Thursday, February 29, 2024
Homeರಾಜ್ಯಡಿಡಿಯಲ್ಲಿ ರಾಮಾಯಣ ಮರುಪ್ರಸಾರ

ಡಿಡಿಯಲ್ಲಿ ರಾಮಾಯಣ ಮರುಪ್ರಸಾರ

ಬೆಂಗಳೂರು,ಫೆ.4- ದೇಶದ ಜನರ ಮನ ಗೆದ್ದಿದ್ದ ರಮಾನಂದ್ ಸಾಗರ್ ಅವರ ನಿರ್ದೇಶನದ ರಾಮಾಯಣವನ್ನು ಮರುಪ್ರಸಾರ ಮಾಡುವುದಾಗಿ ರಾಷ್ಟ್ರೀಯ ವಾಹಿನಿ ಡಿಡಿ ನ್ಯಾಷನಲ್ ಘೋಷಣೆ ಮಾಡಿದೆ. ಅದರಂತೆ ನಾಳೆಯಿಂದಲೇ ನೀವು ಪ್ರತಿದಿನ ಸಂಜೆ 6 ಗಂಟೆಗೆ ಹಾಗೂ ಮರುದಿನ ಮಧ್ಯಾಹ್ನ 12 ಗಂಟೆಗೆ ರಾಮಾಯಣವನ್ನು ಮತ್ತೆ ವೀಕ್ಷಿಸಬಹುದಾಗಿದೆ ಎಂದು ಡಿಡಿ ತಿಳಿಸಿದೆ.

ಈ ಮೆಗಾ ಸೀರಿಯಲ್‍ನಲ್ಲಿ ರಾಮನಾಗಿ ನಟಿಸಿದ್ದ ಅರುಣ್ ಗೋವಿಲ್, ಸೀತೆಯಾಗಿ ನಟಿಸಿದ್ದ ದೀಪಿಕಾ ಚಿಕಾಲಿಯಾ ಹಾಗೂ ಲಕ್ಷ್ಮಣ ಪಾತ್ರದಲ್ಲಿ ನಟಿಸಿದ್ದ ಸುನೀಲ್ ಲೆಕ್ರಿ ಅವರಿಗೆ ಜನವರಿ 22 ರಂದು ನಡೆದ ಅಯೋಧ್ಯೆ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆಯಲ್ಲಿ ಅಧಿಕೃತ ಆಹ್ವಾನ ನೀಡಲಾಗಿತ್ತು.

ಅಯೋಧ್ಯೆಗೆ ಹೋಗಿದ್ದ ಇವರನ್ನು ಸ್ಥಳೀಯ ಜನ ಖುಷಿಯಿಂದಲೇ ಸ್ವಾಗತಿಸಿದ್ದರು. ಇದೀಗ ಸೀರಿಯಲ್ ಅನ್ನು ಮರು ಪ್ರಸಾರ ಮಾಡುವುದಾಗಿ ಡಿಡಿ ನ್ಯಾಷನಲ್ ಘೋಷಣೆ ಮಾಡಿದೆ.

RELATED ARTICLES

Latest News