Thursday, May 2, 2024
Homeರಾಜಕೀಯಜಾಮೀನಿನ ಮೇಲೆ ಹೊರಗಿರುವ ಭ್ರಷ್ಟ ರಾಜಕಾರಣಿ ಡಿಕೆಶಿ : ರಾಜೀವ್ ಚಂದ್ರಶೇಖರ್

ಜಾಮೀನಿನ ಮೇಲೆ ಹೊರಗಿರುವ ಭ್ರಷ್ಟ ರಾಜಕಾರಣಿ ಡಿಕೆಶಿ : ರಾಜೀವ್ ಚಂದ್ರಶೇಖರ್

ತಿರುವನಂತಪುರಂ, ಏ. 17 (ಪಿಟಿಐ) : ಕೇರಳದ ಅಭಿವೃದ್ಧಿಗೆ ನಿಮ್ಮ ಕೊಡುಗೆ ಏನು ಎಂದು ಪ್ರಶ್ನಿಸಿದ್ದ ಡಿಸಿಎಂ ಡಿ ಕೆ ಶಿವಕುಮಾರ್ ಅವರಿಗೆ ಜಾಮೀನಿನ ಮೇಲೆ ಹೊರಗಿರುವ ನಿಮ್ಮಂತ ಭ್ರಷ್ಟ ರಾಜಕಾರಣಿಯ ಪ್ರಮಾಣಪತ್ರದ ನನಗೆ ಅಗತ್ಯವಿಲ್ಲ ಎಂದು ತಿರುವಂತನಪುರಂ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜೀವ್ ಚಂದ್ರಶೇಖರ್ ತಿರುಗೇಟು ನೀಡಿದ್ದಾರೆ.

ತಿರುವನಂತಪುರಂ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‍ನ ಶಶಿ ತರೂರ್ ವಿರುದ್ಧ ಕಣಕ್ಕಿಳಿದಿರುವ ಚಂದ್ರಶೇಖರ ಅವರು ಚುನಾವಣಾ ಪ್ರಚಾರ ಆರಂಭಿಸಿದಾಗಿನಿಂದಲೂ ತಾನು ಗೆದ್ದರೆ ಏನು ಮಾಡುತ್ತೇನೆ ಎಂಬುದನ್ನು ಹೇಳಿದ್ದೇನೆ ಮತ್ತು ಅದನ್ನು ಅನುಸರಿಸುತ್ತೇನೆ ಎಂದು ಹೇಳಿದ್ದಾರೆ.

ಮುಂದಿನೆರಡು ದಿನಗಳಲ್ಲಿ ದಕ್ಷಿಣ ರಾಜ್ಯಕ್ಕೆ ಅಭಿವೃದ್ಧಿ ಮತ್ತು ಬಂಡವಾಳ ಹೂಡಿಕೆಯ ವಿಷನ್ ಡಾಕ್ಯುಮೆಂಟ್ ಅನ್ನು ಬಿಡುಗಡೆ ಮಾಡುವುದಾಗಿ ಹೇಳಿದರು.ಒಮ್ಮೆ ನಾನು ಇಲ್ಲಿಂದ ಸಂಸದ ಮತ್ತು ಸಚಿವನಾದರೆ, ಮುಂದಿನ ಐದು ವರ್ಷಗಳ ಕಾಲ ಆ ವಿಷನ್ ಡಾಕ್ಯುಮೆಂಟ್ ಅನ್ನು ಜಾರಿಗೆ ತರಲು ಕೆಲಸ ಮಾಡುತ್ತೇನೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಚಂದ್ರಶೇಖರ್ ತಿಳಿಸಿದ್ದಾರೆ.

ಕರ್ನಾಟಕ ಉಪಮುಖ್ಯಮಂತ್ರಿ ಶಿವಕುಮಾರ್ ಅವರು ತಮ್ಮ ವಿರುದ್ಧ ಮಾಡಿದ ಕಾಮೆಂಟ್‍ಗಳ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ ನಾಯಕ ಜಾಮೀನಿನ ಮೇಲೆ ಹೊರಗಿರುವ ಮತ್ತು ಭ್ರಷ್ಟ ರಾಜಕಾರಣಿ ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಹೇಳಿದರು.

ನನಗೆ ಅವರ ಪ್ರಮಾಣಪತ್ರದ ಅಗತ್ಯವಿಲ್ಲ. ಶಶಿ ತರೂರ್ ಅವರ ಪ್ರಮಾಣಪತ್ರವನ್ನು ಹೊಂದಬಹುದು. ಶಿವಕುಮಾರ್ ಎಂತಹ ವ್ಯಕ್ತಿ, ಅವರ ರಾಜಕೀಯ ಮತ್ತು ಅವರ ಹಿನ್ನೆಲೆ ಏನು ಎಂದು ಎಲ್ಲರಿಗೂ ತಿಳಿದಿದೆ. ಹಾಗಾಗಿ ನಾನು ಅವರಿಗೆ ಏನೂ ಹೇಳುವುದಿಲ್ಲ ಎಂದು ಬಿಜೆಪಿ ನಾಯಕ ಹೇಳಿದರು.

ಕರ್ನಾಟಕ ಕಾಂಗ್ರೆಸ್ ಮುಖ್ಯಸ್ಥರೂ ಆಗಿರುವ ಶಿವಕುಮಾರ್ ಅವರು ಕೇರಳದಲ್ಲಿದ್ದು, ಕೇರಳದ ಅಭಿವೃದ್ಧಿಗೆ ಚಂದ್ರಶೇಖರ್ ನೀಡಿದ ಕೊಡುಗೆ ಏನು ಎಂದು ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದ್ದರು. ಚುನಾವಣೆಗೆ ಸ್ಪರ್ಧಿಸುವ ಮೊದಲು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಚಂದ್ರಶೇಖರ್ ನೈತಿಕವಾಗಿ ಬಾಧ್ಯತೆ ಹೊಂದಿದ್ದಾರೆ ಎಂದು ಅವರು ಹೇಳಿದ್ದಾರೆ. ದೇಶದಲ್ಲಿ ಬಿಜೆಪಿ ಅಥವಾ ಮೋದಿ ಅಲೆ ಇಲ್ಲ ಎಂದು ಹೇಳಿರುವ ಶಿವಕುಮಾರ್ ಕೇಂದ್ರದಲ್ಲಿ ಇಂಡಿಯಾ ಒಕ್ಕೂಟ ಸರ್ಕಾರ ರಚಿಸಲಿದೆ ಎಂದು ಪ್ರತಿಪಾದಿಸಿದರು.

ಕರ್ನಾಟಕ ಕಾಂಗ್ರೆಸ್ ಮುಖ್ಯಸ್ಥರು ಕ್ರಮವಾಗಿ ತಿರುವನಂತಪುರಂ ಮತ್ತು ಕಣ್ಣೂರಿನಲ್ಲಿ ತರೂರ್ ಮತ್ತು ಕೆಪಿಸಿಸಿ ಮುಖ್ಯಸ್ಥ ಕೆ ಸುಧಾಕರನ್ ಅವರ ರೋಡ್ ಶೋಗಳಲ್ಲಿ ಭಾಗವಹಿಸಿದ್ದರು.

RELATED ARTICLES

Latest News