Saturday, July 27, 2024
Homeರಾಷ್ಟ್ರೀಯಬಾಲಕೊಟ್‌ ವಾಯುದಾಳಿ ಬಗ್ಗೆ ತೆಲಂಗಾಣ ಸಿಎಂ ರೇವಂತ್‌ ರೆಡ್ಡಿ ವಿವಾದಾತ್ಮಕ ಹೇಳಿಕೆ

ಬಾಲಕೊಟ್‌ ವಾಯುದಾಳಿ ಬಗ್ಗೆ ತೆಲಂಗಾಣ ಸಿಎಂ ರೇವಂತ್‌ ರೆಡ್ಡಿ ವಿವಾದಾತ್ಮಕ ಹೇಳಿಕೆ

ಹೈದರಾಬಾದ್‌,ಮೇ11- ಪಾಕ್‌ ಆಕ್ರಮಿತ ಬಾಲಕೊಟ್‌ ಮೇಲೆ ಭಾರತ ವಾಯುದಾಳಿ ನಡೆಸಿರುವ ಬಗ್ಗೆ ಯಾರಿಗೂ ಖಚಿತವಾದ ಮಾಹಿತಿ ಇಲ್ಲ ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್‌ ರೆಡ್ಡಿ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ.

ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ 2019ರಲ್ಲಿ ಉಗ್ರರು ಆರ್‌ಡಿಎಕ್ಸ್ ಬಾಂಬ್‌ ಬಳಸಿ 40 ಮಂದಿ ಸಿಆರ್‌ಪಿಎಫ್‌ ಯೋಧರನ್ನು ಹತ್ಯೆ ಮಾಡಿದ್ದರು. ಇದಕ್ಕೆ ಭಾರತ ಪ್ರತಿಯಾಗಿ ಪಿಒಕೆಯಲ್ಲಿರುವ ಬಾಲಕೋಟ್‌ನಲ್ಲಿ ವಾಯು ದಾಳಿ ನಡೆಸಿ ಪ್ರತೀಕಾರ ತೀರಿಸಿಕೊಂಡಿತ್ತು. ಈ ದಾಳಿಯಲ್ಲಿ ಅನೇಕ ಉಗ್ರರು ಸಾವನ್ನಪ್ಪಿದ್ದರು. ಈ ಬಗ್ಗೆ ಕಾಂಗ್ರೆಸ್‌‍ ಸೇರಿದಂತೆ ಪ್ರತಿಪಕ್ಷಗಳು ಇದರ ಬಗ್ಗೆ ಅನುಮಾನವನ್ನು ವ್ಯಕ್ತಪಡಿಸುತ್ತಲೇ ಬಂದಿದ್ದವು.

ಈ ದಾಳಿ ನಿಜವಾಗಿಯೂ ನಡೆದಿತ್ತೇ? ಎಷ್ಟು ಉಗ್ರರು ಸತ್ತಿದ್ದರು. ಅದಕ್ಕೆ ಸಾಕ್ಷಿ ಎಲ್ಲಿದೆ ಎಂಬ ಪ್ರಶ್ನೆಗಳನ್ನು ಮುಂದಿಡುತ್ತಲೇ ಬಂದಿದ್ದರು. ಇದೀಗ ತೆಲಂಗಾಣ ಸಿಎಂ ರೇವಂತ್‌ ರೆಡ್ಡಿ ಕೂಡ ದನಿಗೂಡಿಸಿದ್ದು, ಸಿಆರ್‌ಪಿಎಫ್‌ನ 40 ಸೈನಿಕರನ್ನು ಹತ್ಯೆಗೈದಿದ್ದಕ್ಕೆ ಪ್ರತಿಯಾಗಿ ಪುಲ್ವಾಮಾದಲ್ಲಿ ವಾಯುದಾಳಿ ನಡೆಸಲಾಗಿದೆ ಎಂದು ಹೇಳುತ್ತಾರೆ. ಇದರ ಬಗ್ಗೆ ಯಾರಿಗೂ ಖಚಿತವಾದ ಮಾಹಿತಿ ಇಲ್ಲ ಎಂದು ಅನುಮಾನವನ್ನು ಹೊರ ಹಾಕಿದ್ದಾರೆ.

ವಾಯುದಾಳಿ ಆದ ನಂತರ ಬಿಜೆಪಿ ಇದನ್ನು ರಾಜಕೀಯ ಲಾಭಕ್ಕೆ ಬಳಸಿಕೊಂಡಿತ್ತು. ಪ್ರಧಾನಿ ನರೇಂದ್ರಮೋದಿ ಅವರು ಪ್ರತಿಯೊಂದನ್ನು ರಾಜಕೀಯಗೊಳಿಸುವುದೇ ಅವರ ಉದ್ದೇಶವಾಗಿದೆ.

ಚುನಾವಣೆಯನ್ನು ಗೆಲ್ಲಲ್ಲು ಏನು ಬೇಕಾದರೂ ಮೋದಿ ಮತ್ತು ಅವರ ತಂಡ ಮಾಡುತ್ತದೆ. ಇದಕ್ಕೆ ಪುಲ್ವಾಮ ದಾಳಿ ಒಂದು ನಿದರ್ಶನ. ಸಿಆರ್‌ಪಿಎಫ್‌ ಯೋಧರ ಮೇಲೆ ಬಾಂಬ್‌ ಸ್ಪೋಟಕಗೊಂಡಾಗ ಕೇಂದ್ರದ ಗುಪ್ತಚರ ವಿಭಾಗ ಏನು ಮಾಡುತ್ತಿತ್ತು? ಇದು ಕೇಂದ್ರ ಸರ್ಕಾರದ ಅಧೀನದಲ್ಲಿದೆ ಅಲ್ಲವೆ? ಇದಕ್ಕೆ ಮೋದಿ ಸರ್ಕಾರವೇ ನೇರ ಹೊಣೆ ಎಂದು ಆರೋಪಿಸಿದರು.

ಪುಲ್ವಾಮ ದಾಳಿ ನಡೆದಿರುವುದರ ಬಗ್ಗೆಯೇ ಅನುಮಾನವಿದೆ. ಹೇಗೆ ನಡೆಯಿತು? ಯಾವಾಗ ನಡೆಯಿತು? ಯಾವ ಮಾಹಿತಿಯೂ ಇಲ್ಲ. ಯೋಧರನ್ನು ಬಾಂಬ್‌ ಸ್ಫೋಟಿಸಿ ಹತ್ಯೆ ಮಾಡುತ್ತಾರೆ ಎಂದರೆ ಆಂತರಿಕ ಭದ್ರತಾ ವಿಭಾಗ ಏನು ಮಾಡುತ್ತಿತ್ತು? 320 ಕೆಜಿ ಆರ್‌ಡಿಎಕ್‌್ಸ ಬಾಂಬ್‌ ಬಳಸಲಾಗಿದೆ ಎಂದು ಹೇಳಲಾಗಿದೆ. ಇಷ್ಟು ದೊಡ್ಡ ಮಟ್ಟದಲ್ಲಿ ಇವು ದೇಶದೊಳಗೆ ಬರಲು ಹೇಗೆ ಸಾಧ್ಯವಾಯಿತು? ಗುಪ್ತಚರ ವಿಭಾಗ, ಸಂಚಾರ ಮತ್ತು ವಿಶ್ಲೇಷಣೆ ವಿಭಾಗ ಸಂಪೂರ್ಣವಾಗಿ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದರು.

ರಾಮಮಂದಿರ ವಿಷಯದಲ್ಲೂ ಬಿಜೆಪಿ ರಾಜಕೀಯ ಲಾಭ ಪಡೆದುಕೊಳ್ಳಲು ಹವಣಿಸುತ್ತಿದೆ. ನಾವು ಕೂಡ ರಾಮ ಭಕ್ತರೇ. ಮಂದಿರವನ್ನು ಕಟ್ಟಬೇಡಿ ಎಂದು ನಾವೇನು ಹೇಳಿದ್ದೇವಾ? ಎಂದು ರೇವಂತ್‌ ರೆಡ್ಡಿ ಪಿಎಂ ಮೋದಿಗೆ ಪ್ರಶ್ನೆ ಮಾಡಿದ್ದಾರೆ.

RELATED ARTICLES

Latest News