Monday, December 2, 2024
Homeಕ್ರೀಡಾ ಸುದ್ದಿ | Sportsಸೋಲಿನೊಂದಿಗೆ ಟೆನ್ನಿಸ್ ಅಂಗಳಕ್ಕೆ ವಿದಾಯ ಘೋಷಿಸಿದ ರಾಫೆಲ್ ನಡಾಲ್

ಸೋಲಿನೊಂದಿಗೆ ಟೆನ್ನಿಸ್ ಅಂಗಳಕ್ಕೆ ವಿದಾಯ ಘೋಷಿಸಿದ ರಾಫೆಲ್ ನಡಾಲ್

Rafael Nadal to retire after Davis Cup finals

ನವದೆಹಲಿ, ನ. 20- ಹದಿನಾಲ್ಕು ಫ್ರೆಂಚ್ ಓಪನ್ ಸೇರಿ ದಂತೆ 22 ಗ್ರ್ಯಾಂಡ್ ಸ್ಲಮ್ ಪ್ರಶಸ್ತಿ ಜಯಿಸಿರುವ ಟೆನ್ನಿಸ್ ಲೋಕದ ದಿಗ್ಗಜ ರಾಫೆಲ್ ನಡಾಲ್ ಅವರು ಸೋಲಿನೊಂದಿಗೆ ಭಾರವಾದ ಹೃದಯದೊಂದಿಗೆ ಟೆನ್ನಿಸ್ ಜೀವನಕ್ಕೆ ವಿದಾಯ ಘೋಷಿಸಿದ್ದಾರೆ. ಡೇವಿಸ್ಕಪ್ನ ನಂತರ ತನ್ನ ವೃತ್ತಿಜೀವನಕ್ಕೆ ಅಂತ್ಯ ಹೇಳುವುದಾಗಿ ಘೋಷಿಸಿದ್ದ ಸ್ಪೇನ್ನ ಆಟಗಾರ ನಿನ್ನೆ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನೆದರ್ಲ್ಯಾಂಡ್ ಬೊಟಿಕ್ ವ್ಯಾನ್ ಡಿ ವಿರುದ್ಧ ನಡೆದ ಕ್ವಾರ್ಟರ್ ಫೈನಲ್ನಲ್ಲಿ ಸೋಲು ಕಂಡಿದ್ದಾರೆ.

ವೃತ್ತಿ ಜೀವನದಿಂದ ನನೆ ನೆಮದಿ ಸಿಕ್ಕಿದೆ
ಮಗಳ(ಸ್ಪೇನ್),ನ. 20- ಇಲ್ಲಿನ ಮಾರ್ಟಿನ್ ಕಪೆರಾ ಅರೆನಾ ಟೆನ್ನಿಸ್ ಅಂಗಳದಲ್ಲಿ ನೆರೆದಿದ್ದ 10 ಸಾವಿರ ಅಭಿಮಾನಿಗಳು ತಮ ಮೆಚ್ಚಿನ ಟೆನ್ನಿಸ್ ದೊರೆ ರಾಫೆಲ್ ನಡಾಲ್ ಅವರು ಗೆಲುವು ಸಾಧಿಸುತ್ತಾರೆ ಎಂದು ಜಾತಕಪಕ್ಷಿಯಂತೆ ಕಾದಿದ್ದರು. ಆದರೆ ರಫಾ ಸೋಲು ಕಂಡ ಹತಾಶೆಯಲ್ಲಿದ್ದ ಅಭಿಮಾನಿಗಳಿಗೆ ನಡಾಲ್ ಕೃತಜ್ಞತೆ ಸಲ್ಲಿಸಿ ತಮ ಪ್ರೇಮ ವ್ಯಕ್ತಪಡಿಸಿ ದ್ದಾರೆ.

`ನಾನು ಶಾಂತ ಮನಸ್ಸಿನಿಂದಲೇ ಟೆನ್ನಿಸ್ ಲೋಕಕ್ಕೆ ವಿದಾಯ ಹೇಳುತ್ತಿ ದ್ದೇನೆ. ಈ ಲೋಕದಲ್ಲಿ ನಾನು ಸಾಕಷ್ಟು ಅವಿಸರಣೀಯ ದಾಖಲೆ ನಿರ್ಮಿಸಿದ್ದೇನೆ. ಒಬ್ಬ ಆಟಗಾರನಾಗಿ ಮಾತ್ರವಲ್ಲದೆ ಒಬ್ಬ ವ್ಯಕ್ತಿಯಾಗಿಯೂ ಅನೇಕ ದಾಖಲೆ ನಿರ್ಮಿಸಿದ್ದೇನೆ’ ಎಂದರು.

ನಾನು ಗೆದ್ದ ಪ್ರಶಸ್ತಿಗಳು ಕೇವಲ ಅಂಕಿ ಅಂಶಗಳಲ್ಲಿ ಮಾತ್ರ ಉಳಿಯುತ್ತದೆ. ಆದರೆ ಅದಕ್ಕಾಗಿ ನಾನು ಪಟ್ಟ ಶ್ರಮವನ್ನು ಒಬ್ಬ ವ್ಯಕ್ತಿಯಾಗಿ ಆನಂದಿಸುತ್ತೇನೆ. ನಾನು ನನ್ನ ಬಾಲ್ಯದಲ್ಲಿ ಟೆನ್ನಿಸ್ ಲೋಕದಲ್ಲಿ ಏನಾದರೂ ಸಾಧಿಸಬೇಕೆಂಬ ಗುರಿಯನ್ನು ಹೊಂದಿದ್ದೆ. ಆದರೆ ಇಂದು ನಾನು ಬಯಸಿದ್ದಕ್ಕಿಂತ ಹೆಚ್ಚಿದ್ದನ್ನು ಸಾಧಿಸಿದ್ದೇನೆ ಎಂಬ ತೃಪ್ತಿ ನನಗಿದೆ' ಎಂದು ಸ್ಪೇನ್ ಆಟಗಾರ ಹೇಳಿದ್ದಾರೆ.ನನ್ನ ಬಾಲ್ಯದಲ್ಲಿ ನನಗೆ ನನ್ನ ಚಿಕ್ಕಪ್ಪನೇ ತರಬೇತುದಾರನಾಗಿ ಸಿಕ್ಕಿದ್ದು ನಿಜಕ್ಕೂ ತುಂಬಾ ಅದೃಷ್ಟದ ಸಂಗತಿ. ನನ್ನ ಕುಟುಂಬವೂ ಕೂಡ ಪ್ರತಿ ಕ್ಷಣವೂ ನನ್ನನ್ನು ಬೆಂಬಲಿಸುವ ಮೂಲಕ ಸಹಕಾರ ನೀಡುತ್ತಾ ಬಂದಿದ್ದಾರೆ’ ಎಂದು ನಡಾಲ್ ಹೇಳಿದ್ದಾರೆ.

ರಾಫೆಲ್ ನಡಾಲ್ನ ಸಾಧನೆಗಳು :
ನವದೆಹಲಿ, ನ.20- ಟೆನ್ನಿಸ್ ಲೋಕದ ದಿಗ್ಗಜರಾದ ರೋಜರ್ ಫೆಡರರ್, ಜೊಕೊವಿಚ್ರಂತಹ ಘಟಾನುಘಟಿ ಟೆನ್ನಿಸ್ ದಿಗ್ಗಜರ ನಡುವೆಯೂ ಅರಳಿದ ಪ್ರತಿಭೆಯಾದ ರಾಫೆಲ್ ನಡಾಲ್ ಅವರು ಈ ದಿಗ್ಗಜರ ಎದುರು ಹಲವು ಬಾರಿ ಗೆಲುವು ಸಾಧಿಸಿರುವುದಲ್ಲದೆ ತಮ 20 ವರ್ಷಗಳ ಟೆನ್ನಿಸ್ ಪಯಣದಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ.

2008, 2010, 2016ರಲ್ಲಿ ನಡೆದಿದ್ದ ಒಲಿಂಪಿಕ್‌್ಸನಲ್ಲಿ ವೈಯಕ್ತಿಕ ಹಾಗೂ ಮಿಕ್‌್ಸ್ಡ ವಿಭಾಗದಲ್ಲಿ ಚಿನ್ನದ ಪದಕ ಗೆದ್ದು ಸಂಭ್ರಮಿಸಿರುವುದಲ್ಲದೆ, 2010 ರಿಂದ 2014ರವರೆಗೆ 15 ಬಾರಿ ಆಸ್ಟ್ರೇಲಿಯಾ ಓಪನ್ನ ಸೆಮಿಫೈನಲ್ಗೆ ಲಗ್ಗೆ ಇಟ್ಟಿರುವುದಲ್ಲದೆ, 5 ಬಾರಿ ಸತತವಾಗಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ಫ್ರೆಂಚ್ ಓಪನ್ನಲ್ಲಿ 112 ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ತಮ ಪ್ರಾಬಲ್ಯ ಮೆರೆದಿದ್ದಾರೆ. ಅಲ್ಲದೆ 2010-15ರ ನಡುವೆ ಸತತವಾಗಿ 39 ಪಂದ್ಯಗಳಲ್ಲಿ ಜಯ ಸಾಧಿಸಿರುವುದು ಕೂಡ ನಡಾಲ್ ಅವರು ನಿರ್ಮಿಸಿರುವ ದಾಖಲೆಯಲ್ಲಿ ಸೇರಿದೆ.

ಸಂದ ಪ್ರಶಸ್ತಿಗಳು:

  • 5 ಬಾರಿ ಐಟಿಎಫ್ ವಿಶ್ವ ಚಾಂಪಿಯನ್- 2008, 2010, 2019, 2022.
  • ಡೇವಿಸ್ ಕಪ್ನ ಬಹುಮೌಲ್ಯ ಆಟಗಾರ ಪ್ರಶಸ್ತಿ- 2019
  • ಎಟಿಪಿ ಉದಯೋನುಖ ಆಟಗಾರ- 2003
  • ಎಟಿಪಿ ಅಭಿಮಾನಿಗಳ ನೆಚ್ಚಿನ ಪ್ರಶಸ್ತಿ- 2022
  • 5 ಬಾರಿ ಸ್ಟೇಫನ್ ಎಡ್ಬರ್ಗ್ ಪ್ರಶಸ್ತಿ- 2010, 2018, 2019, 2020, 2021
  • ಲೌರಿಸ್ ವಿಶ್ವ ಸ್ಪೋರ್ಟ್‌್ಸ ಪ್ರಶಸ್ತಿ- 2006,2011, 2013.
RELATED ARTICLES

Latest News