ಬೆಂಗಳೂರು,ಮೇ 15– ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದೂ ವಿರೋಧಿ ಹಾಗೂ ರಾಷ್ಟ್ರ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ. ಆದರೆ, ಅವರ ರಾಷ್ಟ್ರ ವಿರೋಧಿ ಮಾನಸಿಕತೆ ಇಷ್ಟಪಡದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಮ ಭಾರತೀಯ ಸೇನೆಗೆ ಬೆಂಬಲಿಸಿ ಮಾತಾಡಿದ್ದಾರೆ. ಅವರ ನಡೆಗೆ ಅಭಿನಂದನೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ರಾಧ ಮೋಹನ್ ಆಗರ್ ವಾಲ್ ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಆಮಾಯಕರ ಮೇಲೆ ರಕ್ತದೋಕುಳಿ ಹರಿಸಿದ್ದ ಉಗ್ರರಿಗೆ ತಕ್ಕ ಪಾಠ ಕಲಿಸುವುದು ಭಾರತೀಯ ಸೇನಾ ಪಡೆಗಳು ಪ್ರಮುಖ ಗುರಿಯಾಗಿತ್ತು. ಇದರ ಉದ್ದೇಶ ಈಡೇರಿದೆ. ಆತಂಕವಾದಿಗಳಿಗೆ ಶಿಕ್ಷೆ ಕೊಡುವುದರ ಜೊತೆಗೆ ಖಡಕ್ ಸಂದೇಶ ನೀಡುವುದು ನಮ ಉದ್ದೇಶವಾಗಿತ್ತು ಎಂದು ಹೇಳಿದರು.
ಪಾಕಿಸ್ತಾನ ಮೇ 9 ರಂದು ಅಮೇರಿಕಾದೊಂದಿಗೆ ಬೇಡಿಕೊಳ್ಳುತ್ತಿತ್ತು ಎಂದರೆ ಅಂದೇ ಕದನ ವಿರಾಮ ಜಾರಿಯಾಗಿತ್ತು. ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಮಾತನಾಡುವ ಚಾಳಿ, ಹಾಗಾಗಿ ಏನೇನೋ ಮಾತನಾಡುತ್ತಾರೆ. ಚಲಿಸುತ್ತಿರುವ ಟ್ರೈನ್ ನೋಡಿ, ಟ್ರೈನ್ ಹೋಗುತ್ತಿದೆ ಎಂದು ಹೇಳಿದಂತಾಗಿದೆ ಟ್ರಂಪ್ ಧೋರಣೆ. ಕದನ ವಿರಾಮ ನಿರ್ಧಾರದ ನಂತರ ಟ್ರಂಪ್ ಈ ಮಾತನ್ನು ಹೇಳಿದ್ದಾರೆ. ಕದನ ವಿರಾಮದ ಬಗ್ಗೆ ಮೊದಲು ನಮ ಡಿಜಿಎಂಒ ಅವರನ್ನು ಸಂಪರ್ಕಿಸಿದ್ದು ಪಾಕ್ ಡಿಜಿಎಂಒ. ಎರಡು ಸಲ ಅವರು ಸಂಪರ್ಕಿಸಿ ಕದನ ವಿರಾಮಕ್ಕೆ ಅಂಗಲಾಚಿದರು. ಕದನ ವಿರಾಮದ ಬಗ್ಗೆ ಪ್ರಧಾನಿಯವರು ಈಗಾಗಲೇ ಸ್ಪಷ್ಟನೆ ಕೊಟ್ಟಿದ್ದಾರೆ. ಇದರ ಬಗ್ಗೆ ಹೆಚ್ಚಿನ ಚರ್ಚೆ ಬೇಡ ಎಂದು ಮನವಿ ಮಾಡಿದರು.
ಇದು ಕದನ ವಿರಾಮ ಅಷ್ಟೇ, ಯುದ್ಧ ಜಾರಿಯಲ್ಲಿರುತ್ತದೆ. ಪಾಕ್ ಮತ್ತೆ ದಾಳಿ ನಡೆಸಿದರೆ ಯುದ್ಧ ಮುಂದುವರೆಯುತ್ತದೆ. ಮೋದಿಯವರ ನೇತೃತ್ವದಲ್ಲಿ ಭಾರತೀನೆ ಸೇನೆ ಎಲ್ಲ ಯುದ್ಧ ನಿಯಮ ಪಾಲಿಸಿ ಪ್ರತೀಕಾರ ತೀರಿಸಿದ್ದಾರೆ. ಉಗ್ರರ ನೆಲೆಗಳ ಮೇಲೆ ನಮ ಸೇನೆ ದಾಳಿ ಮಾಡಿ ಧ್ವಂಸ ಮಾಡಿದ್ದಾರೆ. ಪಾಕಿಸ್ತಾನ ಮರಳಿ ದಾಳಿ ಮಾಡಲು ವಿಫಲ ಯತ್ನ ನಡೆಸಿತು. ನಮ ಸೇನಾ ಪಡೆಗಳು ಅವರ ಎಲ್ಲ ದಾಳಿ ವಿಫಲಗೊಳಿಸಿದ್ದಾರೆ. ನಮ ಒಬ್ಬ ಸೈನಿಕ ಕೂಡಾ ಪಾಕಿ ದಾಳಿಯಲ್ಲಿ ಸಾಯಲಿಲ್ಲ. ಆದರೆ ಅವರ ಕಡೆ ಸತ್ತವರು ಹಲವರು ಉಗ್ರರು ಎಂದು ತಿಳಿಸಿದರು.
ಪಾಕ್‌ನ 11 ವಾಯುನೆಲೆಗಳ ಮೇಲೂ ನಮವರು ದಾಳಿ ಮಾಡಿದ್ದಾರೆ. ಉಗ್ರರ ಹೊರತಾಗಿ ಪಾಕಿಸ್ತಾನದ ಸೈನಿಕರು ಸಾಯಲಿಲ್ಲ, ಅವರ ನಾಗರಿಕರಿಗೂ ನಾವು ತೊಂದರೆ ಮಾಡಲಿಲ್ಲ. ಕದನ ವಿರಾಮವನ್ನು ಸಾಕಷ್ಟು ಬಾರಿ ಪಾಕ್ ಉಲ್ಲಂಘಿಸಿತು. ಭಾರತ ಇಡೀ ಜಗತ್ತಿಗೆ ತನ್ನ ಏರ್ ಡಿಫೆನ್‌್ಸ ವ್ಯವಸ್ಥೆಯ ಶಕ್ತಿ ತೋರಿಸಿದೆ.
ಮಹಾತಗಾಂಧಿಯವರ ಅಹಿಂಸಾ ಆಂದೋಲನ ಯುದ್ಧ ಕಾಲದಲ್ಲಿ ಹೇಗಿರಬೇಕು ಎನ್ನುವುದು ನಮಗೆ ಗೊತ್ತು. ಅವರ ನಾಗರೀಕರು ನಮ ದಾಳಿಯಿಂದ ಸತ್ತಿಲ್ಲ. ಈ ಮೂಲಕ ಯುದ್ಧ ಸಂದರ್ಭದಲ್ಲೂ ಭಾರತ ಅಹಿಂಸೆ ಪಾಲಿಸಿದೆ ಎಂದು ಸೇನಾ ಪಡೆಗಳ ಕಾರ್ಯವನ್ನು ಸಮರ್ಥನೆ ಮಾಡಿಕೊಂಡರು.
ಸಿಂಧೂ ನದಿ ಒಪ್ಪಂದ ನಡೆದಿದ್ದು 1960 ರಲ್ಲಿ. ಈ ಹಿಂದೆ ಪಾಕಿಸ್ತಾನದ ಜೊತೆಗೆ ಮಾಡಿಕೊಂಡ ಸಿಂಧೂ ಒಪ್ಪಂದ ಅಕ್ರಮವಾಗಿತ್ತು. ಕಾಂಗ್ರೆಸ್ ಅವಧಿಯಲ್ಲಿ ಶೇ. 90 ನೀರಿನ ಹಕ್ಕು ಪಾಕ್‌ಗೆ ಕೊಟ್ಟಿತ್ತು. ಜತೆಗೆ ಪಾಕಿಸ್ತಾನಕ್ಕೆ ಅವರ ದೇಶದಲ್ಲಿ ನಾಲೆಗಳನ್ನು ತೋಡಲು ಹಣ ನೀಡುತ್ತಿತ್ತು. ಇದು ಭಾರತೀಯರ ಹಿತಾಸಕ್ತಿಗೆ ವಿರುದ್ಧದ ಒಪ್ಪಂದವಾಗಿದೆ. ಇದು ಯಾವ ರೀತಿಯ ಒಪ್ಪಂದ ಆಗಿತ್ತು ಹೇಳಿ? ಎಂದು ಅವರು ಪ್ರಶ್ನಿಸಿದರು.
ಮೇ 22ರಂದು ಪಹಲ್ಗಾಮ್‌ನಲ್ಲಿ ಹತ್ಯಾಕಾಂಡ ನಡೆಯಿತು. ಇದರಲ್ಲಿ 26 ಜನ ಸಾವನ್ನಪ್ಪಿದ್ದರು. ಆ ಪೈಕಿ ಇಬ್ಬರು ಕರ್ನಾಟಕದರು. ಮೃತರಿಗೆ ನಾನು ಶ್ರದ್ಧಾಂಜಲಿ ಕೋರುವೆ ಎಂದರು.
ಮಧ್ಯಪ್ರದೇಶದ ಬಿಜೆಪಿ ಸಚಿವ ವಿಜಯ್ ಶಾ ವಿವಾದಾತಕ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ರಾಧಾ ಮೋಹನ ದಾಸ್ ಅಗರವಾಲ್, ಬಿಜೆಪಿ ಎಂದಿಗೂ ವಿಜಯ್ ಶಾ ಹೇಳಿಕೆ ಒಪ್ಪುವುದಿಲ್ಲ. ಅಲ್ಲದೆ ಇದನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದೂ ಇಲ್ಲ. ಆದರೆ ಈಗಾಗಲೇ ಅವರು ತಮ ಹೇಳಿಕೆಗೆ ಕ್ಷಮೆ ಕೋರಿದ್ದಾರೆ. ಹೇಳಿಕೆಯನ್ನಷ್ಟೇ ಆಧರಿಸಿ ರಾಜೀನಾಮೆ ಪಡೆಯುವ ಹಾಗಿದ್ದರೆ ಕಾಂಗ್ರೆಸ್‌ನಲ್ಲಿ ಒಂದಿಬ್ಬರು ಬಿಟ್ಟು ಯಾರೂ ಸ್ಥಾನಗಳಲ್ಲಿ ಇರುತ್ತಿರಲಿಲ್ಲ ಎಂದು ತಿರುಗೇಟು ಕೊಟ್ಟರು.
ಇದಕ್ಕೂ ಮುನ್ನ ಆಪರೇಷನ್ ಸಿಂಧೂರ್ ಯಶಸ್ವಿಯಾದ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಬೆಂಬಲಿಸಿ ಬಿಜೆಪಿ ತಿರಂಗ ಯಾತ್ರೆಯನ್ನು ಹಮಿಕೊಳ್ಳಲಾಗಿತ್ತು.ಮಲ್ಲೇಶ್ವರಂನ ಶಿರೂರೂ ಪಾರ್ಕ್‌ನಿಂದ ಆರಂಭವಾದ ಯಾತ್ರೆಯಲ್ಲಿ ಕಾಲೇಜು ವಿದ್ಯಾರ್ಥಿಗಳು, ಮಾಜಿ ಸೈನಿಕರು, ಸಾರ್ವಜನಿಕರು, ವಿವಿಧ ಸಂಘಟನೆಯವರು ಭಾಗಿಯಾಗಿದ್ದರು.
ಆಪರೇಷನ್ ಸಿಂಧೂರ್ ಎಂಬ ಟೋಪಿ ಧರಿಸಿ, ರಾಷ್ಟ್ರಧ್ವಜ ಹಿಡಿದು ವಂದೇ ಮಾತರಂ ಗೀತೆಯ ಮೂಲಕ ತಿರಂಗ ಯಾತ್ರೆ ನಡೆಸಿದರು. ಕಾರ್ಯಕ್ರಮದಲ್ಲಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಶಾಸಕ ಅಶ್ವತ್‌್ಥ ನಾರಾಯಣ್, ಪರಿಷತ್ ಸದಸ್ಯರಾದ ಎನ್ .ರವಿಕುಮಾರ್, ಸಿ.ಟಿ.ರವಿ, ಶಾಸಕರಾದ ಗೋಪಾಲಯ್ಯ, ಭೈರತಿ ಬಸವರಾಜ್, ಮುನಿರತ್ನ ಸೇರಿ ಹಲವು ಗಣ್ಯರು ಭಾಗಿಯಾಗಿದ್ದರು.