Saturday, May 4, 2024
Homeರಾಜ್ಯಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ರಾಜ್ಯ ಸಮಿತಿ ಪುನಾರಚನೆ

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ರಾಜ್ಯ ಸಮಿತಿ ಪುನಾರಚನೆ

ಬೆಂಗಳೂರು,ಏ.2- ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ರಾಜ್ಯ ಸಮಿತಿಯನ್ನು ಪುನರ್ ರಚಿಸಲಾಗಿದ್ದು, 7 ಜಿಲ್ಲಾಧ್ಯಕ್ಷರು, 43 ಉಪಾಧ್ಯಕ್ಷರು, 138 ಪ್ರಧಾನ ಕಾರ್ಯದರ್ಶಿಗಳನ್ನು ನಿಯೋಜಿಸಲಾಗಿದೆ. ಜೊತೆಗೆ ಮಾಧ್ಯಮ ಮತ್ತು ಸಂವಹನ ಘಟಕಕ್ಕೆ ಅಧ್ಯಕ್ಷರಾಗಿದ್ದ ಸಚಿವ ಪ್ರಿಯಾಂಕ ಖರ್ಗೆ ಅವರ ಬದಲಾಗಿ ಇದೇ ಘಟಕದಲ್ಲಿ ಉಪಾಧ್ಯಕ್ಷರಾಗಿದ್ದ ರಮೇಶ್ ಬಾಬು ಅವರಿಗೆ ಬಡ್ತಿ ನೀಡಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ವಿಧಾನಸಭೆ ಟಿಕೆಟ್ ವಂಚಿತೆ ಐಶ್ವರ್ಯ ಮಹದೇವ್ ಅವರನ್ನು ಸಹ ಅಧ್ಯಕ್ಷರನ್ನಾಗಿ, ಇ.ಸತ್ಯಪ್ರಕಾಶ್‍ರನ್ನು ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ.ಸಾಮಾಜಿಕ ಜಾಲತಾಣಕ್ಕೆ ವಿಜಯ್ ಮತ್ತಿಕಟ್ಟಿ, ನಿಖಿತ್ ರಾಜ್ ಮೌಲ್ಯ ಅವರನ್ನು ಸಹ ಅಧ್ಯಕ್ಷರನ್ನಾಗಿ ನಿಯೋಜಿಸಲಾಗಿದೆ. ಖಜಾಂಚಿಯನ್ನಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‍ರವರ ಆಪ್ತ ವಿನಯ್ ಕಾರ್ತಿಕ್ ಮುಂದುವರೆದಿದ್ದಾರೆ.

ಬಳ್ಳಾರಿ ನಗರ ಜಿಲ್ಲೆಗೆ ಹಿರಿಯ ನಾಯಕ ಅಲ್ಲಮ ವೀರಭದ್ರಪ್ಪ ಅವರ ಪುತ್ರ ಪ್ರಶಾಂತ್, ಬೆಂಗಳೂರು ಪೂರ್ವಕ್ಕೆ ಕೆ.ನಂದಕುಮಾರ್, ಹಾವೇರಿಗೆ ಸಂಜೀವ್ ಕುಮಾರ್ ನೀರಲಂಗಿ, ಕೊಪ್ಪಳಕ್ಕೆ ಅಮರೇಗೌಡ ಬಯ್ಯಾಪುರ, ಉಡುಪಿಗೆ ಕೃಷ್ಣ ಹೆಗ್ಡೆ, ರಾಯಚೂರಿಗೆ ಬಸವರಾಜ್ ಇಟಗಿ, ಶಿವಮೊಗ್ಗಕ್ಕೆ ಆರ್.ಪ್ರಸನ್ನಕುಮಾರ್ ಜಿಲ್ಲಾಧ್ಯಕ್ಷರಾಗಿದ್ದಾರೆ.

ಉಪಾಧ್ಯಕ್ಷರು :
ಬಿ.ಎಲ್.ಶಂಕರ್, ಅಜಯ್‍ಕುಮಾರ್ ಸರ್‍ನಾಯಕ್, ಮೆಹಬೂಬ ಸೌದಾಗರ್, ಆನಂದ್ ನ್ಯಾಮೆಗೌಡ, ವಿ.ಎಸ್.ಉಗ್ರಪ್ಪ, ಒಬೆದುಲ್ಲಾ ಶರೀಫ್, ಎಂ.ನಾರಾಯಣಸ್ವಾಮಿ, ವೆಂಕಟರಮಣಯ್ಯ, ಆರ್.ವಿ.ವೆಂಕಟೇಶ್, ಎಂ.ಸಿ.ವೇಣುಗೋಪಾಲ್, ಪಿ.ಆರ್.ರಮೇಶ್, ಎನ್.ಕೃಷ್ಣರಾಜು, ಜಾನ್‍ವೆಸ್ಲೆ, ಐವಾನ್ ಡಿಸೋಜ, ರಮಾನಾಥ್ ರೈ, ಕೆ.ಶಿವಮೂರ್ತಿ, ಮೋಹನ್ ಲಿಂಬಿಕಾಯಿ, ವಿ.ಆರ್.ಸುದರ್ಶನ್, ಸೂರಜ್ ಹೆಗ್ಡೆ ಸೇರಿದಂತೆ 43 ಮಂದಿಯನ್ನು ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ಪ್ರಧಾನ ಕಾರ್ಯದರ್ಶಿ :
ದಯಾನಂದ್ ಎಸ್.ಪಾಟೀಲ್, ಮುರಳಿ ಕೃಷ್ಣ, ಉಮೇಶ್ ಬಾಬು, ಸುಧಾಕರ್ ಬಡಿಗೆ, ಜಿ.ಎ.ಬಾವ, ಅಗಾ ಸುಲ್ತಾನ್, ಜಿ.ಶೇಖರ್, ಎಂ.ರಾಮಚಂದ್ರಪ್ಪ, ಮತೀಲ್ಡಾ ಡಿಸೋಜ, ಪ್ರವೀಣ್ ಪೀಟರ್, ಎಚ್.ನಾಗೇಶ್, ಎಸ್.ಮನೋಹರ್, ವಿಜಯ್ ಕೆ. ಮುಳಗೊಂದ್, ಮಂಜುಳಾ ನಾಯ್ಡು, ಹುಚ್ಚಪ್ಪ, ಮಿಲಿಂದ್ ಧರ್ಮಸೇನ, ಭಾವನ ರಾಮಣ್ಣ, ಕೆಂಚೇಗೌಡ, ಮದನ್‍ಪಟೇಲ್, ಗುರಪ್ಪ ನಾಯ್ಡು, ಎಸ್.ಎ.ಹುಸೇನ್, ಎಂ.ಉದಯಶಂಕರ್, ಡಾ.ಬಿ.ತಿಪ್ಪೇಸ್ವಾಮಿ, ಮಿಥುನ್ ರೈ, ರಕ್ಷಿತ್ ಶಿವರಾಂ, ರಾಜ್‍ಗೋಪಾಲ ರೆಡ್ಡಿ, ಸ್ವಾಮಿ ಮಳಗಿ, ರಾಜೇಶ್ವರಿ ಪಾಟೀಲ್, ಡಾ.ಡಿ.ಸಿ.ಮುದ್ದುಗಂಗಾಧರ್, ಸಿ.ಆರ್.ಮನೋಹರ್, ಎಂ.ನಾರಾಯಣಸ್ವಾಮಿ, ನಿಕೇತ್‍ರಾಜ್ ಮೌರ್ಯ, ನಿವೇದಿತ್ ಆಳ್ವ, ಪೂರ್ಣಿಮಾ ಶ್ರೀನಿವಾಸ್, ಸೌಮ್ಯರೆಡ್ಡಿ ಸೇರಿದಂತೆ 138 ಮಂದಿಯನ್ನು ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಿಯೋಜಿಸಲಾಗಿದೆ.

RELATED ARTICLES

Latest News