Monday, February 26, 2024
Homeರಾಜ್ಯಗಣರಾಜ್ಯೋತ್ಸವದ ಪರೇಡ್‍ನಲ್ಲಿ ಕರ್ನಾಟಕದ ಸ್ತಬ್ಧಚಿತ್ರ ತಿರಸ್ಕಾರ : ಕನ್ನಡಿಗರ ಆಕ್ರೋಶ

ಗಣರಾಜ್ಯೋತ್ಸವದ ಪರೇಡ್‍ನಲ್ಲಿ ಕರ್ನಾಟಕದ ಸ್ತಬ್ಧಚಿತ್ರ ತಿರಸ್ಕಾರ : ಕನ್ನಡಿಗರ ಆಕ್ರೋಶ

ಬೆಂಗಳೂರು,ಜ.9- ಗಣರಾಜ್ಯೋತ್ಸವದ ಹೆಮ್ಮೆಯ ಪರೇಡ್‍ನಲ್ಲಿ ಭಾಗವಹಿಸಲು ರಾಜ್ಯಸರ್ಕಾರದ ಪ್ರಸ್ತಾವನೆಯನ್ನು ತಿರಸ್ಕರಿಸುವ ಮೂಲಕ ಕೇಂದ್ರ ಸರ್ಕಾರ ಮತ್ತೊಮ್ಮೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ. ಜನವರಿ 26 ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದಲ್ಲಿ ಐತಿಹಾಸಿಕವಾದ ಜಾಥಾ ನಡೆಯಲಿದೆ. ಅದರಲ್ಲಿ ವಿವಿಧ ರಾಜ್ಯಗಳ ಸ್ತಬ್ಧ ಚಿತ್ರಗಳು ಪಾಲ್ಗೊಳ್ಳುತ್ತವೆ. ಗಣರಾಜ್ಯೋತ್ಸವದ ಪೆರೇಡ್‍ನಲ್ಲಿ ಪಾಲ್ಗೊಳ್ಳುವುದು ಹೆಮ್ಮೆಯ ವಿಚಾರ. ಈ ಬಾರಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ನಗರದ ದೇವತೆ ಅಣ್ಣಮ್ಮ ದೇವಿಯ ಪ್ರತಿಕೃತಿಗಳ ಸ್ತಬ್ಧ ಚಿತ್ರಕ್ಕೆ ಅವಕಾಶ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.

ಆದರೆ ಕೇಂದ್ರ ಸರ್ಕಾರ ರಾಜ್ಯದ ಮನವಿಯನ್ನು ತಳ್ಳಿ ಹಾಕಿದೆ. ಸ್ತಬ್ಧ ಚಿತ್ರದಲ್ಲಿ ಭಾಗವಹಿಸಲು ಈ ಬಾರಿ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಬದಲಾಗಿ ವಸ್ತು ಪ್ರದರ್ಶನ ಮಳಿಗೆಯಲ್ಲಿ ರಾಜ್ಯದ ಸ್ತಬ್ಧ ಚಿತ್ರವನ್ನು ಪ್ರದರ್ಶನ ಮಾಡಿಕೊಳ್ಳಬಹುದು ಎಂದು ತಿಳಿಸಿದೆ. ಕಳೆದ ವರ್ಷ ಇದೇ ರೀತಿ ಸ್ತಬ್ಧ ಚಿತ್ರ ಮೆರವಣಿಗೆಗೆ ಅನುಮತಿ ನಿರಾಕರಿಸಲಾಗಿತ್ತು. ಚುನಾವಣಾ ವರ್ಷವಾಗಿದ್ದರಿಂದಾಗಿ ಅದು ರಾಜಕೀಯ ಸ್ವರೂಪವನ್ನು ಪಡೆದುಕೊಂಡಿತ್ತು. ರಾಜ್ಯದಲ್ಲಿ ಆಡಳಿತದಲ್ಲಿದ್ದ ಬಿಜೆಪಿ ಸರ್ಕಾರಕ್ಕೆ ಮುಜುಗರ ಎದುರಾದಾಗ ಪ್ರಮುಖ ನಾಯಕರು ಕೇಂದ್ರದ ಮೇಲೆ ಒತ್ತಡ ತಂದು ವಿಶೇಷ ಅನುಮತಿ ಪಡೆಯುವ ಮೂಲಕ ಸ್ತಬ್ಧ ಚಿತ್ರ ಮೆರವಣಿಗೆಯಲ್ಲಿ ರಾಜ್ಯದ ಪ್ರತಿಕೃತಿ ಭಾಗವಹಿಸಲು ಅವಕಾಶ ಪಡೆದುಕೊಂಡಿದ್ದರು.

ಫೆಡೆಕ್ಸ್ ಹೆಸರಿನಲ್ಲಿ ಕೊರಿಯರ್ ಎಂದು ಹೇಳಿ ವಂಚಿಸಿದ್ದ 14 ಮಂದಿ ವಂಚಕರ ಬಂಧನ

ಕಳೆದ ಬಾರಿ ಅನುಮತಿ ನಿರಾಕರಿಸಿದಾಗಲೇ ನಾನಾ ರೀತಿಯ ಸಮರ್ಥನೆಗಳು ಕೇಳಿಬಂದಿದ್ದವು. ಪ್ರತಿ ವರ್ಷವೂ ಸೀಮಿತ ಸಂಖ್ಯೆಯ ರಾಜ್ಯಗಳಿಗೆ ಮಾತ್ರ ಪೆರೇಡ್‍ನಲ್ಲಿ ಸ್ತಬ್ಧಚಿತ್ರ ಮೆರವಣಿಗೆ ನಡೆಸಲು ಅವಕಾಶ ಮಾಡಿಕೊಡಲಾಗುತ್ತದೆ. ಅದು ರೊಟೇಷನ್ ಆಧಾರದ ಮೇಲೆ ಬದಲಾಗುವುದರಿಂದ ಸಹಜವಾಗಿ ಅನುಮತಿ ನಿರಾಕರಿಸಲಾಗಿದೆ ಎಂದು ಹೇಳಲಾಗಿತ್ತು.

ಚುನಾವಣೆಯ ಕಾರಣಕ್ಕೆ ವಿಶೇಷ ಅನುಮತಿ ನೀಡಿದ್ದ ಕೇಂದ್ರ ಸರ್ಕಾರ ಈ ಬಾರಿ ಮತ್ತೆ ರೊಟೇಷನ್ ನೆಪ ಹೇಳಿ ಅನುಮತಿಯನ್ನು ತಳ್ಳಿ ಹಾಕಿದೆ. ವಾಸ್ತವಾಂಶ ಏನೇ ಇದ್ದರೂ ಕರ್ನಾಟಕದ ಸ್ತಬ್ಧ ಚಿತ್ರಕ್ಕೆ ಅವಕಾಶ ನೀಡದೇ ಇರುವುದು ಕನ್ನಡ ವಿರೋ ಧೋರಣೆ ಎಂದು ಬಿಂಬಿಸಲಾಗುತ್ತಿದೆ. ಹಲವಾರು ಸಚಿವರು ಕೇಂದ್ರ ಸರ್ಕಾರದ ಧೋರಣೆಯನ್ನು ಖಂಡಿಸಿದ್ದಾರೆ. ಅನುದಾನ, ತೆರಿಗೆ ಪಾಲು ಮತ್ತು ಕೇಂದ್ರ ಪುರಸ್ಕøತ ಯೋಜನೆಗಳ ಆರ್ಥಿಕ ನೆರವಿನಲ್ಲಿ ರಾಜ್ಯಕ್ಕೆ ಅನ್ಯಾಯ ಮಾಡಲಾಗುತ್ತಿದೆ. ನೀರಾವರಿ ಯೋಜನೆಗಳಿಗೆ ನಿರಪೇಕ್ಷಣಾ ಪತ್ರ ನೀಡುವಲ್ಲಿಯೂ ತಾರತಮ್ಯ ಮಾಡಿ ಕರ್ನಾಟಕದ ವಿಷಯದಲ್ಲಿ ಮಲತಾಯಿ ಧೋರಣೆ ನಡೆಸಲಾಗುತ್ತಿದೆ ಎಂಬ ಟೀಕೆಯನ್ನು ಕಾಂಗ್ರೆಸ್ ಮಾಡುತ್ತಿದೆ.

RELATED ARTICLES

Latest News