Monday, October 7, 2024
Homeರಾಷ್ಟ್ರೀಯ | Nationalಇಂದಿನಿಂದ ಆರಂಭವಾಗಬೇಕಿದ್ದ 2ನೇ ಹಂತದ ಭಾರತ್ ಜೋಡೋ ನ್ಯಾಯ ಯಾತ್ರೆ ರದ್ದು

ಇಂದಿನಿಂದ ಆರಂಭವಾಗಬೇಕಿದ್ದ 2ನೇ ಹಂತದ ಭಾರತ್ ಜೋಡೋ ನ್ಯಾಯ ಯಾತ್ರೆ ರದ್ದು

ರಾಂಚಿ, ಫೆ.14 (ಪಿಟಿಐ) – ಜಾರ್ಖಂಡ್‍ನಲ್ಲಿ ಇಂದಿನಿಂದ ಆರಂಭವಾಗಬೇಕಿದ್ದ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ನ್ಯಾಯ್ ಯಾತ್ರೆಯ ಎರಡನೇ ಹಂತವನ್ನು ರದ್ದುಗೊಳಿಸಲಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ರೈತರ ಆಂದೋಲನದಲ್ಲಿ ಭಾಗವಹಿಸಲು ಹಿರಿಯ ಕಾಂಗ್ರೆಸ್ ನಾಯಕ ದೆಹಲಿಗೆ ಧಾವಿಸಿದ್ದರಿಂದ ಯಾತ್ರೆ ರದ್ದುಗೊಳಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಗರ್ವಾ ಜಿಲ್ಲೆಯ ರಂಕಾದಲ್ಲಿ ಎಂಜಿಎನ್‍ಆರ್‍ಇಜಿಎ ಕಾರ್ಯಕರ್ತರೊಂದಿಗೆ ನಿಗದಿತ ಸಂವಾದವನ್ನು ಈಗ ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಮತ್ತು ಇತರ ಪಕ್ಷದ ನಾಯಕರು ನಡೆಸಲಿದ್ದಾರೆ. ಛತ್ತೀಸ್‍ಗಢದಿಂದ ಗಾಂಧಿ ಅವರು ಜಾರ್ಖಂಡ್‍ಗೆ ಎರಡನೇ ಹಂತದ ಯಾತ್ರೆಗಾಗಿ ಬುಧವಾರ ಗಹ್ವಾರ್ ಜಿಲ್ಲೆಯ ಮೂಲಕ ಮರುಪ್ರವೇಶ ಮಾಡಬೇಕಿತ್ತು. ತಡರಾತ್ರಿ ತೆಗೆದುಕೊಂಡ ನಿರ್ಧಾರದ ಪ್ರಕಾರ, ಜಾರ್ಖಂಡ್‍ನಲ್ಲಿ ಭಾರತ್ ಜೋಡೋ ನ್ಯಾಯ್ ಯಾತ್ರೆಯ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ ಎಂದು ಕಾಂಗ್ರೆಸ್ ವಕ್ತಾರ ಸೋನಾಲ್ ಶಾಂತಿ ಪಿಟಿಐಗೆ ತಿಳಿಸಿದ್ದಾರೆ.

ಇಂದು ಕಾಂಗ್ರೆಸ್ ಶಾಸಕಾಂಗ ಸಭೆ

ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಜಾರ್ಖಂಡ್ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಠಾಕೂರ್, ಜಾರ್ಖಂಡ್ ಉಸ್ತುವಾರಿ ಗುಲಾಂ ಅಹ್ಮದ್ ಮಿರ್, ಎನಎಸ್‍ಯುಐ ಉಸ್ತುವಾರಿ ಕನ್ನಯಾ ಕುಮಾರ್ ಮತ್ತು ಇತರ ಕಾಂಗ್ರೆಸ್ ಮುಖಂಡರು ರಂಕಾದಲ್ಲಿ ಎಂಜಿಎನ್‍ಆರ್‍ಇಜಿಎ ಕಾರ್ಯಕರ್ತರೊಂದಿಗೆ ನಿಗದಿತ ಸಂವಾದದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.

ಜಾರ್ಖಂಡ್ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಠಾಕೂರ್ ಅವರು ಈ ಹಿಂದೆ ವಿಶೇಷ ಉದ್ದೇಶಕ್ಕಾಗಿ ಗಾಂಧಿ ದೆಹಲಿಗೆ ತೆರಳಬೇಕಾಯಿತು ಎಂದು ಹೇಳಿದ್ದಾರೆ. ಜಾರ್ಖಂಡ್‍ನಲ್ಲಿ ಗಾಂಧಿಯವರ ಮೊದಲ ಯಾತ್ರೆ ಫೆಬ್ರವರಿ ಮೊದಲ ವಾರದಲ್ಲಿ ನಡೆಯಿತು. ಫೆಬ್ರವರಿ 2 ರಂದು ಪಶ್ಚಿಮ ಬಂಗಾಳದಿಂದ ಜಾರ್ಖಂಡ್ ಪ್ರವೇಶಿಸಿ ಫೆಬ್ರವರಿ 6 ರಂದು ಒಡಿಶಾ ಪ್ರವೇಶಿಸಿತ್ತು. ಫೆಬ್ರವರಿ 15 ರಂದು ಬಿಹಾರಕ್ಕೆ ಪ್ರವೇಶಿಸುವ ಮೊದಲು ಗಾಂಧಿ ಅವರು ಎರಡನೇ ಹಂತದಲ್ಲಿ ಜಾರ್ಖಂಡ್‍ನಲ್ಲಿ ಎರಡು ದಿನಗಳ ಕಾಲ ಇರಬೇಕಿತ್ತು.

ಜನವರಿ 14 ರಂದು ಮಣಿಪುರದಲ್ಲಿ ಆರಂಭವಾದ ಭಾರತ್ ಜೋಡೋ ನ್ಯಾಯ್ ಯಾತ್ರೆ 67 ದಿನಗಳಲ್ಲಿ 6,713 ಕಿ.ಮೀ ಕ್ರಮಿಸಲಿದ್ದು, 15 ರಾಜ್ಯಗಳ 110 ಜಿಲ್ಲೆಗಳ ಮೂಲಕ ಮಾರ್ಚ್ 20 ರಂದು ಮುಂಬೈನಲ್ಲಿ ಮುಕ್ತಾಯಗೊಳ್ಳಲಿದೆ.

RELATED ARTICLES

Latest News