Monday, June 17, 2024
Homeರಾಷ್ಟ್ರೀಯಕಾರು ಮತ್ತು ಟ್ರಕ್ ನಡುವೆ ಭೀಕರ ಅಪಘಾತ, 9 ಮಂದಿ ಸಾವು

ಕಾರು ಮತ್ತು ಟ್ರಕ್ ನಡುವೆ ಭೀಕರ ಅಪಘಾತ, 9 ಮಂದಿ ಸಾವು

ಜಲಾವರ್,(ರಾಜಸ್ಥಾನ)ಏ.21-ಕಾರು ಮತ್ತು ಟ್ರಕ್ ನಡುವೆ ಡಿಕ್ಕಿ ಸಂಭವಿಸಿದ ಭೀಕರ ಅಪಘಾತದಲ್ಲಿ 9 ಜನರು ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಜಲಾವರ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 52ರ ಅಕ್ಲೇರಾ ಬಳಿ ತಡರಾತ್ರಿ ನಡೆದಿದೆ.

ಮೃತರೆಲ್ಲರೂ ಕಾರಿನಲ್ಲಿದ್ದರು, ಮಧ್ಯಪ್ರದೇಶಕ್ಕೆ ಮದುವೆಗೆ ತೆರಳಿ ರಾತ್ರಿ ಹಿಂದಿರುಗುತ್ತಿದ್ದಾಗ ಅಕ್ಲೇರಾ ಸಮೀಪದ ಪಂಚೋಲಾ ಗ್ರಾಮದ ಬಳಿ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳದಲ್ಲೇ ಮೂವರು ಹಾಗು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ 6 ಯುವಕರು ಸಾವನ್ನಪ್ಪಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಹಾರ ಕಾರ್ಯದಲ್ಲಿ ತೊಡಗಿದರು ಪ್ರಸ್ತುತ ತನಿಖೆ ಮುಂದುವರಿದಿದೆ.

ಪ್ರಾಥಮಿಕ ಮಾಹಿತಿ ಪ್ರಕಾರ ಮೃತಪಟ್ಟ ಯುವಕರು ಬಗ್ರಿ ಸಮುದಾಯದವರು ಎನ್ನಲಾಗಿದೆ. ಅತಿವೇಗದ ಚಾಲನೆಯಿಂದಾಗಿ ಈ ಅಪಘಾತ ಸಂಭವಿಸಿದೆ. ಅತಿಯಾದ ವೇಗದಲ್ಲಿ ಬರುತ್ತಿದ್ದ ಟ್ರಕ್ ನಿಯಂತ್ರಣ ತಪ್ಪಿ ಎದುರಿನಿಂದ ಬರುತ್ತಿದ್ದ ಕಾರಿಗೆ ಗೆ ಡಿಕ್ಕಿ ಹೊಡೆದಿದೆ.

ಅಪಘಾತದ ನಂತರ ಟ್ರಕ್ ಚಾಲಕ ಪರಾರಿಯಾಗಿದ್ದು ಲಾರಿ ಹರ್ಯಾಣ ಮೂಲದ್ದಾಗಿದೆ. ಮೃತರನ್ನು ಗುರುತಿಸುವ ಪ್ರಯತ್ನ ಮುಂದುವರೆದಿದೆ.ಅಪಘಾತದ ಹಿಂದಿನ ಕಾರಣಗಳು ಇನ್ನೂ ತಿಳಿದು ಬಂದಿಲ್ಲ. ಅಪಘಾತದ ಸುದ್ದಿ ತಿಳಿದ ನಂತರ ವಧು-ವರರ ಮನೆಯಲ್ಲಿ ಗದ್ದಲ ಉಂಟಾಗಿದೆ ಮದುವೆಗೆ ಬಂದವರೆಲ್ಲರೂ ತಮ್ಮ ಕೆಲಸ ಬಿಟ್ಟು ಘಟನಾ ಸ್ಥಳದ ಕಡೆಗೆ ಬಂದಿದ್ದಾರೆ . ಈ ಅವಘಡದಿಂದ ಎರಡೂ ಮನೆಗಳಲ್ಲಿ ಶೋಕ ಮಡುಗಟ್ಟಿದೆ.

RELATED ARTICLES

Latest News