Friday, November 22, 2024
Homeರಾಷ್ಟ್ರೀಯ | Nationalಜ.14 ರಿಂದ ರಾಹುಲ್ ಗಾಂಧಿ ಭಾರತ್ ನ್ಯಾಯ ಯಾತ್ರೆ

ಜ.14 ರಿಂದ ರಾಹುಲ್ ಗಾಂಧಿ ಭಾರತ್ ನ್ಯಾಯ ಯಾತ್ರೆ

ನವದೆಹಲಿ,ಡಿ.27-ಭಾರತ್ ಜೋಡೋ ಯಾತ್ರೆಯ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ನವಚೈತನ್ಯ ತಂದುಕೊಟ್ಟ ರಾಹುಲ್‍ಗಾಂಧಿ, ಮತ್ತೆ 6200 ಕಿಲೋ ಮೀಟರ್ ದೂರದ ಭಾರತ್ ನ್ಯಾಯ ಯಾತ್ರೆಗೆ ಮುಂದಾಗಿದ್ದಾರೆ. ಎಐಸಿಸಿ ಕೇಂದ್ರ ಕಚೇರಿಯಲ್ಲಿಂದು ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಜೈರಾಮ್ ರಮೇಶ್, ಕೆ.ಸಿ.ವೇಣುಗೋಪಾಲ್ ಮಕರಸಂಕ್ರಾಂತಿಗೂ ಮುನ್ನಾ ದಿನ ಜನವರಿ 14ರಿಂದ ಭಾರತ್ ನ್ಯಾಯ ಯಾತ್ರೆ ಆರಂಭಿಸಲಿದ್ದಾರೆ. 32 ದಿನಗಳ ಯಾತ್ರೆ ಮುಣಿಪುರದಿಂದ ಮುಂಬೈ ನಡುವೆ 14 ರಾಜ್ಯಗಳು 85 ಜಿಲ್ಲೆಗಳಲ್ಲಿ ಸಂಚರಿಸಲಿದೆ.

ಭಾರತ್ ಜೋಡೋ ಯಾತ್ರೆ ನಂತರ ಇದೀಗ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಭಾರತ ನ್ಯಾಯ ಯಾತ್ರೆ ಆಯೋಜಿಸಿದೆ. ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಆರ್ಥಿಕ ಅಸಮಾನತೆ, ಸಾಮಾಜಿಕ ಧ್ರುವೀಕರಣ ಮತ್ತು ರಾಜಕೀಯ ಸರ್ವಾಕಾರ ಸೇರಿ 3 ವಿಷಯಗಳನ್ನು ಪ್ರಸ್ತಾಪಿಸಿದ್ದರು. ಭಾರತ ನ್ಯಾಯ ಯಾತ್ರೆಯ ಸಂದರ್ಭದಲ್ಲಿ ಆರ್ಥಿಕ ನ್ಯಾಯ, ಸಾಮಾಜಿಕ ನ್ಯಾಯ ಮತ್ತು ರಾಜಕೀಯ ನ್ಯಾಯ ವಿಷಯಗಳನ್ನು ಪ್ರಸ್ತಾಪಿಸಲಿದ್ದಾರೆ ಎಂದು ಜೈರಾಮ್ ರಮೇಶ್ ಹೇಳಿದರು.

ಯಾತ್ರೆ ಮಣಿಪುರ, ನಾಗಾಲ್ಯಾಂಡ್, ಅಸ್ಸಾಂ, ಮೇಘಾಲಯ, ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್, ಒಡಿಶಾ, ಛತ್ತೀಸ್‍ಗಢ, ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್ ಮತ್ತು ಮಹಾರಾಷ್ಟ್ರ ಸೇರಿ 85 ಜಿಲ್ಲೆಗಳನ್ನು ವ್ಯಾಪಿಸಿರುವ 6200 ಕಿಮೀ ದೂರವನ್ನು ಕ್ರಮಿಸಲಿದೆ. ಈ ಬಾರಿ ಪೂರ್ತಿಯಾಗಿ ಪಾದಯಾತ್ರೆ ಇರುವುದಿಲ್ಲ. ಅಲ್ಲಲ್ಲಿ ಬಸ್ ಮೂಲಕ ಸಂಚರಿಸಲಿದೆ, ಕೆಲವೊಮ್ಮೆ ಪಾದಯಾತ್ರೆ ಆಯೋಜಿಸಲಾಗುವುದು.

ಮದುವೆಯಾದ ಮರುಕ್ಷಣವೇ ನೇಣಿಗೆ ಕೊರಳೊಡ್ಡಿದ ಪ್ರೇಮಿಗಳು

ಭದ್ರತಾ ಸಂಸ್ಥೆಗಳ ಸಲಹೆ ಆಧಾರಿಸಿ ಯಾತ್ರೆಯ ಸ್ವರೂಪ ನಿರ್ಧರಿಸಲಾಗುವುದು ಎಂದು ಹೇಳಿದರು. ನಾಳೆ (ಡಿಸೆಂಬರ್ 28) ನಾಗ್ಪುರದಲ್ಲಿ ಕಾಂಗ್ರೆಸ್ ಸಂಸ್ಥಾಪನಾ ದಿನದಂದು ಹೈ ನಾರಾಯಣ ಹಮ್ ಹೆಸರಿನಲ್ಲಿ ಮೆಗಾ ರ್ಯಾಲಿ ನಡೆಯಲಿದೆ. ಈ ಮೆಗಾ ರ್ಯಾಲಿ 2024 ರ ಲೋಕಸಭೆ ಚುನಾವಣೆಗೆ ಎಚ್ಚರಿಕೆಯ ಗಂಟೆಯಾಗಲಿದೆ ಎಂದು ತಿಳಿಸಿದರು.

ಕೆ.ಸಿ.ವೇಣುಗೋಪಾಲ್ ಮಾತನಾಡಿ, ಡಿಸೆಂಬರ್ 21 ರಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ರಾಹುಲ್ ಗಾಂಧಿ ಪೂರ್ವದಿಂದ ಪಶ್ಚಿಮಕ್ಕೆ ಯಾತ್ರೆಯನ್ನು ಪ್ರಾರಂಭಿಸಬೇಕು ಎಂಬ ಅಭಿಪ್ರಾಯವನ್ನು ನೀಡಿತು. ಸಿಡಬ್ಲ್ಯುಸಿಯ ಆಶಯವನ್ನು ಈಡೇರಿಸಲು ರಾಹುಲ್ ಗಾಂಧಿ ಕೂಡ ಒಪ್ಪಿಕೊಂಡಿದ್ದಾರೆ. ಹಾಗಾಗಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯು ಜನವರಿ 14 ರಿಂದ ಮಾರ್ಚ್ 20 ರವರೆಗೆ ಮಣಿಪುರದಿಂದ ಮುಂಬೈವರೆಗೆ ಭಾರತ್ ನ್ಯಾಯ ಯಾತ್ರೆ ನಡೆಸಲು ನಿರ್ಧರಿಸಿದ್ದಾರೆ ಎಂದರು.

RELATED ARTICLES

Latest News