Saturday, May 11, 2024
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (28-02-2024)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (28-02-2024)

ನಿತ್ಯ ನೀತಿ : ಜಗತ್ತನ್ನೇ ಗೆಲ್ಲಬೇಕೆಂಬ ಇಚ್ಛೆ ನಿನಗಿದ್ದರೆ ಅದಕ್ಕೆ ಬೇಕಾದದ್ದು ಒಂದೇ ಮಾರ್ಗ. ಅದು ಬೇರೆಯವರಿಗೆ ಕೆಟ್ಟದಾಗಿ ಮಾತನಾಡದಿರುವುದು.

ಪಂಚಾಂಗ ಬುಧವಾರ 28-02-2024
ಶೋಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಮಾಘ ಮಾಸ / ಕೃಷ್ಣ ಪಕ್ಷ / ತಿಥಿ: ಚತುರ್ಥಿ / ನಕ್ಷತ್ರ: ಹಸ್ತ / ಯೋಗ: ಗಂಡ / ಕರಣ: ಭವ

ಸೂರ್ಯೋದಯ : ಬೆ.06.36
ಸೂರ್ಯಾಸ್ತ : 06.28
ರಾಹುಕಾಲ : 12.00-1.30
ಯಮಗಂಡ ಕಾಲ : 7.30-9.00
ಗುಳಿಕ ಕಾಲ : 10.30-12.00

ರಾಶಿ ಭವಿಷ್ಯ
ಮೇಷ:
ಕೃಷಿಕರಿಗೆ ಆಗಾಗ ಎದುರಾಗುವ ಅಡೆತಡೆಗಳು ನಿವಾರಣೆಯಾಗಲಿವೆ.
ವೃಷಭ: ರಾಜಕೀಯ ವ್ಯಕ್ತಿಗಳು ವಿವಾದಾತ್ಮಕ ಹೇಳಿಕೆಯಿಂದಾಗಿ ಸಂಕಷ್ಟಕ್ಕೆ ಸಿಲುಕಬಹುದು.
ಮಿಥುನ: ವಾಗ್ವಾದದಲ್ಲಿ ನಿಮ್ಮನ್ನು ಮೀರಿಸುವವರೇ ಇಲ್ಲ. ಹೊಸ ಗೆಳೆಯರ ಪರಿಚಯವಾಗಲಿದೆ.

ಕಟಕ: ಮಗನ ಆರೋಗ್ಯದಲ್ಲಿ ಉಂಟಾಗುವ ವ್ಯತ್ಯಾಸದಿಂದಾಗಿ ಜವಾಬ್ದಾರಿ ಹೆಚ್ಚಾಗಲಿದೆ.
ಸಿಂಹ: ಉತ್ತಮ ಅವಕಾಶ ಗಳು ಸಿಗುವುದರಿಂದ ಆತ್ಮಗೌರವ ಹೆಚ್ಚಾಗಲಿದೆ.
ಕನ್ಯಾ: ಸ್ನೇಹಿತರ ಸಲಹೆ ಅಥವಾ ಸ್ವಾರ್ಥದ ಮನೋಭಾವದಿಂದ ಬರುವ ದುರಾಲೋಚನೆಯು ನಿಮ್ಮ ದಾರಿ ತಪ್ಪಿಸಬಹುದು.

ತುಲಾ: ಮಹತ್ವದ ಕೆಲಸ ಗಳಿಗೆ ಕೈ ಹಾಕುವ ಮುನ್ನ ಮನೆಯವರೊಂದಿಗೆ ದೀರ್ಘ ಕಾಲದ ಸಮಾಲೋಚನೆ ನಡೆಸುವುದು ಒಳಿತು.
ವೃಶ್ಚಿಕ: ಕಾನೂನಿಗೆ ಸಂಬಂಧಿಸಿದ ಕೆಲಸದಲ್ಲಿ ಜಯ ಸಿಗಲಿದೆ. ಕಲಾವಿದರಿಗೆ ಒಳ್ಳೆಯ ದಿನ.
ಧನುಸ್ಸು: ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ ಮತ್ತು ಅದರಲ್ಲಿ ನೀವು ಯಶಸ್ಸು ಸಾಧಿಸುವಿರಿ.

ಮಕರ: ಹಿರಿಯ ಅಧಿಕಾರಿಗಳ ಆಕಸ್ಮಿಕ ಭೇಟಿಯಿಂದಾಗಿ ಉದ್ಯೋಗ ಪ್ರಾಪ್ತಿಯಾಗಲಿದೆ.
ಕುಂಭ: ಉದ್ಯೋಗ ಸ್ಥಳದಲ್ಲಿ ಸಣ್ಣಪುಟ್ಟ ಸಮಸ್ಯೆ ಯಿಂದಾಗಿ ಹಿತಶತ್ರುಗಳ ಬಗ್ಗೆ ಮಾಹಿತಿ ಸಿಗಲಿದೆ.
ಮೀನ: ಸರ್ಕಾರಿ ನೌಕರರಿಗೆ ಉನ್ನತ ಸ್ಥಾನಮಾನ ಸಿಗುವುದರಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ.

RELATED ARTICLES

Latest News