Wednesday, February 28, 2024
Homeರಾಜ್ಯಪೊಲೀಸರೊಂದಿಗೆ ಜನಸ್ನೇಹಿ ವಾತಾವರಣ ಸೃಷ್ಠಿ : ಪರಮೇಶ್ವರ್

ಪೊಲೀಸರೊಂದಿಗೆ ಜನಸ್ನೇಹಿ ವಾತಾವರಣ ಸೃಷ್ಠಿ : ಪರಮೇಶ್ವರ್

cದೂರುಗಳನ್ನೇ ದಾಖಲಿಸುತ್ತಿರಲಿಲ್ಲ. ಆದರೆ, ತಮ್ಮ ಸರ್ಕಾರ ಜನಸ್ನೇಹಿ ವಾತಾವರಣ ನಿರ್ಮಿಸಿದ್ದು, ಪ್ರತಿಯೊಂದು ದೂರುಗಳೂ ದಾಖಲಾಗುತ್ತಿವೆ. ಹೀಗಾಗಿ ಅಪರಾಧಗಳ ಸಂಖ್ಯೆ ಹೆಚ್ಚು ಎಂದು ಕಂಡುಬರುವಂತಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷಗಳು ಅಪರಾಧಗಳ ಸಂಖ್ಯೆ ಹೆಚ್ಚಾಗಿವೆ ಎಂದು ಬೊಂಬ್ಡ ಹೊಡೆಯುತ್ತಿವೆ. ಆದರೆ, ಇದು ಆಧಾರ ರಹಿತ ಎಂದರು. ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಜನರನ್ನು ನಿರ್ಲಕ್ಷಿಸಲಾಗಿತ್ತು. ಪೊಲೀಸ್ ಠಾಣೆಗೆ ಬಂದು ದೂರು ನೀಡಲು ಸಾರ್ವಜನಿಕರು ಹೆದರುತ್ತಿದ್ದರು. ಒಂದೊಮ್ಮೆ ಠಾಣೆಗೆ ಹೋಗಿ ದೂರು ನೀಡಿದರೂ ಅವು ದಾಖಲಾಗುತ್ತಿರಲಿಲ್ಲ. ಆದರೆ, ನಮ್ಮ ಸರ್ಕಾರ ಸ್ಪಷ್ಟ ನಿಯಮಾವಳಿಗಳನ್ನು ಜಾರಿ ಮಾಡಿದೆ. ಜನರನ್ನು ವಿಶ್ವಾಸದಿಂದ ಕಾಣಬೇಕು. ಪ್ರತಿಯೊಂದು ದೂರನ್ನೂ ತಕ್ಷಣ ದಾಖಲಿಸಿ ಕ್ರಮ ಕೈಗೊಳ್ಳಬೇಕು. ಸೈಬರ್ ಅಪರಾಧಗಳಲ್ಲಿ ಈ ಹಿಂದೆಲ್ಲ ದೂರುಗಳೇ ದಾಖಲಾಗುತ್ತಿರಲಿಲ್ಲ.

ನಾವು ಯಾವುದನ್ನೂ ನಿರ್ಲಕ್ಷಿಸುತ್ತಿಲ್ಲ. ಪ್ರತಿಯೊಂದು ಪ್ರಕರಣದ ದೂರು ಸ್ವೀಕರಿಸುತ್ತೇವೆ. ಅವನ್ನು ದಾಖಲಿಸಿ ನಂತರ ಸಂಬಂಧಿಸಿದ ಠಾಣೆಗಳಿಗೆ ಮುಂದಿನ ಕ್ರಮಕ್ಕಾಗಿ ರವಾನೆ ಮಾಡುತ್ತಿದ್ದೇವೆ. ಹೀಗಾಗಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಿವೆ. ಕೆಳಹಂತದ ಪೆಪೊಲೀಸ್ ಠಾಣೆಗಳಲ್ಲಿ ಜನರಿಗೆ ಸರಿಯಾದ ಸ್ಪಂದನೆ ಸಿಗುತ್ತಿಲ್ಲ ಎಂದು ನಿನ್ನೆ ನಡೆದ ಜನತಾ ದರ್ಶನದಲ್ಲಿ ಹೆಚ್ಚು ದೂರುಗಳು ಕೇಳಿಬಂದ ಬಗ್ಗೆ ಪ್ರತಿಕ್ರಿಯಿಸಿದ ಅವರು, ದೂರುಗಳು ದಾಖಲಾಗುವುದರಿಂದಾಗಿ ಈ ರೀತಿಯ ಚರ್ಚೆಗಳು ಸಹಜ ಎಂದರು.

ಭರ್ತಿ 5 ವರ್ಷಗಳ ಗೃಹಲಕ್ಷ್ಮಿ ಹಣದ ಕಂತನ್ನು ಚಾಮುಂಡೇಶ್ವರಿಗೆ ಸಮರ್ಪಿಸಿದ ಸರ್ಕಾರ

ಭ್ರೂಣಹತ್ಯೆ ಪ್ರಕರಣಗಳ ಬಗ್ಗೆ ತನಿಖೆ ಪ್ರಗತಿಯಲ್ಲಿದೆ. ಅದು ಮುಗಿದ ಬಳಿಕ ಯಾರು ಭಾಗಿಯಾಗಿದ್ದಾರೆ, ಎಷ್ಟು ಕೃತ್ಯಗಳು ನಡೆದಿವೆ ಎಂಬ ಮಾಹಿತಿ ತಿಳಿಸಲಾಗುವುದು. ಸದ್ಯಕ್ಕೆ ಇದೊಂದು ವ್ಯವಸ್ಥಿತ ಜಾಲವಾಗಿ ಕಾರ್ಯನಿರ್ವಹಿಸುತ್ತಿರುವುದು ಕಂಡುಬಂದಿದೆ ಎಂದು ಹೇಳಿದರು.

ಭರ್ತಿ 5 ವರ್ಷಗಳ ಗೃಹಲಕ್ಷ್ಮಿ ಹಣದ ಕಂತನ್ನು ಚಾಮುಂಡೇಶ್ವರಿಗೆ ಸಮರ್ಪಿಸಿದ ಸರ್ಕಾರ

ನಿಗಮ ಮಂಡಳಿಗಳ ನೇಮಕಾತಿಗೆ ಸಂಬಂಧಿಸಿದಂತೆ ಚರ್ಚೆಗಳು ಪ್ರಗತಿಯಲ್ಲಿವೆ. ಪಕ್ಷದ ಹಿರಿಯ ಸಚಿವರ ಅಭಿಪ್ರಾಯ ಕೇಳಿದರೆ ಚೆನ್ನಾಗಿತ್ತು. ನಾನು ಎಂಟು ವರ್ಷ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಇಂತಹ ಸಂದರ್ಭದಲ್ಲಿ ಯಾರಿಗೆಲ್ಲ ಅವಕಾಶ ಕೊಟ್ಟರೆ ಪಕ್ಷ ಸಂಘಟನೆಗೆ ಸಹಾಯವಾಗಲಿದೆ ಎಂಬ ಮಾಹಿತಿ ತಮಗಿದೆ. ರಾಜ್ಯದ ಪ್ರಮುಖ ನಾಯಕರು ಹೈಕಮಾಂಡ್ ನಾಯಕರ ಒಪ್ಪಿಗೆ ಪಡೆದು ನೇಮಕಾತಿ ಮಾಡುತ್ತಿದ್ದಾರೆ ಎಂದು ಹೇಳಿದರು.

ತೆಲಂಗಾಣ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಪಂಚಖಾತ್ರಿಗಳ ಜಾಹಿರಾತು ನೀಡಿರುವ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

RELATED ARTICLES

Latest News