Monday, May 6, 2024
Homeರಾಜ್ಯರಾಜ್ಯಸಭೆ ಚುನಾವಣೆ: ಎನ್‌ಡಿಎ ಮೈತ್ರಿಗೆ ಸೋಲು, ಕಾಂಗ್ರೆಸ್- ಬಿಜೆಪಿಯ ಅಭ್ಯರ್ಥಿಗಳಿಗೆ ಗೆಲುವು

ರಾಜ್ಯಸಭೆ ಚುನಾವಣೆ: ಎನ್‌ಡಿಎ ಮೈತ್ರಿಗೆ ಸೋಲು, ಕಾಂಗ್ರೆಸ್- ಬಿಜೆಪಿಯ ಅಭ್ಯರ್ಥಿಗಳಿಗೆ ಗೆಲುವು

ಬೆಂಗಳೂರು,ಫೆ.27- ರಾಜ್ಯ ವಿಧಾನಸಭೆಯ ಚುನಾಯಿತ ಸದಸ್ಯರಿಂದ ರಾಜ್ಯಸಭೆಯ ನಾಲ್ಕು ಸದಸ್ಯ ಸ್ಥಾನಗಳಿಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ನಿರೀಕ್ಷೆಯಂತೆ ಆಡಳಿತಾರೂಢ ಕಾಂಗ್ರೆಸ್ ನ ಮೂರೂ ಹಾಗೂ ಬಿಜೆಪಿಯ ಒಬ್ಬ ಅಭ್ಯರ್ಥಿ ಆಯ್ಕೆಯಾಗಿದ್ದು ಜೆಡಿಎಸ್ ಅಭ್ಯರ್ಥಿ ಪರಾಭವಗೊಂಡಿದ್ದಾರೆ. ರಾಜ್ಯಸಭೆ ಚುನಾವಣೆಗೆ ನಡೆದ ಮತ ಎಣಿಕೆ ಪೂರ್ಣಗೊಂಡಿದ್ದು, ರಾಜ್ಯಸಭೆ ಚುನಾವಣೆ ಅಧಿಕಾರಿಯಾಗಿರುವ ವಿಧಾನಸಭೆಯ ಕಾರ್ಯದರ್ಶಿ ಎಂ ಕೆ ವಿಶಾಲಾಕ್ಷಿ ಫಲಿತಾಂಶವನ್ನು ಪ್ರಕಟಿಸಿದ್ದಾರೆ.

ಕಾಂಗ್ರೆಸ್ ನ ಅಜಯ್ ಮಕನ್ (47), ಜಿ.ಸಿ.ಚಂದ್ರಶೇಖರ್(45) , ಡಾ. ಸೈಯದ್ ನಾಸಿರ್ ಹುಸೇನ್(47) ಹಾಗೂ ಬಿಜೆಪಿ ಅಭ್ಯರ್ಥಿ ನಾರಾಯಣ ಸಾ ಭಾಂಡಗೆ(47) ಜಯಗಳಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ದಿಸಿದ್ದ ರಾಜ್ಯಸಭೆಯ ಮಾಜಿ ಸದಸ್ಯ ಡಿ. ಕುಪೇಂದ್ರರೆಡ್ಡಿ(36) ಪರಾಭವಗೊಂಡಿದ್ದಾರೆ. ಬಿಜೆಪಿ ಜೆಡಿಎಸ್ ಮೈತ್ರಿ ನಂತರ ಅವರಿಗೆ ಎರಡನೇ ಅಪಜಯವಾಗಿದೆ.

ಹುಕ್ಕಾ ಅಡ್ಡೆ ಮೇಲೆ ಸಿಸಿಬಿ ಪೊಲೀಸರ ದಾಳಿ : 12.5 ಲಕ್ಷ ಮೌಲ್ಯದ ಫ್ಲೇವರ್ ವಶಕ್ಕೆ..

ವಿಧಾನಪರಿಷತ್ತಿನ ಬೆಂಗಳೂರು ಶಿಕ್ಶಕರ ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಪರ್ದಿಸಿದ್ದ ಎ. ಪಿ. ರಂಗನಾಥ ರವರ ಸೋಲು ಮೈತ್ರಿಕೂಟದ ಮೊದಲ ಸೋಲಾಗಿತ್ತು. ಜೆಡಿಎಸ್ ಎನ್ ಡಿ ಎ ಕೂಟಕ್ಕೆ ಸೇರಿದ ಈ ಎರೆಡು ಚುನಾವಣೆಯಲ್ಲಿ ಸೋಲುವ ಮೂಲಕ ತೀವ್ರ ಮುಜುಗರಕ್ಕೆ ಒಳಗಾಗಿದೆ. ಆದರೆ ಕಾಂಗ್ರೆಸ್ ನ ಅಭ್ಯರ್ಥಿಗಳು ಎರಡು ಚುನಾವಣೆಯಲ್ಲಿ ಗೆಲ್ಲುವ ಮೂಲಕ ಎನ್ ಡಿ ಎ ವಿರುದ್ಧ ಜಯಗಳಿಸಿದ್ದ ಸಂಭ್ರಮದಲ್ಲಿ ಬೀಗುತ್ತಿದೆ.

ಎನ್ ಡಿ ಎ ಮೈತ್ರಿಕೂಟಕ್ಕೆ ಎರಡು ಚುನಾವಣೆಗಳು ಅಗ್ನಿಪರೀಕ್ಷೆಯಾಗಿದ್ದು, ಲೋಕಸಭೆ ಚುನಾವಣೆಗೆ ದಿಕ್ಸೂಚಿಯೆಂದೇ ಬಿಂಬಿಸಲಾಗಿತ್ತು. ಗೆಲ್ಲುವಿನ ಗುರಿ ತಲುಪಲು ಅಗತ್ಯವಿರುವ ಶಾಸಕರ ಸಂಖ್ಯೆ ವಿಧಾನಸಭೆಯಲ್ಲಿ ಇಲದಿದ್ದರು, ಜೆಡಿಎಸ್ ರಾಜ್ಯಸಭೆ ಚುನಾವಣೆಗೆ ಸ್ಫರ್ದೆಮಾಡಿ ಆತ್ಮಸಾಕ್ಷಿ ಮತಗಳನ್ನು ನಿರೀಕ್ಷೆ ಮಾಡಿತ್ತು. ಅದು ಜೆಡಿಎಸ್ ಗೆ ಫಲ ನೀಡಲಿಲ್ಲ. ಇಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರಿಗೆ ಮತದಾನ ನಡೆದಿದ್ದು. 223 ಶಾಸಕರ ಪೈಕಿ 222 ಶಾಸಕರು ಮತ ಚಲಾಯಿಸಿದ್ದು, ಬಿಜೆಪಿಯ ಶಾಸಕ ಶಿವರಾಂ ಹೆಬ್ಬಾರ್ ಮತ ಚಲಾಯಿಸಿಲ್ಲ.

RELATED ARTICLES

Latest News