Friday, May 3, 2024
Homeರಾಜ್ಯಕೇಂದ್ರಿಯ ವಿದ್ಯಾಲಯಕ್ಕೆ ಬಾಂಬ್ ಬೆದರಿಕೆ

ಕೇಂದ್ರಿಯ ವಿದ್ಯಾಲಯಕ್ಕೆ ಬಾಂಬ್ ಬೆದರಿಕೆ


ಬೆಂಗಳೂರು, ಫೆ.4- ನಗರದ ಯಶವಂತಪುರದಲ್ಲಿರುವ ಕೇಂದ್ರಿಯ ವಿದ್ಯಾಲಯಕ್ಕೆ ಬಾಂಬ್ ಇಡಲಾಗಿದೆ ಎಂದು ಹೇಳಿ ಆಗಂತಕನೊಬ್ಬ ಆತಂಕ ಸೃಷ್ಟಿಸಿ ಘಟನೆ ನಡೆದಿದೆ. ಇ-ಮೇಲ್ ಮೂಲಕ ಯಶವಂತಪುರದಲ್ಲಿರುವ ಕೇಂದ್ರಿಯ ವಿದ್ಯಾಲಯದ ಭಾರತೀಯ ವಿದ್ಯಾಸಂಸ್ಥೆಗೆ ಸಂದೇಶ ಬಂದಿದ್ದು, ಬೆಳಗ್ಗೆ 10.20ಕ್ಕೆ ಸ್ಪೋಟಗೊಳ್ಳಲಿದೆ ಎಂದು ಅದರಲ್ಲಿತ್ತು.

ಭಾನುವಾರ ರಜೆ ಕಾರಣ ಮಕ್ಕಳು ಶಾಲೆಗೆ ಬಂದಿರಲಿಲ್ಲ. ಆದರೆ ಶಾಲೆಯ ಇ-ಮೇಲ್ ಪ್ರಾಂಶುಪಾಲರಿಗೆ ಮತ್ತು ಅಧಿಕಾರಿಗಳಿಗೆ ತಿಳಿಯುತ್ತಿತ್ತು. ಅದರಂತೆ ಇಂದು ಮುಂಜಾನೆ ಇ-ಮೇಲ್ ಬಂದಿದೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

ಸ್ಥಳಕ್ಕೆ ದಾವಿಸಿದ ಯಶವಂತಪುರ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳ ಸಂಪೂರ್ಣವಾಗಿ ಶಾಲೆ ಕೊಠಡಿ ಹಾಗೂ ಆವರಣವನ್ನು ಪರಿಶೀಲನೆ ನಡೆಸಿದಾಗ ಇದು ಹುಸಿ ಬೆದರಿಕೆ ಎಂದು ಗೊತ್ತಾಗಿದೆ. ಕೇಂದ್ರಿಯ ವಿದ್ಯಾಲಯವಾಗಿರುವುದರಿಂದ ಬಹುತೇಕ ಇಲ್ಲಿ ಭಾರತೀಯ ಸೇನೆಯ ಯೋಧರ ಮಕ್ಕಳು, ಕೇಂದ್ರ ಸರ್ಕಾರಿ ನೌಕರರ ಮಕ್ಕಳು ಇಲ್ಲಿ ಹೆಚ್ಚಾಗಿ ವ್ಯಾಸಂಗ ಮಾಡುತ್ತಿದ್ದಾರೆ.

ಅವರಲ್ಲಿ ಆತಂಕ ಮೂಡಿಸಲು ಈ ಕುಚೋದ್ಯ ಕೃತ್ಯವನ್ನು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೇಂದ್ರಿಯ ವಿದ್ಯಾಲಯ ಪ್ರಿನ್ಸಿಪಾಲ್ ಅಮೃತಬಾಲ ಅವರು ನೀಡಿರುವ ದೂರನ್ನು ದಾಖಲಿಸಿಕೊಂಡಿರುವ ಯಶವಂತಪುರ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಶಾಲೆಯ ವೆಬ್‍ಸೈಟ್‍ಗೆ ಬಂದಿರುವ ಇ-ಮೇಲ್ ವಿಳಾಸದ ಬಗ್ಗೆ ಸೈಬರ್ ಕ್ರೈಂ ವಿಭಾಗದ ತಜ್ಞರ ಸಹಕಾರವನ್ನು ಕೂಡ ಕೊರಲಾಗಿದೆ.

ಜೈ ಶ್ರೀರಾಮ್ ಹೇಳುವಷ್ಟೇ ಗಟ್ಟಿಯಾಗಿ ಜೈ ಕರ್ನಾಟಕ ಹೇಳಿ : ಪ್ರಿಯಾಂಕ್ ಖರ್ಗೆ

ಕಳೆದ 2023ರ ಡಿಸೆಂಬರ್ 1ರಂದು ಇದೇ ರೀತಿ ಬೆಂಗಳೂರಿನ ಹಲವಾರು ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಿತ್ತು. ಇದರಿಂದಾಗಿ ಶಾಲೆ ಆಡಳಿತ ಮಂಡಳಿಗಳು ಬೆಚ್ಚಿ ಬಿದ್ದಿದ್ದವು. ನಗರದ 30ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಲಾಗಿತ್ತು. ಮಕ್ಕಳು, ಆಡಳಿತ ಮಂಡಳಿ ಮತ್ತು ಪೋಷಕರು ಆತಂಕಕ್ಕೀಡಾಗಿದ್ದರು.ಪೊಲೀಸರು ಶಾಲೆಗಳಿಗೆ ದೌಡಾಯಿಸಿದ್ದು, ಬಾಂಬ್ ತಪಾಸಣೆ ದಳಗಳೂ ಬಂದಿದ್ದವು. ಎಲ್ಲಾ ಶಾಲೆಗಳಿಂದ ಮಕ್ಕಳನ್ನು ಹೊರಗೆ ಕಳುಹಿಸಲಾಗಿದ್ದು, ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು.

ಈ ಮೇಲ್ ಮೂಲಕ ಈ ಬಾಂಬ್ ಬೆದರಿಕೆ ಬಂದಿದೆ ಎಂದು ಹೇಳಲಾಗಿದ್ದು, ಬೆಳಗ್ಗೆ ಮೇಲ್ ಚೆಕ್ ಮಾಡುವಾಗ ಈ ವಿಷಯ ಗೊತ್ತಾಗಿದೆ. ಇದು ತಿಳಿಯುತ್ತಿದ್ದಂತೆಯೇ ಕೂಡಲೇ ಮಕ್ಕಳನ್ನು ಹೊರಗೆ ಕಳುಹಿಸಲಾಗಿತ್ತು. ಆಗಷ್ಟೇ ಒಳಗೆ ಬರುತ್ತಿದ್ದ ಮಕ್ಕಳನ್ನು ಒಳಗೆ ಬರದಂತೆ ಸೂಚಿಸಲಾಗಿತ್ತು. ಈ ವೇಳೆ ಹೆತ್ತವರು ಕೂಡಾ ಮಕ್ಕಳನ್ನು ಬಿಡಲು ಆಗಮಿಸಿದವರು ಅಲ್ಲೇ ಇದ್ದಿದ್ದರಿಂದ ಆತಂಕದ ವಾತಾವರಣ ಹೆಚ್ಚಾಯಿತು. ಕೆಲವರು ವಿಷಯ ತಿಳಿಯುತ್ತಿದ್ದಂತೆಯೇ ಓಡಿ ಬಂದಿದ್ದರು.

RELATED ARTICLES

Latest News