Sunday, May 19, 2024
Homeಕ್ರೀಡಾ ಸುದ್ದಿಟೀಮ್ ಇಂಡಿಯಾಗೆ ಮರಳಿದ ಜಡೇಜಾ

ಟೀಮ್ ಇಂಡಿಯಾಗೆ ಮರಳಿದ ಜಡೇಜಾ

ರಾಜ್‍ಕೋಟ್, ಫೆ. 14- ಮಂಡಿರಜ್ಜು ಗಾಯದ ಸಮಸ್ಯೆಯಿಂದ ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್‍ನಿಂದ ಹೊರಗುಳಿದಿದ್ದ ರವೀಂದ್ರ ಜಡೇಜಾ ತಂಡಕ್ಕೆ ಮರಳಿದ್ದಾರೆ. ಹೈದರಾಬಾದ್‍ನ ರಾಜೀವ್‍ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯದ ಕ್ಷೇತ್ರ ರಕ್ಷಣೆಯ ವೇಳೆ ಗಾಯಗೊಂಡಿದ್ದ ರವೀಂದ್ರ ಜಡೇಜಾ ಅವರು ಬೆಂಗಳೂರಿನಲ್ಲಿರುವ ಎನ್‍ಸಿಎಯಲ್ಲಿ ಚಿಕಿತ್ಸೆ ಪಡೆದಿದ್ದು ಫಿಟ್ನೆಸ್ ಸರ್ಟಿಫಿಕೇಟ್ ಪಡೆದಿದ್ದು ಮೂರನೇ ಪಂದ್ಯಕ್ಕೆ ಲಭ್ಯವಾಗಿದ್ದಾರೆ.

ಅಬುಧಾಬಿಯಲ್ಲಿ ನಿರ್ಮಾಣವಾದ ಮೊದಲ ಹಿಂದೂ ದೇವಾಲಯದ ವಿಶೇಷತೆಗಳೇನು ಗೊತ್ತೇ..?

ಮಾರ್ಕ್‍ವುಡ್‍ಗೆ ಸ್ಥಾನ
ರಾಜ್‍ಕೋಟ್, ಫೆ. 14- ಟೀಮ್‍ಇಂಡಿಯಾ ವಿರುದ್ಧ ನಾಳೆಯಿಂದ ನಡೆಯಲಿರುವ 3ನೇ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್‍ನ ಬಲಿಷ್ಠ ಪ್ಲೇಯಿಂಗ್ 11 ಪ್ರಕಟಿಸಿದೆ. ವಿಶಾಖಪಟ್ಟಂನ ಎಸಿಎ- ವಿಡಿಸಿಎ ಕ್ರೀಡಾಂಗಣದಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ತಂಡದಿಂದ ಹೊರಗುಳಿದಿದ್ದ ಅನುಭವಿ ವೇಗಿ ಮಾರ್ಕ್‍ವುಡ್ ತಂಡಕ್ಕೆ ಮರಳಿದ್ದು , ಜಾಕ್ ಲೀಚ್ ಬದಲಿಗೆ ತಂಡದಲ್ಲಿದ್ದ ಸ್ಥಾನ ಪಡೆದಿದ್ದ ಶೋಯಿಬ್ ಬಷೀರ್ ಹೊರ ನಡೆದಿದ್ದಾರೆ.

ಇಂಗ್ಲೆಂಡ್ ಬಲಿಷ್ಠ ಪ್ಲೇಯಿಂಗ್ 11:
ಝಾಕ್ ಕ್ರಾಲಿ, ಬೆನ್ ಡಕೆಟ್, ಒಲ್ಲಿ ಪೋಪ್, ಜೋ ರೂಟ್, ಜಾನಿ ಬೈರ್‍ಸ್ಟೋವ್, ಬೆನ್ ಸ್ಟೋಕ್ಸ್ (ನಾಯಕ), ಬೆನ್ (ವಿಕೆಟ್ ಕೀಪರ್), ರೆಹಾನ್ ಅಹ್ಮದ್, ಟಾಮ್ ಹಾಟ್ರ್ಲೆ, ಮಾರ್ಕ್ ವುಡ್, ಜೇಮ್ಸ ಆಂಡರ್ಸನ್.

RELATED ARTICLES

Latest News