ಬೆಂಗಳೂರು, ಅ.26- ರಾಜ್ಯಸರ್ಕಾರದ ಮಹತ್ವಕಾಂಕ್ಷೆ ಯೋಜನೆಯಾದ ರೇಷನ್ ಡೋರ್ ಡೆಲಿವರಿಗೆ ದಿನಗಣನೆ ಆರಂಭವಾಗಿದ್ದು, ನವೆಂಬರ್‍ನಿಂದ ಹಿರಿಯ ನಾಗರಿಕರಿಗೆ ಮನೆ ಬಾಗಿಲಿಗೆ ಪಡಿತರ ಭಾಗ್ಯ ದೊರೆಯಲಿದೆ.
ಆಹಾರ ಇಲಾಖೆಯು ಈ ನೂತನ ಇಲಾಖೆ ಯೋಜನೆಗೆ ಈಗಾಗಲೆ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಮನೆ ಬಾಗಿಲಿಗೆ ಪಡಿತರ ಸರಬರಾಜು ಮಾಡಲು ದರ ಕೂಡ ನಿಗದಿ ಮಾಡಿದೆ. ಹಿರಿಯ ನಾಗರಿಕರಿಗೆ ನವೆಂಬರ್ ತಿಂಗಳಿನಿಂದ ಅಧಿಕೃತವಾಗಿ ಪಡಿತರ ಮನೆ ಬಾಗಿಲಿಗೆ ತಲುಪಲಿದೆ. 90 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಪಡಿತರ ಚೀಟಿಯಲ್ಲಿ ಅವರ ಒಬ್ಬರದ್ದೇ ಹೆಸರಿದ್ದರೆ ಈ ಯೋಜನೆ ದೊರೆಯಲಿದೆ.
ರಾಜ್ಯದಲ್ಲಿ 7 ಸಾವಿರ ಫಲಾನುಭವಿಗಳನ್ನು ಆಹಾರ ಇಲಾಖೆ ಗುರುತಿಸಿದ್ದು, ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ಪೈಲೇಟ್ ಪ್ರಾಜೆಕ್ಟ್ ಪ್ರಾರಂಭ ಕೂಡ ಮಾಡುತ್ತಿದೆ. ಸದ್ಯ ಪಡಿತರ ಕೇಂದ್ರಗಳಲ್ಲಿ ಅಕ್ಕಿಯನ್ನು ಉಚಿತವಾಗಿ ನೀಡುತ್ತಿದ್ದು, ಪ್ರತಿ ಮನೆ ಬಾಗಿಲಿಗೆ ತಲುಪಿಸಲು 50 ರೂ. ಡೆಲವರಿ ಚಾರ್ಜ್ ನಿಗದಿ ಮಾಡಲಾಗುತ್ತದೆ.
“ಬಿಜೆಪಿ ನಾಯಕರಿಗೆ ಮಾಡೋಕೆ ಕೆಲಸ ಇಲ್ಲ, ಬಾಯಿ ಚಟಕ್ಕೆ ಮಾತಾಡ್ತಾರೆ”
ನವೆಂಬರ್ ಮೊದಲ ವಾರದಲ್ಲಿ ಮುಖ್ಯಮಂತ್ರಿಗಳು ಡೋರ್ ಡೆಲವರಿ ಯೋಜನೆಗೆ ಚಾಲನೆ ನೀಡಲಿದ್ದಾರೆ. ಇದರಿಂದ ವೃದ್ಧರು ಪಡಿತರಕ್ಕಾಗಿ ನ್ಯಾಯಬೆಲೆ ಅಂಗಡಿಗಳ ಮುಂದೆ ಸರದಿ ಸಾಲಿನಲ್ಲಿ ನಿಲ್ಲುವುದು ತಪ್ಪಲಿದ್ದು, ಇದರಿಂದ ಸಮಯವು ಉಳಿತಾಯವಾಗಲಿದೆ. ಈ ಯೋಜನೆಯಿಂದ ವೃದ್ಧರಿಗೆ ಅನುಕೂಲವಾಗಲಿದೆ ಎಂದು ಹಿರಿಯ ನಾಗರಿಕರು ಅಭಿನಂದನೆ ಸಲ್ಲಿಸಿದ್ದಾರೆ.