ಹೊಸದಿಲ್ಲಿ, ನ.16- ಚೀನಾ ದಕ್ಷಿಣ ಸಮುದ್ರದಲ್ಲಿ ಸೇನಾ ಜಮಾವಣೆಯನ್ನು ಹೆಚ್ಚಿಸುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಜಾಗತಿಕ ನಿಯಮಗಳಿಗೆ ಅನುಸಾರವಾಗಿ ನೌಕಾಯಾನ, ವಿಮಾನಯಾನ ಮತ್ತು ಅಂತಾರಾಷ್ಟ್ರೀಯ ನೀರಿನಲ್ಲಿ ಅಡೆತಡೆಯಿಲ್ಲದ ಕಾನೂನುಬದ್ಧ ವಾಣಿಜ್ಯಕ್ಕೆ ಭಾರತ ಬದ್ಧವಾಗಿದೆ ಎಂದಿದ್ದಾರೆ.
ಜಕಾರ್ತಾದಲ್ಲಿ ನಡೆದ 10-ರಾಷ್ಟ್ರಗಳ ಆಸಿಯಾನ್ ಮತ್ತು ಅದರ ಕೆಲವು ಸಂವಾದ ಪಾಲುದಾರರ ಸಭೆಯಲ್ಲಿ ರಾಜನಾಥ್ ಸಿಂಗ್ ಮಾತನಾಡಿ, ಜಾಗತಿಕವಾಗಿ ನಿರಂತರ ಶಾಂತಿ ಮತ್ತು ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಸಂಭಾಷಣೆ ಮತ್ತು ರಾಜತಾಂತ್ರಿಕತೆಯ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು.
ವಿಶ್ವಕ್ಕೆ ಭಾರತದ ಸಂದೇಶವನ್ನು ಪುನರುಚ್ಚರಿಸಿದ ಸಚಿವರು, ಇದು ಯುದ್ಧದ ಯುಗವಲ್ಲ, ನ್ಯಾವಿಗೇಷನ್, ಓವರ್‍ಫ್ಲೈಟ್ ಮತ್ತು ಅಂತರರಾಷ್ಟ್ರೀಯ ನೀರಿನಲ್ಲಿ ಅಡೆತಡೆಯಿಲ್ಲದ ಕಾನೂನುಬದ್ಧ ವಾಣಿಜ್ಯದ ಸ್ವಾತಂತ್ರ್ಯಕ್ಕೆ ಭಾರತವು ಬದ್ಧವಾಗಿದೆ ಎಂದು ಹೇಳಿದರು.
ಗುಂಡಿನ ಚಕಮಕಿ : ಕೊಡಗು ಜಿಲ್ಲೆಯ ಅರಣ್ಯ ವ್ಯಾಪ್ತಿಯಲ್ಲಿ ಹೈಅಲರ್ಟ್
1982 ರ ಸಮುದ್ರದ ಕಾನೂನಿನ ಮೇಲಿನ ವಿಶ್ವಸಂಸ್ಥೆಯ ಸಮಾವೇಶ ಸೇರಿದಂತೆ ಅಂತರರಾಷ್ಟ್ರೀಯ ಕಾನೂನುಗಳನ್ನು ಮೀರಿ ಚೀನಾ, ಹೈಡ್ರೋ ಕಾರ್ಬನ್‍ಗಳ ಬೃಹತ್ ಮೂಲವಾದ ದಕ್ಷಿಣ ಸಮುದ್ರದ ಮೇಲೆ ತನ್ನ ಸಾರ್ವಭೌಮತ್ವದ ವ್ಯಾಪಕ ಹಕ್ಕುಗಳ ಬಗ್ಗೆ ಜಾಗತಿಕ ಕಳವಳಗಳು ಹೆಚ್ಚುತ್ತಿವೆ. ವಿಯೆಟ್ನಾಂ, ಫಿಲಿಪೈನ್ಸ್ ಮತ್ತು ಬ್ರೂನಿ ಸೇರಿದಂತೆ ಹಲವಾರು ದೇಶಗಳು ಪ್ರತಿವಾದವನ್ನು ಮಂಡಿಸಿವೆ.
ಆಸಿಯಾನ್ ರಕ್ಷಣಾ ಮಂತ್ರಿಗಳ ಸಭೆ ಪ್ಲಸ್ (ಎಡಿಎಂಎಂ-ಪ್ಲಸ್) ಸಭೆಯಲ್ಲಿ ತಮ್ಮ ಹೇಳಿಕೆಗಳಲ್ಲಿ, ರಕ್ಷಣಾ ಸಚಿವರು ಭಯೋತ್ಪಾದನೆಯನ್ನು ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಗಂಭೀರ ಬೆದರಿಕೆಯಾಗಿದೆ. ಅದನ್ನು ಎದುರಿಸಲು ಸಂಘಟಿತ ಪ್ರಯತ್ನಗಳು ಅಗತ್ಯ ಎಂದು ಕರೆ ನೀಡಿದ್ದಾರೆ.
ವಿಪಕ್ಷ ನಾಯಕನ ಆಯ್ಕೆಗೆ ನಾಳೆ ಬಿಜೆಪಿ ಶಾಸಕರ ಸಭೆ
ಭಾರತ, ಚೀನಾ, ಆಸ್ಟ್ರೇಲಿಯಾ, ಜಪಾನ್, ನ್ಯೂಜಿಲೆಂಡ್, ರಿಪಬ್ಲಿಕ್ ಆಫ್ ಕೊರಿಯಾ, ರಷ್ಯಾ ಮತ್ತು ಯುನೈಟೆಡ್ ಸ್ಟೇಟ್ಸ್ ರಾಷ್ಟ್ರಗಳ ಪ್ರತಿನಿಗಳು ಸಭೆಯಲ್ಲಿ ಭಾಗವಹಿಸಿದ್ದಾರೆ. ಇಂಡೋನೇಷ್ಯಾ ಪ್ರಸ್ತುತ ಸಭೆಯ ಅಧ್ಯಕ್ಷತೆ ವಹಿಸಿದೆ. ವಿವಿಧ ಮಧ್ಯಸ್ಥಗಾರರ ನಡುವೆ ದೊಡ್ಡ ಒಮ್ಮತವನ್ನು ಪ್ರತಿಬಿಂಬಿಸಲು ಸಮಾಲೋಚನೆ ಮತ್ತು ಅಭಿವೃದ್ಧಿ-ಆಧಾರಿತ ಪ್ರಾದೇಶಿಕ ಭದ್ರತಾ ಉಪಕ್ರಮಗಳಿಗೆ ರಕ್ಷಣಾ ಸಚಿವರು ಕರೆ ನೀಡಿದ್ದಾರೆ.