Thursday, May 2, 2024
Homeಕ್ರೀಡಾ ಸುದ್ದಿಆರ್​ಸಿಬಿ ಕಪ್ ಗೆಲ್ಲುತ್ತಿದ್ದಂತೆ ವೈರಲ್ ಆದ ಪವರ್ ಸ್ಟಾರ್ ಪುನೀತ್ ಮಾತು

ಆರ್​ಸಿಬಿ ಕಪ್ ಗೆಲ್ಲುತ್ತಿದ್ದಂತೆ ವೈರಲ್ ಆದ ಪವರ್ ಸ್ಟಾರ್ ಪುನೀತ್ ಮಾತು

ಬೆಂಗಳೂರು, ಮಾ.18- ಹದಿನಾರು ವರ್ಷಗಳ ವನವಾಸದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೊನೆಗೂ ಕಪ್ ನಮ್ದೇ ಎಂಬ ಮಾತಿಗಿಂತ ಕಪ್ಪು ನಮ್ದು ಎಂಬ ಮಾತನ್ನು ಆಡುತ್ತಿದ್ದಾರೆ. ಈ ನಡುವೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಜನ್ಮದಿನದಿಂದಲೇ ಆರ್‍ಸಿಬಿ ಆಟಗಾರ್ತಿಯರು ಕಪ್ ಗೆದ್ದಿರುವುದು ವಿಶೇಷವಾಗಿತ್ತು. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಪುನೀತ್ ಆಡಿದ ಮಾತು ವೈರಲ್ ಆಗಿದೆ.

ಮಾರ್ಚ್ 17 ರಂದು ನವದೆಹಲಿಯ ಅರುಣ್‍ಜೇಟ್ಲಿ ಕ್ರೀಡಾಂಗಣದಲ್ಲಿ ಆರ್​ಸಿಬಿ ವನಿತೆಯರು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 8 ವಿಕೆಟ್‍ಗಳ ರೋಚಕ ಗೆಲುವು ಸಾಧಿಸಿ ಡಬ್ಲ್ಯುಪಿಎಲ್ ಟ್ರೋಫಿಗೆ ಮುತ್ತಿಕ್ಕಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಟನೆಯ ಜಾಕಿ ಚಿತ್ರದ ಒಂದು ಗೀತೆಯಲ್ಲಿ ಹೆಣ್ಮಕ್ಳೇ ಸ್ಟ್ರಾಂಗು ಗುರು ಎಂಬ ಸಾಲಿದ್ದು , ಈ ಮಾತು ಆರ್‍ಸಿಬಿ ಆಟಗಾರ್ತಿಯರಿಗೇ ಸೂಕ್ತವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮಂದಿ ಕಾಮೆಂಟ್ ಮಾಡಿದ್ದಾರೆ.

ಇನ್ನು ಕರುನಾಡಿನ ಕಣ್ಮಣಿ ಪುನೀತ್ ರಾಜ್‍ಕುಮಾರ್ ನಟನೆಯ ಯುವ ಚಿತ್ರದಲ್ಲಿ ಹುಡುಗರಲ್ಲಿ ರೋಷ ಹುಟ್ಟಿಸಬೇಕಾದರೆ ಅವರನ್ನು ಕಿಚಾಯಿಸಬೇಕು. ಅಲ್ಲದೆ ಕಪ್ ಅನ್ನು ಹುಡುಗರೇ ಗೆಲ್ಲಲಿ ಅಥವಾ ಹುಡುಗಿಯರೇ ಗೆಲ್ಲಲಿ ಕಪ್ ಗೆಲ್ಲುವುದೇ ಮುಖ್ಯ ತಾನೇ ಎಂಬ ಪವರ್‍ಫುಲ್ ಡೈಲಾಗ್ ಹೊಡೆದಿದ್ದರು. ಈ ಡೈಲಾಗ್ ಕೂಡ ಈಗ ಸಾಕಷ್ಟು ವೈರಲ್ ಆಗಿದ್ದು , ಡಬ್ಲ್ಯುಪಿಎಲ್‍ನಲ್ಲಿ ಸ್ಮೃತಿ ಮಂಧಾನಾ ಪಡೆ ಕಪ್ ಗೆದ್ದ ರೀತಿಯಂತೆ ಐಪಿಎಲ್‍ನಲ್ಲಿ ಫಾಫ್ ಡುಪ್ಲೆಸಿಸ್ ಸಾರಥ್ಯದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಟ್ರೋಫಿ ಗೆಲ್ಲಲಿ ಎಂದು ಕೋಟ್ಯಾನುಕೋಟಿ ಅಭಿಮಾನಿಗಳು ಹಂಬಲಿಸುತ್ತಿದ್ದಾರೆ.

ಅಂದಹಾಗೆ 2ನೇ ಆವೃತ್ತಿಯ ಡಬ್ಲ್ಯುಪಿಎಲ್ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಶೆಫಾಲಿ ವರ್ಮಾ (44 ರನ್) ಸ್ಪೋಟಕ ಆಟದ ನೆರವಿದ್ದರೂ ಕನ್ನಡತಿ ಶ್ರೇಯಾಂಕಾ ಪಾಟೀಲ್ (12ಕ್ಕೆ 4), ಸೋಫಿ ಮೊಲಿನಾಕ್ಸ್ (3 ವಿಕೆಟ್) ಮತ್ತು ಶೋಭನಾ ಆಶಾ(2 ವಿಕೆಟ್) ಅವರ ಸ್ಪಿನ್ ಚಮತ್ಕಾರದಿಂದ 113 ರನ್‍ಗಳಿಗೆ ನಿಯಂತ್ರಿಸಿದರು.

ನಂತರ ಬ್ಯಾಟ್ ಮಾಡಿದ ಆರ್‍ಸಿಬಿ ನಾಯಕಿ ಸ್ಮೃತಿ ಮಂಧಾನಾ (31 ರನ್), ಸೋಫಿ ಡಿವೈನ್ (32 ರನ್) ಹಾಗೂ ಎಲೀಸ್ ಪೆರಿ (ಅಜೇಯ 35) ರನ್‍ಗಳ ನೆರವಿನಿಂದ 19.3 ಓವರ್‍ಗಳಲ್ಲೇ 135 ರನ್ ಗಳಿಸಿ ಚಾಂಪಿಯನ್‍ಪಟ್ಟವನ್ನು ಮುಡಿಗೇರಿಸಿಕೊಂಡಿತು. ಆರ್‍ಸಿಬಿಯ ಎಲಿಸ್ ಪೆರಿ ಆರೆಂಜ್ ಕ್ಯಾಪ್ , ಶ್ರೇಯಾಂಕ ಪಾಟೀಲ್ ಪರ್ಪಲ್ ಕ್ಯಾಪ್ ಗೆದ್ದರೆ, ಫೈನಲ್ ಪಂದ್ಯದಲ್ಲಿ ಮನಮೋಹಕ ಬೌಲಿಂಗ್ ಪ್ರದರ್ಶನ ತೋರಿಸಿದ ಸೋಫಿ ಮೊಲಿನಾಕ್ಸ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.

RELATED ARTICLES

Latest News