Wednesday, November 13, 2024
Homeರಾಜ್ಯಶಾಸಕರ ಹಣಕ್ಕಾಗಿ ಒತ್ತಡ ಹೇರಿದ್ದೇ ಪಿಎಸ್‌‍ಐ ಪರಶುರಾಮ್‌ ಸಾವಿಗೆ ಕಾರಣ : ಆರ್‌.ಅಶೋಕ್‌

ಶಾಸಕರ ಹಣಕ್ಕಾಗಿ ಒತ್ತಡ ಹೇರಿದ್ದೇ ಪಿಎಸ್‌‍ಐ ಪರಶುರಾಮ್‌ ಸಾವಿಗೆ ಕಾರಣ : ಆರ್‌.ಅಶೋಕ್‌

ಬೆಂಗಳೂರು,ಆ.3- ಶಾಸಕರು ಹಣ ಕೇಳಿದ್ದಕ್ಕೆ ಒತ್ತಡದಿಂದಾಗಿ ಯಾದಗಿರಿ ಪಿಎಸ್‌‍ಐ ಪರಶುರಾಮ್‌ ಸಾವನ್ನಪ್ಪಿದ್ದಾರೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ನಾಯಕ ಆರ್‌.ಅಶೋಕ್‌ ಗಂಭೀರ ಆರೋಪ ಮಾಡಿದ್ದಾರೆ.

ಯಾದಗಿರಿ ಪಿಎಸ್‌‍ಐ ಪರಶುರಾಮ್‌ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಒತ್ತಡದ ಮೇಲೆಯೇ ವಾಲೀಕಿ ನಿಗಮದ ಅಧಿಕಾರಿ ಆತಹತ್ಯೆ ಮಾಡಿಕೊಂಡಿದ್ದರು. ಈಗ ವರ್ಗಾವಣೆಗೆ ಶಾಸಕರು ಹಣ ಕೇಳಿದ್ದಕ್ಕೆ ಪರಶುರಾಮ್‌ ಅವರ ಸಾವಾಗಿದೆ ಎಂದು ಆಕೋಶ ವ್ಯಕ್ತಪಡಿಸಿದ್ದಾರೆ.

ಈ ಸರ್ಕಾರದಲ್ಲಿ ಎಲ್ಲರೂ ಲೂಟಿಗೆ ಇಳಿದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆ ಇಲ್ಲ, ರಾಜೀನಾಮೆ ಕೊಟ್ಟು ಹೋಗಲಿ ಎಂದು ಆಗ್ರಹಿಸಿದರು.

ಶಾಸಕ ಸುನಿಲ್‌ ಕುಮಾರ್‌ ಪ್ರತಿಕ್ರಿಯಿಸಿ, ಕಾಂಗ್ರೆಸ್‌‍ ಶಾಸಕರು ವರ್ಗಾವಣೆ ದಂಧೆಯಲ್ಲಿ ನೇರ ಪಾಲ್ಗೊಂಡಿದ್ದಾರೆ. ಅಲ್ಲಿನ ಶಾಸಕರು ವರ್ಗಾವಣೆಗೆ ದೊಡ್ಡ ಮೊತ್ತದ ಹಣ ಕೇಳುತ್ತಿದ್ದಾರೆ. ಪಿಎಸ್‌‍ಐ ಪರಶುರಾಮ್‌ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಯೇಕು ಎಂದು ಆಗ್ರಹಿಸಿದರು.

ಹಿಂದೆ ಯತೀಂದ್ರ ಅವರ ಹಲೋ ಅಪ್ಪ ಪ್ರಕರಣದಲ್ಲಿ ವರ್ಗಾವಣೆ ದಂಧೆ ಕೇಳಿ ಬಂದಿತ್ತು. ಈಗ ಮತ್ತೊಂದು ಪ್ರಕರಣ ಯಾದಗಿರಿಯಲ್ಲಿ ನಡೆಯುತ್ತಿದೆ. ಬಿಜೆಪಿ ಈಗ ಈ ಪ್ರಕರಣದ ಮಾಹಿತಿಯನ್ನು ಸಂಗ್ರಹ ಮಾಡುತ್ತಿದೆ ಎಂದು ತಿಳಿಸಿದರು.

RELATED ARTICLES

Latest News