ಭಾರತ ಚಂದ್ರನ ದಕ್ಷಿಣ ಧ್ರುವವನ್ನು ತಲುಪಿದ ಮೊದಲ ರಾಷ್ಟ್ರವಾಯಿತು. ಭಾರತವೇ ಆಯೋಜಿಸಿದ್ದ ಯಶಸ್ವಿ ಜಿ-20 ಶೃಂಗಸಭೆಯು ವಿಶ್ವದಲ್ಲಿ ನಮ್ಮ ರಾಷ್ಟ್ರದ ಪಾತ್ರವನ್ನು ಮತ್ತಷ್ಟು ಬಲಪಡಿಸಿತು. ಭಾರತವು ಏಷ್ಯನ್ ಗೇಮ್ಸ್ನಲ್ಲಿ 100ಕ್ಕೂ ಹೆಚ್ಚು ಪದಕಗಳನ್ನು ಗೆದ್ದಿದೆ. ಭಾರತವೂ ಅಟಲ್ ಸುರಂಗವನ್ನು ಪಡೆದುಕೊಂಡಿದೆ ಎಂದು ಶ್ಲಾಘಿಸಿದರು.

ಬೆಳಗಾವಿಯಲ್ಲಿ ಡಬಲ್ ಮರ್ಡರ್ : ಪತ್ನಿ , ಪ್ರಿಯಕರನ ಕೊಂದು ಪತಿ ಪರಾರಿ

ಇಂದು ಮೇಕ್ ಇನ್ ಇಂಡಿಯಾ ಮತ್ತು ಆತ್ಮನಿರ್ಭರ್ ಭಾರತ್ ನಮ್ಮ ಶಕ್ತಿಯಾಗಿವೆ. ರಕ್ಷಣಾ ಉತ್ಪಾದನೆಯು 1 ಲಕ್ಷ ಕೋಟಿ ರೂ. ಗಡಿ ದಾಟಿದೆ ಎಂದು ಶ್ಲಾಘಿಸಿದರು.ರಾಮಮಂದಿರ ನಿರ್ಮಾಣಕ್ಕೆ ಶತಮಾನಗಳಿಂದಲೂ ಕಾಯಲಾಗಿತ್ತು. ಇಂದು ಇದು ವಾಸ್ತವವಾಗಿದೆ. ಜಮ್ಮು ಮತ್ತು ಕಾಶ್ಮೀರದ ಆರ್ಟಿಕಲ್ 370 ರದ್ದತಿ ಈಗ ಇತಿಹಾಸವಾಗಿದೆ. ಅಭಿವೃದ್ಧಿ ಹೊಂದಿದ ಭಾರತದ ಭವ್ಯ ಸೌಧವು ಯುವ ಶಕ್ತಿ, ಮಹಿಳಾ ಶಕ್ತಿ, ರೈತರು ಮತ್ತು ಬಡವರು ಎಂಬ ನಾಲ್ಕು ಬಲವಾದ ಸ್ತಂಭಗಳ ಮೇಲೆ ನಿಲ್ಲುತ್ತದೆ ಎಂದು ನನ್ನ ಸರ್ಕಾರ ನಂಬುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು.

ಮಹಿಳಾ ಮೀಸಲಾತಿ ಕಾನೂನು ಜಾರಿಗೆ ತಂದ ಸಂಸದರನ್ನು ಹಾಡಿಹೊಗಳಿದ ರಾಷ್ಟ್ರಪತಿ ಅವರು, ಏಷ್ಯನ್ ಕ್ರೀಡಾಕೂಟದ ಇತಿಹಾಸದಲ್ಲಿ ಅತ್ಯಕ ಪದಕಗಳು, ಚಂದ್ರಯಾನ-3 ರ ಯಶಸ್ಸು ಮತ್ತು ರಾಮಮಂದಿರ ನಿರ್ಮಾಣದ ಕನಸು ನನಸಾಗಿರುವುದನ್ನು ಅವರು ಪ್ರಸ್ತಾಪಿಸಿದರು. ರಾಷ್ಟ್ರಪತಿ ರಾಮ ಮಂದಿರದ ಬಗ್ಗೆ ಪ್ರಸ್ತಾಪಿಸಿದ ಕೂಡಲೇ ಅಲ್ಲಿದ್ದ ಸಂಸದರು ಮೇಜು ಕುಟ್ಟಿ ಅಭಿನಂದಿಸಿದರು.

ಸಂಸತ್ತಿನ ಅವೇಶನ ಜನವರಿ 31ರಿಂದ ಫೆಬ್ರವರಿ 9ರವರೆಗೆ ನಡೆಯಲಿದೆ. ಇದರಲ್ಲಿ 8 ಸಭೆಗಳು ನಡೆಯಲಿವೆ. ಫೆಬ್ರವರಿ 1 ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಧ್ಯಂತರ ಬಜೆಟ್ ಮಂಡಿಸಲಿದ್ದಾರೆ.ನಮ್ಮ ಸರ್ಕಾರ ಒಂದು ದೇಶ-ಒಂದು ತೆರಿಗೆ ಕಾನೂನನ್ನು ತಂದಿತು. ಬ್ಯಾಂಕಿಂಗ್ ವ್ಯವಸ್ಥೆ ಬಲಗೊಂಡಿದೆ. ಬ್ಯಾಂಕ್ಗಳ ಎನ್ಪಿಎ ಶೇ.4ಕ್ಕೆ ಇಳಿಕೆಯಾಗಿದೆ. ಮೊದಲಿಗಿಂತ ಎಫ್ಡಿಐ ದುಪ್ಪಟ್ಟಾಗಿದೆ. ಉತ್ತಮ ಆಡಳಿತ ಮತ್ತು ಪಾರದರ್ಶಕತೆಯಿಂದಾಗಿ ಆರ್ಥಿಕ ಸುಧಾರಣೆಯಾಗಿದೆ. ಮೇಕ್ ಇನ್ ಇಂಡಿಯಾ ದೊಡ್ಡ ಅಭಿಯಾನವಾಗಿದೆ. ರಕ್ಷಣಾ ಕ್ಷೇತ್ರಗಳಲ್ಲಿ ಖಾಸಗಿ ಕಂಪನಿಗಳ ಭಾಗವಹಿಸುವಿಕೆ ಹೆಚ್ಚಾಗಿದೆ. ಇಂದು ನಾವು ಆಟಿಕೆಗಳನ್ನು ರಫ್ತು ಮಾಡುತ್ತೇವೆ ಎಂದರು.

ಡಿಜಿಟಲ್ ಇಂಡಿಯಾ ದೇಶದ ಪ್ರಮುಖ ಸಾಧನೆಯಾಗಿದೆ. ಇಂದು ಜಗತ್ತಿನ ಇತರೆ ರಾಷ್ಟ್ರಗಳೂ ಯುಪಿಎ ಮೂಲಕ ವಹಿವಾಟು ಸೌಲಭ್ಯ ಒದಗಿಸುತ್ತಿವೆ. ಖಾಸಗಿ ವಲಯದ ಸಾಮಥ್ರ್ಯದ ಮೇಲೆ ಸರ್ಕಾರಕ್ಕೆ ವಿಶ್ವಾಸವಿದೆ. 2 ಕೋಟಿ ನಕಲಿ ಫಲಾನುಭವಿಗಳನ್ನು ವ್ಯವಸ್ಥೆಯಿಂದ ತೆಗೆದುಹಾಕಲಾಗಿದೆ ಎಂದು ಹೇಳಿದರು.

ಜಿಎಸ್ಟಿಯಿಂದ ಒಂದು ದೇಶ ಒಂದು ಟ್ಯಾಕ್ಸ್ ಕಲ್ಪನೆ ಸಕಾರಗೊಂಡಿದೆ. ಭಾರತದಲ್ಲಿ ಮೂಬೈಲ್ ತಯಾರಿಕೆ ಹೆಚ್ಚಳವಾಗಿದೆ. ಆಟಿಕೆಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಈಗ ಅವು ಭಾರತದಲ್ಲಿ ನಿರ್ಮಾಣವಾಗುತ್ತಿವೆ. ರಕ್ಷಣಾ ವಲಯದಲ್ಲಿ ಭಾರತ ಸ್ವಾವಲಂಬಿಯಾಗಿದೆ. ಹಲವು ಯುದ್ಧ ವಿಮಾನಗಳನ್ನು ಭಾರತದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ವಿಮಾನದ ಇಂಜಿನ್ ಕೂಡಾ ನಿರ್ಮಾಣ ಮಾಡಲಾಗುತ್ತಿದೆ. ಉತ್ತರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ಡಿಫೆನ್ಸ್ ಕಾರಿಡಾರ್ ನಿರ್ಮಾಣವಾಗಿದೆ ಎಂದು ಭಾರತದ ಸಾಧನೆಗಳ ಪಟ್ಟಿಯನ್ನು ಮುರ್ಮು ವಿವರಿಸಿದರು.

RELATED ARTICLES

Latest News