Thursday, December 12, 2024
Homeರಾಜ್ಯಶರಣಾಗುವಂತೆ ನಕ್ಸಲೀಯರನ್ನು ಪ್ರಗತಿಪರ ಚಿಂತಕರು ಮನವೊಲಿಸಬೇಕು : ಪರಮೇಶ್ವರ್‌ ಮನವಿ

ಶರಣಾಗುವಂತೆ ನಕ್ಸಲೀಯರನ್ನು ಪ್ರಗತಿಪರ ಚಿಂತಕರು ಮನವೊಲಿಸಬೇಕು : ಪರಮೇಶ್ವರ್‌ ಮನವಿ

Progressive thinkers should come forward to convince Naxalites to surrender:

ಬೆಂಗಳೂರು,ನ.21- ನಕ್ಸಲೀಯ ಚಟುವಟಿಕೆಯಲ್ಲಿ ತೊಡಗಿರುವವರನ್ನು ಮನವೊಲಿಸಿ ಶರಣಾಗತಿ ಮಾಡಿಸಲು ಪ್ರಗತಿಪರ ಚಿಂತಕರು ಮುಂದಾಗಬೇಕು ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್‌ ಮನವಿ ಮಾಡಿದ್ದಾರೆ.ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಡುಪಿಯ ಹೆಬ್ರಿ ಅರಣ್ಯ ಪ್ರದೇಶದಲ್ಲಿ ನಕ್ಸಲ್‌ ನಾಯಕ ವಿಕ್ರಂ ಗೌಡ ಅವರ ಎನ್‌ಕೌಂಟರ್‌ ನಕಲಿ ಅಲ್ಲ ಎಂದು ಸ್ಪಷ್ಟಪಡಿಸಿದರು.

ಈಗ ಎನ್‌ಕೌಂಟರ್‌ ವಿಚಾರವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿರುವವರು ಹಿಂದೆ ವಿಕ್ರಂಗೌಡನನ್ನು ಶರಣಾಗಲು ಮನವಿ ಮಾಡಿದ್ದರು. ಅಲ್ಲಿಗೆ ನಕ್ಸಲೀಯ ಚಟುವಟಿಕೆ ಸರಿಯಿಲ್ಲ ಎಂದು ಅವರೇ ಒಪ್ಪಿಕೊಂಡಂತಾಯಿತು. ಹಲವು ಹಿರಿಯರ ಸಲಹೆಗಳನ್ನು ಧಿಕ್ಕರಿಸಿ ವಿಕ್ರಂಗೌಡ ಚಟುವಟಿಕೆಯಲ್ಲಿ ಮುಂದುವರೆದಿದ್ದರು ಎಂದು ಹೇಳಿದರು.

ತಮ ಜೊತೆ ಅಪಾಯಕಾರಿಯಾದ ಆಯುಧಗಳನ್ನು ಕೊಂಡೊಯ್ಯುತ್ತಿದ್ದರು. ಪೊಲೀಸರು ಶರಣಾಗಲು ಸೂಚಿಸಿದಾಗ ಅವರು ಅದನ್ನು ಧಿಕ್ಕರಿಸಿದ್ದರು. ಹೀಗಾಗಿ ಎನ್‌ಕೌಂಟರ್‌ ಮಾಡಲಾಗಿದೆ. ಇದು ನಕಲಿ ಎನ್‌ಕೌಂಟರ್‌ ಅಲ್ಲ. 20 ವರ್ಷದಿಂದಲೂ ಆತನ ಮೇಲೆ ನಿಗಾ ವಹಿಸಲಾಗಿತ್ತು. ಆತ ಯಾವ ರೀತಿ ಚಟುವಟಿಕೆ ಮಾಡುತ್ತಿದ್ದ. ಜನವಿರೋಧಿ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದ. ಹೀಗಾಗಿ ಆತ ನಕ್ಸಲ್‌ ವರ್ಗೀಕರಣಕ್ಕೆ ಸೇರಿದ್ದ ಎಂದರು.

ನಕ್ಸಲ್‌ ಚಟುವಟಿಕೆಗಳನ್ನು ನಿಗ್ರಹಿಸಲು ಒಡಿಸ್ಸಾ, ಕೇರಳ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಪ್ರತ್ಯೇಕ ಪಡೆಗಳನ್ನು ರಚಿಸಲಾಗಿತ್ತು ಎಂದು ತಿಳಿಸಿದರು.ನಕ್ಸಲೀಯ ಚಟುವಟಿಕೆಯಲ್ಲಿರುವವರನ್ನು ಮುಖ್ಯ ವಾಹಿನಿಗೆ ತರಲು ಪ್ರಯತ್ನಗಳು ಮುಂದುವರೆಯಬೇಕು. ಈ ಹಿಂದೆ ತುಮಕೂರು ಜಿಲ್ಲೆಯಲ್ಲಿ ಪೀಪಲ್ಸ್ ವಾರ್‌ ಗ್ರೂಪ್‌ ಎಂಬ ಗುಂಪು ನಕ್ಸಲ್‌ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿತ್ತು.

ಅನುಕೂಲಸ್ಥರ ಬಳಿ ಹಣ ಕೇಳುವುದು, ಅವರ ಜಮೀನಿಗೆ ಬೇಲಿ ಹಾಕುವುದು, ಅದರಿಂದ ಕಿತ್ತು ಬಡವರಿಗೆ ಕೊಡುವುದನ್ನು ಮಾಡುತ್ತಿದ್ದರು. ಇದು ಮಿತಿ ಮೀರಿದಾಗ ಪೊಲೀಸರಿಗೆ ತಲೆನೋವಾಗಿತ್ತು. ನಾವೆಲ್ಲಾ ಮನವಿ ಮಾಡಿಕೊಂಡಾಗ ನೂರಾರು ಜನ ಬಂದು ತಮ ಶಸಾ್ತ್ರಸ್ತ್ರಗಳನ್ನು ಒಪ್ಪಿಸಿ ಶರಣಾಗತರಾದರು.

ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್‌‍ ಗೆಲುವು ಸಾಧಿಸುವ ಉದ್ದೇಶ ಇದೆ. ಈ ಹಿಂದೆ ಬಸವರಾಜ ಬೊಮಾಯಿ ಶಿಗ್ಗಾವಿಯಲ್ಲಿ 30 ಸಾವಿರ ಮತಗಳ ಅಂತರದಿಂದ ಗೆದ್ದಿದ್ದರು. ಈ ಬಾರಿ ಗೆಲುವಿನ ಅಂತರ 10 ಸಾವಿರ ವ್ಯತ್ಯಾಸವಾಗುವ ನಿರೀಕ್ಷೆಯಿದೆ. ಈ ಅಂದಾಜಿನ ಪ್ರಕಾರ 30 ಸಾವಿರ ಅಂತರದಲ್ಲಿ ಕಾಂಗ್ರೆಸ್‌‍ ಅಭ್ಯರ್ಥಿಯೇ ಗೆಲ್ಲಬಹುದು ಎಂದರು.

ರಾಜ್ಯದಲ್ಲಿ ಬಿಪಿಎಲ್‌ ಕಾರ್ಡ್‌ ರದ್ದು ವಿಚಾರವಾಗಿ ಬಿಜೆಪಿಯವರು ದೊಡ್ಡ ಮಟ್ಟದ ಅಪಪ್ರಚಾರ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರವೇ 5.8 ಕೋಟಿ ಕಾರ್ಡ್‌ಗಳನ್ನು ರದ್ದು ಮಾಡಿದೆ. ಬಿಜೆಪಿಯವರು ಯಾವ ನೈತಿಕತೆಯ ಮೇಲೆ ಮಾತನಾಡುತ್ತಿದ್ದಾರೆ. ಮೊದಲು ಕೇಂದ್ರಸರ್ಕಾರವನ್ನು ಅವರು ಪ್ರಶ್ನೆ ಮಾಡಲಿ ಎಂದು ತಿರುಗೇಟು ನೀಡಿದರು.

ಸರ್ಕಾರಿ ನೌಕರರಿಗೆ, ಆದಾಯ ತೆರಿಗೆ ಪಾವತಿದಾರರಿಗೆ ಬಿಪಿಎಲ್‌ ಕಾರ್ಡ್‌ಗಳನ್ನು ಮುಂದುವರೆಸಬೇಕೇ? ಮಾನದಂಡಗಳನ್ನು ಕೇಂದ್ರ ಸರ್ಕಾರ ಮಾಡಿದೆಯೇ ಹೊರತು ರಾಜ್ಯ ಸರ್ಕಾರವಲ್ಲ. ನಿಯಮಗಳನ್ನು ನಾವು ಪಾಲನೆ ಮಾಡುತ್ತಿದ್ದೇವೆ. ಲೋಪಗಳಾಗಿದ್ದರೆ ಸರಿಪಡಿಸುತ್ತೇವೆ ಎಂದರು.

ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಫಲಿತಾಂಶದ ಬಗ್ಗೆ ಚುನಾವಣೋತ್ತರ ಸಮೀಕ್ಷೆಗಳು ಗೊಂದಲಕಾರಿಯಾಗಿವೆ. ಕೆಲವು ಸಮೀಕ್ಷೆಗಳು ಮಹಾ ವಿಕಾಸ ಅಘಾಡಿಗೆ 160 ಸ್ಥಾನ ಬರುವ ಮುನ್ಸೂಚನೆ ನೀಡಿವೆ. ಇನ್ನೂ ಕೆಲವು ಸಮೀಕ್ಷೆಗಳು ಎನ್‌ಡಿಎ ನೇತೃತ್ವದ ಮಹಾಯುತಿಗೆ ಹೆಚ್ಚಿನ ಸ್ಥಾನ ಕೊಟ್ಟಿದ್ದಾರೆ. ಯಾವುದನ್ನೂ ನಿಖರವಾಗಿ ಹೇಳಲು ಸಾಧ್ಯವಿಲ್ಲ.

ಮಹಾರಾಷ್ಟ್ರ ಸರ್ಕಾರದ ವಿರುದ್ಧ ವ್ಯಾಪಕ ಭ್ರಷ್ಟಾಚಾರದ ಆರೋಪವಿದೆ. ಆಂಬುಲೆನ್‌್ಸ ಖರೀದಿಯಲ್ಲಿ 8 ಸಾವಿರ ಕೋಟಿ ರೂ. ಅವ್ಯವಹಾರವಾಗಿದೆ. ಮಹಾರಾಷ್ಟ್ರಕ್ಕೆ ಬಂದ ಹೂಡಿಕೆದಾರರನ್ನು ಗುಜರಾತ್‌ಗೆ ಕಳುಹಿಸಲಾಗಿದೆ. ರೈತರ ಸಾಲಮನ್ನಾ ಮಾಡಿಲ್ಲ. ಅಂಬೇಡ್ಕರ್‌ ಪ್ರತಿಮೆ ಮಾಡುತ್ತೇವೆ ಎಂದು ಸುಳ್ಳು ಹೇಳಿ ಕಾಲಕಳೆದಿದ್ದಾರೆ. ಈ ರೀತಿಯ ನಾನಾ ಸಮಸ್ಯೆಗಳು ಅಲ್ಲಿವೆ ಎಂದು ಹೇಳಿದರು.

RELATED ARTICLES

Latest News