Monday, November 25, 2024
Homeರಾಜ್ಯರಾಜಕಾರಣದಲ್ಲಿ ಧರ್ಮವನ್ನು ಬೆರೆಸುವುದು ಸಂವಿಧಾನಕ್ಕೆ ವಿರುದ್ಧ : ಬಿ.ಕೆ.ಹರಿಪ್ರಸಾದ್

ರಾಜಕಾರಣದಲ್ಲಿ ಧರ್ಮವನ್ನು ಬೆರೆಸುವುದು ಸಂವಿಧಾನಕ್ಕೆ ವಿರುದ್ಧ : ಬಿ.ಕೆ.ಹರಿಪ್ರಸಾದ್

ಬೆಂಗಳೂರು,ಜ.11-ಧರ್ಮದಲ್ಲಿ ರಾಜಕಾರಣ ಮಾಡುವುದು, ರಾಜಕಾರಣದಲ್ಲಿ ಧರ್ಮವನ್ನು ಬೆರೆಸುವುದು ಸಂವಿಧಾನಕ್ಕೆ ವಿರುದ್ಧವಾಗಿದೆ. ಸಂವಿಧಾನವನ್ನು ಉಲ್ಲಂಘಿಸುವ ಬಿಜೆಪಿಯವರು ದೇಶದ್ರೋಹಿಗಳು ಎಂದು ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ದೂರಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜ.22 ರಂದು ಅಯೋಧ್ಯೆಯಲ್ಲಿ ನಡೆಯುವ ರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಿಂದ ದೂರ ಉಳಿಯುವುದಾಗಿ ಹೈಕಮಾಂಡ್ ತೆಗೆದುಕೊಂಡಿರುವ ನಿರ್ಧಾರ ಸ್ವಾಗತಾರ್ಹ. ಇದಕ್ಕೆ ನನ್ನ ಸಹಮತ ಇದೆ ಎಂದರು.

ಈ ಹಿಂದೆ ತಾವು ಎಐಸಿಸಿ ಅಧ್ಯಕ್ಷರಿಗೆ ಪತ್ರ ಬರೆದು ಜ.22 ರಂದು ನಡೆಯಲಿರುವ ಕಾರ್ಯಕ್ರಮ ರಾಜಕೀಯ ಪ್ರಮುಕ್ತವಾಗಿದೆ. ಅದು ಧಾರ್ಮಿಕ ಕಾರ್ಯಕ್ರಮ ಅಲ್ಲ. ಹಾಗಾಗಿ ಅದರಿಂದ ದೂರ ಉಳಿಯುವುದು ಒಳ್ಳೆಯದು ಎಂದು ಸಲಹೆ ನೀಡಿದ್ದಾಗಿ ತಿಳಿಸಿದರು. ತಮಗೆ ತಿಳಿದಿರುವ ಅಲ್ಪಸ್ವಲ್ಪ ಧಾರ್ಮಿಕ ವಿಚಾರಗಳ ಪ್ರಕಾರ, ಹಿಂದೂ ಧರ್ಮದ ಮೂಲಗುರು ಎಂದರೆ ಆದಿ ಶಂಕರಾಚಾರ್ಯರು. ಅವರು ಸ್ಥಾಪಿಸಿದ ಮಠದ ಜಗದ್ಗುರುಗಳು ಅಯೋಧ್ಯೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮವನ್ನು ಬಹಿಷ್ಕರಿಸಿದ್ದಾರೆ.

ರಾಮ, ಶಿವ ಎಲ್ಲರ ದೇವರು, ಇದರಲ್ಲಿ ಅನಗತ್ಯ ರಾಜಕೀಯ ಬೇಡ : ಸಚಿವ ಎಂ.ಬಿ.ಪಾಟೀಲ್

ಒಂದು ವೇಳೆ ಆದಿ ಶಂಕರಾಚಾರ್ಯ ಮಠದ ಜಗದ್ಗುರುಗಳು ರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮಾಡಿದ್ದರೆ ಅದರಲ್ಲಿ ನಾವು ಭಾಗವಹಿಸುತ್ತಿದ್ದೆವು. ಯಾರ ಆಹ್ವಾನವೂ ಬೇಕಿರಲಿಲ್ಲ. ಮಂತ್ರಾಕ್ಷತೆ ನೀಡುವಂತಹ ನಾಟಕವೂ ಬೇಕಾಗುತ್ತಿರಲಿಲ್ಲ ಎಂದು ತಿಳಿಸಿದರು.

ದೇವರು ಎಂದರೆ ನಂಬಿಕೆ. ಬಿಜೆಪಿಯವರು ಧರ್ಮದಲ್ಲಿ ರಾಜಕೀಯ ಬೆರೆಸಿ ಧರ್ಮ ವಿರೋಧಿಗಳಾಗಿದ್ದಾರೆ. ರಾಜಕೀಯದಲ್ಲಿ ಧರ್ಮ ತಂದು ಸಂವಿಧಾನ ವಿರೋಗಳೂ ಆಗಿ ದೇಶದ್ರೋಹಿಗಳಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಹಿಂದೂ ಉದಯ ಸಾಮ್ರಾಟ ಎಂದು ಬಿಂಬಿಸಿಕೊಳ್ಳುತ್ತಿರುವವರು 2014 ಮತ್ತು 2019 ರ ಚುನಾವಣೆಯಲ್ಲಿ ಹಿಂದೂಗಳ ಎಷ್ಟು ಮತ ಪಡೆದಿದ್ದಾರೆ ಎಂಬ ಅಂಕಿ ಅಂಶಗಳನ್ನು ನೋಡಿದರೆ ವಾಸ್ತವಾಂಶ ದೊರೆಯುತ್ತದೆ. ಒಟ್ಟು ಮತದಾರರ ಪೈಕಿ ಬಿಜೆಪಿಯವರಿಗೆ ಕಾಲು ಭಾಗವೂ ಮತ ಬಂದಿಲ್ಲ. ಹೀಗಿರುವಾಗ ಬಿಜೆಪಿಗೆ ಹಿಂದೂ ಧರ್ಮದ ಬೆಂಬಲ ಇದೆ ಎಂದು ಹೇಗೆ ಹೇಳಿಕೊಳ್ಳುತ್ತಾರೆ ಎಂದು ತಿಳಿಸಿದರು.

ಬಿಜೆಪಿಯವರು ಎಂದಿಗೂ ಜನರ ಪರವಾದ ವಿಚಾರಗಳ ಕುರಿತು ಚರ್ಚೆ ಮಾಡುವುದಿಲ್ಲ. ಪಕ್ಷ ಉದಯವಾದಾಗಲೇ 370 ರದ್ದುಪಡಿಸುವುದು, ಏಕರೂಪ ನಾಗರಿಕ ಸಂಹಿತೆ ಜಾರಿ ಮತ್ತು ಅಯೋಧ್ಯೆ ಅವರ ಅಜೆಂಡಾವಾಗಿತ್ತು. ಅದರ ಹೊರತಾಗಿ ಜನರ ಬದುಕಿನ ಸುಧಾರಣೆಗಳ ಬಗ್ಗೆ ಅವರು ಚಿಂತಿಸುವುದಿಲ್ಲ. ಯುವಕರು, ವಿದ್ಯಾರ್ಥಿಗಳು, ಕಾರ್ಮಿಕರು, ಮಹಿಳೆಯರು, ರೈತರು, ಕೈಗಾರಿಕೆಗಳ ಬಗ್ಗೆ ಬಿಜೆಪಿಯವರು ಯಾವತ್ತೂ ಪ್ರಸ್ತಾಪಿಸುವುದಿಲ್ಲ ಎಂದು ಹೇಳಿದರು.

RELATED ARTICLES

Latest News