Friday, May 3, 2024
Homeರಾಷ್ಟ್ರೀಯಉಚಿತ ಕೊಡುಗೆಗಳ ಎಫೆಕ್ಟ್, ಪಂಜಾಬ್ ದಿವಾಳಿ

ಉಚಿತ ಕೊಡುಗೆಗಳ ಎಫೆಕ್ಟ್, ಪಂಜಾಬ್ ದಿವಾಳಿ

ಚಂಡೀಗಢ,ಅ.5- ಪಂಜಾಬ್ ಸರ್ಕಾರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ, ಸಾಲದ ಭಾರ 3.27 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದ್ದು ಈಗ ಕೇಂದ್ರದ ಮೊರೆ ಹೋಗಿದೆ.ಈ ಹಿಂದಿನ ಸರ್ಕಾರಗಳು ಹಾಗೂ ಈಗಿನ ಆಮ್ ಆದ್ಮಿ ಪಕ್ಷದ ಸರ್ಕಾರದ ಉಚಿತ ಕೊಡುಗೆಗಳೇ ಸಾಲ ಭಾರಿ ಪ್ರಮಾಣದಲ್ಲಿ ಏರಲು ಕಾರಣ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರಿಗೆ ಪತ್ರ ಬರೆದಿರುವ ಮುಖ್ಯಮಂತ್ರಿ ಭಗವಂತ ಮಾನ್ ಮುಂದಿನ 5 ವರ್ಷಗಳ ಕಾಲ ಸಾಲ ಮರುಪಾವತಿ ಪ್ರಕ್ರಿಯೆ ಸ್ಥಗಿತಗೊಳಿಸಲು ಕೇಂದ್ರ ಸರ್ಕಾರದ ಅನುಮತಿ ಪಡೆಯುವಲ್ಲಿ ಸಹಾಯ ಮಾಡಬೇಕು ಎಂದು ಕೋರಿದ್ದಾರೆ. ಕೂಡಲೆ ನೆರವಿಗೆ ಬರಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಾವು ಕೇಳಬೇಕು ಸದ್ಯದ ಪರಿಸ್ಥಿತಿ ಮನವರಿಕೆ ಮಾಡಲು ನಾನು ನಿಮ್ಮನ್ನು ಒತ್ತಾಯಿಸುತ್ತೇನೆ ಎಂದು ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಎನ್‍ಐಎ ಅಧಿಕಾರಿಗಳಿಗೆ ಖಲಿಸ್ತಾನ್ ಉಗ್ರರಿಂದ ಬೆದರಿಕೆ

ಮೂಲಗಳ ಪ್ರಕಾರ ಪಂಜಾಬ್ ವಾರ್ಷಿಕ ಬಜೆಟ್‍ನ ಶೇ.20ರಷ್ಟು ಹಣವನ್ನು ಸಾಲ ಮರುಪಾವತಿಗೆ ಖರ್ಚು ಮಾಡುತ್ತದೆ. ಕಳೆದ ಹಣಕಾಸು ವರ್ಷದ ಅಂತ್ಯಕ್ಕೆ ಪಂಜಾಬ್‍ನ ಸಾಲ 3.12 ಲಕ್ಷ ಕೋಟಿ ರು. ಇತ್ತು. ಅದು ಈಗ 3.27 ಲಕ್ಷ ಕೋಟಿ ರು.ಗೆ ಏರಿದೆ.

ಸಾಲ ಕಟ್ಟಲೆಂದು ಕಳೆದ ಆರ್ಥಿಕ ವರ್ಷದಲ್ಲಿ 15,946 ಕೋಟಿ ರು. ಅಸಲು ಮತ್ತು 20,100 ಕೋಟಿ ರು. ಬಡ್ಡಿ ಕಟ್ಟಲಾಗಿದೆ. 2023-24 ರ ಆರ್ಥಿಕ ವರ್ಷದಲ್ಲಿ, ಸರ್ಕಾರವು ತನ್ನ ಬಜೆಟ್ ಅಂದಾಜಿನ ಪ್ರಕಾರ, ಅಸಲು 16,626 ಕೋಟಿ ರು. ಮತ್ತು ಬಡ್ಡಿಯಾಗಿ 22,000 ಕೋಟಿ ರು. ಪಾವತಿಸಬೇಕಾಗುತ್ತದೆ. ಇದೇ ಪರಿಸ್ಥಿತಿ ಮುಂದುವರಿದೆ 2 ವರ್ಷದಲ್ಲಿ ಸಾಲ 4 ಲಕ್ಷ ಕೋಟಿ ರು.ಗೆ ಏರಬಹುದು ಎನ್ನಲಾಗಿದೆ.ರಾಜ್ಯ ಸರ್ಕಾರದ ಪರಿಸ್ಥಿತಿ ಎಷ್ಟು ದಯನೀಯವಾಗಿದೆ ಎಂದರೆ ಸಾಲದ ಹಣ ಕಟ್ಟಲು ಬೇರೆ ಸಂಸ್ಥೆಗಳಿಂದ ಸಾಲ ಪಡೆಯುತ್ತಿದೆ.

ಅ.11ರಿಂದ ಕಿತ್ತೂರು ಕರ್ನಾಟಕ ಭಾಗದಲ್ಲಿ 3 ದಿನ ಜೆಡಿಎಸ್‍ನ ಕೋರ್ ಕಮಿಟಿ ಪ್ರವಾಸ

ಬಿಜೆಪಿ-ಅಕಾಲಿದಳ 2017ರಲ್ಲಿ ಅಧಿಕಾರದಿಂದ ಕೆಳಗಿಳಿದಾಗ 2.08 ಲಕ್ಷ ಕೋಟಿಗೆ ತಲುಪಿತ್ತು ನಂತರದ ಕಾಂಗ್ರೆಸ್ ಹಾಗೂ ಈಗಿನ ಆಪ್ ಆಳ್ವಿಕೆಗಳು ಉಚಿತ ಕೊಡುಗೆ ಸಾಲವನ್ನು 3.27 ಲಕ್ಷ ಕೋಟಿ ರು.ಗೆ ಏರಿಸಿವೆ. ಸದ್ಯ ಉಚಿತ ಕೊಡುಗೆ ನಿಲ್ಲಿಸುವಂತೆ ಆರ್ಥಿಕ ವಲಯದ ಅಧಿಕಾರಿಗಳು ಸಿಎಂಗೆ ಮನವಿ ಮಾಡಿದ್ದಾರೆ ಇದರ ಬೆನ್ನಲೇ ಕಡಿತ ಪ್ರಕ್ರಿಯೆ ಶುರುವಾಗಿದೆ,

RELATED ARTICLES

Latest News