ಅಹಮದಾಬಾದ್, ಅ.15- ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಅವರು ಒನ್ ಮ್ಯಾನ್ ಆರ್ಮಿಯಂತೆ ಪಾಕಿಸ್ತಾನ ಬೌಲರ್‌ಗಳ ಬಲವನ್ನು ಧ್ವಂಸಗೊಳಿಸಿದ್ದಾರೆ ಎಂದು ರಾವಲ್ಪಿಂಡಿ ಎಕ್ಸ್‍ಪ್ರೆಸ್ ಶೋಯೆಬ್ ಅಖ್ತರ್ ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ.
ಟೀಮ್ ಇಂಡಿಯಾದ 7 ವಿಕೆಟ್‍ಗಳ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದ ಹಿಟ್ ಮ್ಯಾನ್, 63 ಎಸೆತಗಳಲ್ಲಿ 6 ಬೌಂಡರಿ, 6 ಸಿಕ್ಸರ್ ನೆರವಿನಿಂದ 86 ರನ್ ಬಾರಿಸಿದ್ದರು. ಒಡಿಐ ಸ್ವರೂಪದಲ್ಲಿ 300 ಸಿಕ್ಸರ್ ಪೂರೈಸಿದ ರೋಹಿತ್ ಶರ್ಮಾ, 2023ನೇ ಒಡಿಐ ವಿಶ್ವಕಪ್ ಟೂರ್ನಿಯಲ್ಲಿ 217 ರನ್ ಗಳಿಸುವ ಮೂಲಕ ಗರಿಷ್ಠ 3ನೇ ಸ್ಕೋರರ್ ಆಗಿದ್ದಾರೆ.
ಬರಗಾಲವಿದ್ದರೂ ವೈಭವಕ್ಕೆ ಕೊರತೆ ಇಲ್ಲದಂತೆ ದಸರಾ ಆಚರಣೆ : ಸಿಎಂ
ಅಹಮದಾಬಾದ್‍ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಾಕಿಸ್ತಾನದ ಬೌಲರ್‌ಗಳ
ಪ್ರದರ್ಶನವು ತುಂಬಾ ಬೇಸರ ತರಿಸಿದೆ. ಭಾರತ ತಂಡವು ಪಾಕಿಸ್ತಾನ ವಿರುದ್ಧ ಎಲ್ಲ ವಿಭಾಗಗಳಲ್ಲೂ ಮೇಲುಗೈ ಸಾಧಿಸಿತ್ತು. ರೋಹಿತ್ ಶರ್ಮಾ ಅವರು ಒನ್ ಮ್ಯಾನ್ ಆರ್ಮಿ ರೀತಿ ಕಂಗೊಳಿಸಿದರು. ಕಳೆದ ಕೆಲವು ವರ್ಷಗಳಿಂದ ರೋಹಿತ್ ಶರ್ಮಾ ಅವರು ತಮ್ಮ ಬ್ಯಾಟಿಂಗ್ ಸಾಮಥ್ರ್ಯವನ್ನು ಎಲ್ಲಿ ಅಡಗಿಸಿಟ್ಟಿದ್ದರು. ಆತ ನಿಜಕ್ಕೂ ವಿಶ್ವಶ್ರೇಷ್ಠ ಆಟಗಾರ, ಕ್ರೀಡಾಂಗಣದ ಎಲ್ಲ ಮೂಲೆಗೂ ಚೆಂಡನ್ನು ಅಟ್ಟುವ ಸಾಮಥ್ರ್ಯ ಹೊಂದಿದ್ದಾರೆ. ಅವನೊಬ್ಬ ಸಂಪೂರ್ಣ ಆಟಗಾರನಾಗಿದ್ದು, ಒಂದು ಸದೃಢ ತಂಡವಾಗಿದೆ' ಎಂದು ಅಖ್ತರ್ ಗುಣಗಾಣ ಮಾಡಿದ್ದಾರೆ.
ರೋಹಿತ್ ಶರ್ಮಾ ಅವರು ತಮ್ಮ ಸ್ಪೋಟಕ ಬ್ಯಾಟಿಂಗ್‍ನಿಂದ ಪಾಕಿಸ್ತಾನದ ಬೌಲಿಂಗ್ ಪಡೆಯನ್ನು ಧ್ವಂಸಗೊಳಿಸಿದ್ದಾರೆ. ಹಿಟ್‍ಮ್ಯಾನ್ ಮತ್ತೆ ಸ್ಪೋಟಕ ಲಯಕ್ಕೆ ಮರಳಿರುವುದನ್ನು ನೋಡಲು ತುಂಬಾ ಸಂತಸವಾಗುತ್ತಿದೆ. ಅವನು ಬೌಲರ್‍ಗಳನ್ನು ದಂಡಿಸುವ ಶಕ್ತಿಯನ್ನು ಹೊಂದಿದ್ದಾನೆ. ಆಟವನ್ನು ತಮ್ಮದೇ ಆದ ಶೈಲಿಯಲ್ಲಿ ಮುಗಿಸುತ್ತಾರೆ. ಅದರಲ್ಲೂ ಪಂದ್ಯದ ಕೊನೆಯ ಓವರ್‍ಗಳಲ್ಲಿ ಬೌಲರ್‍ಗಳನ್ನು ಅವಮಾನಿಸುವ ರೀತಿಯಲ್ಲಿ ಬ್ಯಾಟ್ ಬೀಸುತ್ತಾರೆ’ ಎಂದು ಅಖ್ತರ್ ತಿಳಿಸಿದ್ದಾರೆ.