Wednesday, April 24, 2024
Homeರಾಜ್ಯವಿಧಾನಸೌಧ ಮೊಗಸಾಲೆಯಲ್ಲಿ ಅಡ್ಡ ಮತದಾನದ್ದೇ ಸದ್ದು

ವಿಧಾನಸೌಧ ಮೊಗಸಾಲೆಯಲ್ಲಿ ಅಡ್ಡ ಮತದಾನದ್ದೇ ಸದ್ದು

ಬೆಂಗಳೂರು,ಫೆ.27- ತೀವ್ರ ಕುತೂಹಲ ಕೆರಳಿಸಿದ ರಾಜ್ಯಸಭೆ ಚುನಾವಣೆಯಲ್ಲಿ ಮತದಾನ ಮುಕ್ತಾಯವಾಗುತ್ತಾ ಬಂದರೂ ಅಡ್ಡಮತದಾನದ ಚರ್ಚೆಗಳು ಸದ್ದು ಮಾಡುತ್ತಲೇ ಇದ್ದವು. ಜೆಡಿಎಸ್ ನಾಯಕರು ತಮ್ಮ ಅಭ್ಯರ್ಥಿ ಡಿ.ಕುಪೇಂದ್ರ ರೆಡ್ಡಿಯವರಿಗೆ ಆತ್ಮಸಾಕ್ಷಿಯ ಮತಗಳು ಬರುತ್ತವೆ ಎಂದು ಹೇಳುತ್ತಾ ಗೊಂದಲ ಮೂಡಿಸುತ್ತಿದ್ದರೆ,
ಬಿಜೆಪಿ ನಾಯಕರು ಕಾಂಗ್ರೆಸ್‍ನಿಂದ ಅಡ್ಡಮತದಾನವಾಗಿ ಬಿಜೆಪಿಯ ನಾರಾಯಣ ಸ ಬಾಂಡಗೆಯವರೊಂದಿಗೆ ಎನ್‍ಡಿಎ ಅಭ್ಯರ್ಥಿಯಾಗಿರುವ ಜೆಡಿಎಸ್‍ನ ಕುಪೇಂದ್ರ ರೆಡ್ಡಿ ಕೂಡ ಗೆಲ್ಲುತ್ತಾರೆ ಎಂದು ಹೇಳಿಕೊಳ್ಳುತ್ತಾ ತಿರುಗಾಡುತ್ತಿದ್ದರು.

ಜೆಡಿಎಸ್‍ನ ಶಾಸಕ ಜಿ.ಟಿ.ದೇವೇಗೌಡ ನಮ್ಮ ಪಕ್ಷದ ಕುಪೇಂದ್ರ ರೆಡ್ಡಿ ಅನುಭವಿ ರಾಜಕಾರಣಿ. ಅವರಿಗೆ ಆತ್ಮಸಾಕ್ಷಿಯ ಮತಗಳು ಬಿದ್ದು, ಗೆದ್ದೇ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದಕ್ಕೆ ವ್ಯತಿರಿಕ್ತವಾಗಿ ಮಾತನಾಡಿದ ಸಚಿವ ಎಂ.ಬಿ.ಪಾಟೀಲ್, ನಮ್ಮ ಬಳಿ 135 ಶಾಸಕರಿದ್ದರು. ಒಬ್ಬರು ನಿಧನರಾಗಿದ್ದರಿಂದಾಗಿ ಸಂಖ್ಯಾಬಲ 134ಕ್ಕೆ ಇಳಿದಿದೆ. ಮೂವರು ಪಕ್ಷೇತರರು ಕಾಂಗ್ರೆಸ್ ಬೆಂಬಲಿಸಿದ್ದಾರೆ. ಪ್ರತಿ ಅಭ್ಯರ್ಥಿಗಳು ಗೆಲ್ಲಲು 45 ಮತಗಳು ಬೇಕಿದ್ದು, ಕಾಂಗ್ರೆಸ್ ಬಳಿ ಮೂವರು ಅಭ್ಯರ್ಥಿಗಳ ಗೆಲುವಿಗಾಗಿ ತಲಾ 47 ಮತಗಳಿವೆ. ಹೀಗಾಗಿ ನಮ್ಮ ಅಭ್ಯರ್ಥಿಗಳೇ ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.

ಧಮ್ಕಿ, ಬೆದರಿಸುವುದು ಕಾಂಗ್ರೆಸ್‍ನವರ ಅಭ್ಯಾಸ: ಕುಮಾರಸ್ವಾಮಿ

ಸಚಿವ ಪ್ರಿಯಾಂಕ್ ಖರ್ಗೆ, ಜೆಡಿಎಸ್-ಬಿಜೆಪಿ ಶಾಸಕರಿಗೆ ಅಡ್ಡಮತದಾನದ ಭಯ ಇರಬಹುದು. ಆದರೆ ಕಾಂಗ್ರೆಸ್‍ನಲ್ಲಿ ಇಲ್ಲ. ಚುನಾವಣೆಯಲ್ಲಿ ಹಣದುಂದುವೆಚ್ಚದಂತಹ ಕೆಟ್ಟ ವ್ಯವಸ್ಥೆ ಜಾರಿಗೆ ತಂದವರು ಬಿಜೆಪಿಯವರು ಎಂದು ವಾಗ್ದಾಳಿ ನಡೆಸಿದರು.

ಸಚಿವ ಶರಣ ಪ್ರಕಾಶ್ ಪಾಟೀಲ್, ಕಾಂಗ್ರೆಸ್ ಶಾಸಕಾಂಗ ಸಭೆಗೆ ನಮ್ಮ ಎಲ್ಲಾ ಶಾಸಕರೂ ಹಾಜರಾಗಿದ್ದರು. ಯಾರೂ ಅಡ್ಡಮತದಾನ ಮಾಡುವ ಸಾಧ್ಯತೆಗಳಿಲ್ಲ. ನಮ್ಮವರು ಸಂವಿಧಾನ ವಿರೋ ಕೆಲಸ ಮಾಡುವುದಿಲ್ಲ. ಬೇರೆಯವರಿಗೂ ಆಮಿಷ ಒಡ್ಡುವುದಿಲ್ಲ ಎಂದರು.

RELATED ARTICLES

Latest News