Monday, December 2, 2024
Homeರಾಷ್ಟ್ರೀಯ | Nationalಹತ್ರಾಸ್‌‍ ದುರ್ಘಟನೆಗೆ ಯೋಗಿ ಸರ್ಕಾರವನ್ನೂ ದೂರಿದ ರಾಹುಲ್‌ ಗಾಂಧಿ

ಹತ್ರಾಸ್‌‍ ದುರ್ಘಟನೆಗೆ ಯೋಗಿ ಸರ್ಕಾರವನ್ನೂ ದೂರಿದ ರಾಹುಲ್‌ ಗಾಂಧಿ

ಹತ್ರಾಸ್‌‍ (ಯುಪಿ), ಜು.5– ಸುಮಾರು ನೂರಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ಹತ್ರಾಸ್‌‍ ಕಾಲ್ತುಳಿತ ಘಟನೆಯಲ್ಲಿ ರಾಜ್ಯಾಡಳಿತದ ಕಡೆಯಿಂದ ಲೋಪವಾಗಿದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.

ಇಂದು ಬೆಳಗ್ಗೆ ಹತ್ರಾಸ್‌‍ನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ತಮವರನ್ನು ಕಳೆದುಕೊಂಡ ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲವಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಹಲವಾರು ಜನರು ಪ್ರಾಣ ಕಳೆದುಕೊಂಡಿರುವುದು ದುಃಖದ ಸಂಗತಿಯಾಗಿದೆ ಎಂದರು.

ನಾನು ರಾಜಕೀಯ ದೃಷ್ಟಿಕೋನದಿಂದ ಮಾತನಾಡಲು ಬಯಸುವುದಿಲ್ಲ. ಆದರೆ ಆಡಳಿತದ ಕಡೆಯಿಂದ ಕೆಲವು ಲೋಪಗಳಾಗಿವೆ ಎಂದು ಹೇಳಿದರು. ರಾಜ್ಯ ಕಾಂಗ್ರೆಸ್‌‍ ಮುಖ್ಯಸ್ಥ ಅಜಯ್‌ ರೈ, ಉಸ್ತುವಾರಿ ಅವಿನಾಶ್‌ ಪಾಂಡೆ, ಪಕ್ಷದ ವಕ್ತಾರ ಸುಪ್ರಿಯಾ ಶ್ರೀನಾಟೆ ಮತ್ತಿತರ ಪದಾಧಿಕಾರಿಗಳು ಜತೆಯಲ್ಲಿದ್ದರು.

RELATED ARTICLES

Latest News