Friday, May 3, 2024
Homeರಾಜ್ಯಇಸ್ರೇಲ್-ಹಮಾಸ್ ಬಿಕ್ಕಟ್ಟ ನಿವಾರಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ನಿರ್ಣಯ ಅಂಗೀಕಾರ

ಇಸ್ರೇಲ್-ಹಮಾಸ್ ಬಿಕ್ಕಟ್ಟ ನಿವಾರಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ನಿರ್ಣಯ ಅಂಗೀಕಾರ

ವಿಶ್ವಸಂಸ್ಥೆ, ನ.16- ಸಂಘರ್ಷ ಪೀಡಿತ ಗಾಜಾದಾದ್ಯಂತ ಮಾನವೀಯ ನೆರವುಗಳ ಪೂರೈಕೆಗೆ ಅಡೆತಡೆ ಇಲ್ಲದಂತೆ ಕಾರಿಡಾರ್‍ಗಳ ನಿರ್ಮಾಣಕ್ಕೆ ಅನುಮತಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಕರೆ ನೀಡಿದೆ. ಅಂತಿಮವಾಗಿ ತಿಂಗಳಿನಿಂದಲೂ ಚಾಲ್ತಿಯಲ್ಲಿದ್ದ ಇಸ್ರೇಲ್-ಹಮಾಸ್ ಬಿಕ್ಕಟ್ಟನ್ನು ನಿವಾರಿಸುವ ನಿರ್ಣಯವನ್ನು ಅಂಗೀಕರಿಸಲಾಗಿದೆ.

15-ರಾಷ್ಟ್ರಗಳ ಕೌನ್ಸಿಲ್ ಬುಧವಾರದಂದು ಸಭೆ ಸೇರಿ ನಿರ್ಣಯ ಅಂಗೀಕರಿಸಿವೆ. ಹಮಾಸ್ ಮತ್ತು ಇತರ ಗುಂಪುಗಳು ಎಲ್ಲಾ ಒತ್ತೆಯಾಳಗಳನ್ನು ಅದರಲ್ಲೂ ವಿಶೇಷವಾಗಿ ಮಕ್ಕಳು, ಮಹಿಳೆಯರನ್ನು ತಕ್ಷಣ ಮತ್ತು ಬೇಷರತ್ತಾಗಿ ಬಿಡುಗಡೆ ಮಾಡಬೇಕು, ತಕ್ಷಣದ ಮಾನವೀಯ ನೆರವಿನ ಪ್ರವೇಶಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಲಾಗಿದೆ.

ರಷ್ಯಾ, ಅಮೆರಿಕಾ ಮತ್ತು ಇಂಗ್ಲೆಂಡ್ ಸೇರಿ ಮೂರು ರಾಷ್ಟ್ರಗಳ ಗೈರು ಹಾಜರಿ ಹೊರತಾಗಿಯೂ, 12 ಮತಗಳು ಮಾಲ್ಟಾ-ಕರಡು ನಿರ್ಣಯದ ಪರವಾಗಿ ಚಲಾವಣೆಗೊಂಡಿವೆ. ನಿರ್ಣಯದ ವಿರುದ್ಧ ಯಾವ ರಾಷ್ಟ್ರಗಳು ಮತ ಚಲಾವಣೆ ಮಾಡಿಲ್ಲ. ಗಾಜಾ ಪಟ್ಟಿಯಾದ್ಯಂತ ಸಾಕಷ್ಟು ದಿನಗಳವರೆಗೆ ತುರ್ತು ಮತ್ತು ವಿಸ್ತೃತ ಮಾನವೀಯ ವಿರಾಮಗಳಿಗಾಗಿ ಕಾರಿಡಾರ್‍ಗಳನ್ನು ಸಕ್ರಿಯಗೊಳಿಸಲು ನಿರ್ಣಯ ಕೈಗೊಳ್ಳಲಾಗಿದೆ.

ಆಸ್ತಿಗಾಗಿ ಪತ್ನಿಯನ್ನೇ ಕೊಂದು ನಾಟಕವಾಡಿದ್ದ ಉಪನ್ಯಾಸಕ ಅರೆಸ್ಟ್

ಅಂತರರಾಷ್ಟ್ರೀಯ ಮಾನವೀಯ ಕಾನೂನಿಗೆ ಅನುಗುಣವಾಗಿ ಪೂರ್ಣ, ತ್ವರಿತ, ಸುರಕ್ಷಿತ ಮತ್ತು ಅಡೆತಡೆಯಿಲ್ಲದ ಮಾನವೀಯ ಪ್ರವೇಶವನ್ನು ಒದಗಿಸಲು ವಿಶ್ವಸಂಸ್ಥೆ ಕರೆ ನೀಡಿದೆ. ಅಗತ್ಯ ಸರಕುಗಳು, ಸೇವೆಗಳ ನಿರಂತರ, ಅಡೆತಡೆಯಿಲ್ಲದ ನಿಬಂಧನೆಯನ್ನು ಸುಲಭಗೊಳಿಸಲು ಪಾಲುದಾರರನ್ನು ಅನುಷ್ಠಾನಗೊಳಿಸುವುದು ಈ ನಿರ್ಣಯದ ಉದ್ದೇಶವಾಗಿದೆ.

ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಉಗ್ರಗಾಮಿ ಗುಂಪು ದಾಳಿ ಮಾಡಿತ್ತು, ನಂತರ ಇಸ್ರೇಲ್-ಹಮಾಸ್ ಸಂಘರ್ಷ ಭುಗಿಲೆದ್ದಿದೆ. ಮಾನವೀಯ ಪ್ರವೇಶವನ್ನು ಅನುಮತಿಸುವ ಕುರಿತು ಕ್ರಮ ತೆಗೆದುಕೊಳ್ಳಲು ಕಳೆದ ತಿಂಗಳು ನಾಲ್ಕು ವಿಫಲ ಪ್ರಯತ್ನಗಳನ್ನು ನಡೆಸಲಾಗಿದೆ. ನಂತರ ಕೌನ್ಸಿಲ್‍ನಲ್ಲಿ ನಿರ್ಣಯವನ್ನು ಅಂಗೀಕರಿಸಿದೆ.

ಭಯೋತ್ಪಾದನಾ ಕೃತ್ಯಗಳಿಂದ ಉಂಟಾದ ಶಾಂತಿ ಮತ್ತು ಭದ್ರತೆಗೆ ಬೆದರಿಕೆಗಳ ವಿರುದ್ಧ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಸದಸ್ಯ ರಾಷ್ಟ್ರಗಳ ಹಕ್ಕನ್ನು ದೃಢಪಡಿಸುವ ವಿಶ್ವಸಂಸ್ಥೆ ನಿರ್ಣಯವನ್ನು ರಷ್ಯಾ ಮತ್ತು ಚೀನಾ ವೀಟೋ ಮಾಡಿತು.

ಮಾಸ್ಕೋದ ಎರಡು ನಿರ್ಣಯಗಳು ಸಾಕಷ್ಟು ಮತಗಳನ್ನು ಪಡೆಯುವಲ್ಲಿ ವಿಫಲವಾದಾಗ, ಬ್ರೆಜಿಲ್ ಪಠ್ಯವು ಗಾಜಾ ಪಟ್ಟಿಗೆ ಸಹಾಯಕ್ಕಾಗಿ ಸಂಪೂರ್ಣ ಪ್ರವೇಶವನ್ನು ಅನುಮತಿಸಲು ನಿರ್ಣಯಿಸಲಾಯಿತು. ಹಮಾಸ್ ಮತ್ತು ಇತರ ಗುಂಪುಗಳು ಹೊಂದಿರುವ ಎಲ್ಲಾ ಒತ್ತೆಯಾಳುಗಳನ್ನು ತಕ್ಷಣವೇ ಮತ್ತು ಬೇಷರತ್ತಾಗಿ ಬಿಡುಗಡೆ ಮಾಡುವ ನಿರ್ಣಯದ ಕರೆಯನ್ನು ವಾಷಿಂಗ್ಟನ್ ಸಂಪೂರ್ಣವಾಗಿ ಬೆಂಬಲಿಸುತ್ತದೆ ಎಂದು ಅಮೆರಿಕಾ ರಾಯಭಾರಿ ತಿಳಿಸಿದ್ದಾರೆ.

RELATED ARTICLES

Latest News