Monday, November 3, 2025
Homeಬೆಂಗಳೂರುರೈಸ್ ಪುಲ್ಲಿಂಗ್ ಹೆಸರಲ್ಲಿ ವಂಚನೆ : ಮೂವರ ಸೆರೆ, 69.79 ಲಕ್ಷ ನಗದು ಜಪ್ತಿ

ರೈಸ್ ಪುಲ್ಲಿಂಗ್ ಹೆಸರಲ್ಲಿ ವಂಚನೆ : ಮೂವರ ಸೆರೆ, 69.79 ಲಕ್ಷ ನಗದು ಜಪ್ತಿ

ಬೆಂಗಳೂರು, ಏ.19- ರೈಸ್ ಪುಲ್ಲಿಂಗ್ ಹೆಸರಿನಲ್ಲಿ ನಕಲಿ ತಾಮ್ರದ ಪಾತ್ರೆ ತೋರಿಸಿ ವಂಚನೆ ಮಾಡುತ್ತಿದ್ದ ಮೂವರು ವಂಚಕರನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿ 69.79 ಲಕ್ಷ ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ.ಪಂಜಾಬ್ ಮೂಲದ ಸನ್ನಿಗಿಲ್, ತಮಿಳುನಾಡಿನ ರಮೇಶ್ ಮತ್ತು ಬೆಂಗಳೂರು ನಗರದ ನಿವಾಸಿ ಶಿವಶಂಕರ್ ಬಂತ ಆರೋಪಿಗಳು.

ಜಯನಗರ 6ನೇ ಬ್ಲಾಕ್ನ ಯಡಿಯೂರು ಕೆರೆ ಬಳಿ ರೈಸ್ ಪುಲ್ಲಿಂಗ್ ಪಾತ್ರೆಯ ಮಾರಾಟದ ವ್ಯವಹಾರವನ್ನು ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತಿದೆ. ಮಾಹಿತಿಯನ್ನಾಧರಿಸಿ ಪೊಲೀಸರು ಸ್ಥಳಕ್ಕೆ ಹೋಗಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿ ರೈಸ್ ಪುಲ್ಲಿಂಗ್ಗೆ ಸಂಬಂಧಿಸಿದಂತೆ ಹಳೆಯ ತಾಮ್ರದ ಪಾತ್ರೆ ಹಾಗೂ 69.79 ಲಕ್ಷ ರೂ.ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಗ್ಯಾರಂಟಿ ಯೋಜನೆಗಳಿಂದ ಮೈತ್ರಿ ನಾಯಕರು ಕಂಗೆಟ್ಟಿದ್ದಾರೆ : ಸಿಎಂ ಸಿದ್ದರಾಮಯ್ಯ
- Advertisement -

ಅರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರು ಪಡಿಸಿ 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದು ತನಿಖೆ ಮುಂದುವರೆಸಿದ್ದಾರೆ.

- Advertisement -
RELATED ARTICLES

Latest News