Saturday, September 14, 2024
Homeರಾಜ್ಯರಾಮನಗರಕ್ಕೆ ಕಾವೇರಿ ನೀರಿನ ಕನಸು ನನಸಾಗಿದೆ : ಹೆಚ್ಡಿಕೆ

ರಾಮನಗರಕ್ಕೆ ಕಾವೇರಿ ನೀರಿನ ಕನಸು ನನಸಾಗಿದೆ : ಹೆಚ್ಡಿಕೆ

ಬೆಂಗಳೂರು, ಜೂ.25– ರಾಮನಗರ ಜಿಲ್ಲೆಗೆ ಕಾವೇರಿ ನದಿಯಿಂದ ಕುಡಿಯುವ ನೀರು ಪೂರೈಸುವ ಕನಸು ನನಸಾಗಿದೆ ಎಂದು ಕೇಂದ್ರ ಉಕ್ಕು ಮತ್ತು ಬೃಹತ್‌ ಕೈಗಾರಿಕಾ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಈ ಸಂಬಂಧ ಎಕ್‌್ಸನಲ್ಲಿ ಪೋಸ್ಟ್‌ ಮಾಡಿರುವ ಅವರು, ರಾಮನಗರ ಜಿಲ್ಲೆಗೆ ಕಾವೇರಿ ತಾಯಿ ಪದಾರ್ಪಣೆ ಮಾಡಿದ್ದಾಳೆ. ಈ ನೆಲದ ಜನರ ಕನಸು ನನಸಾಗಿದೆ ಎಂದು ಹೇಳಿದ್ದಾರೆ.

ಕಳೆದ 2018ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ 458 ಕೋಟಿ ರೂ. ವೆಚ್ಚದಲ್ಲಿ ಟಿ.ಕೆ.ಹಳ್ಳಿಯಿಂದ ರಾಮನಗರ ಜಿಲ್ಲೆಗೆ ಕಾವೇರಿ ನೀರು ಪೂರೈಸುವ ಮಹತ್ವಾಕಾಂಕ್ಷಿ ಯೋಜನೆಗೆ ಅನುಮೋದನೆ ನೀಡಿದ್ದೆ.

ಈ ಯೋಜನೆ ಇದೀಗ ಸಾಕಾರಗೊಂಡಿದ್ದು, ಪ್ರಾಯೋಗಿಕವಾಗಿ ಬೋಳಪ್ಪನಹಳ್ಳಿ ಗುಡ್ಡಕ್ಕೆ ಕಾವೇರಿ ನೀರು ಹರಿದು ಬಂದಿದೆ ಎಂದಿದ್ದಾರೆ.ಇದು ನನಗಷ್ಟೇ ಅಲ್ಲ, ಇಡೀ ಜಿಲ್ಲೆಯ ಜನರ ಸಂಭ್ರಮಕ್ಕೆ ಕಾರಣವಾಗಿದೆ. ನನಗೆ ರಾಜಕೀಯ ಜನ ಕೊಟ್ಟ ಈ ನೆಲದ ಋಣ ತೀರಿಸಲು ಮತ್ತಷ್ಟು ಶ್ರಮಿಸುತ್ತೇನೆ ಎಲ್ಲರಿಗೂ ಶುಭವಾಗಲಿ ಎಂದು ತಿಳಿಸಿದ್ದಾರೆ.

RELATED ARTICLES

Latest News