Friday, November 22, 2024
Homeಕ್ರೀಡಾ ಸುದ್ದಿ | Sportsಕಪಿಲ್‌ ದೇವ್‌, ಎಂಎಸ್‌‍ ಧೋನಿ ಸಾಲಿಗೆ ಹಿಟ್‌ ಮ್ಯಾನ್‌ ಸೇರ್ಪಡೆ..?

ಕಪಿಲ್‌ ದೇವ್‌, ಎಂಎಸ್‌‍ ಧೋನಿ ಸಾಲಿಗೆ ಹಿಟ್‌ ಮ್ಯಾನ್‌ ಸೇರ್ಪಡೆ..?

1975 ರಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಏಕದಿನ ವಿಶ್ವಕಪ್ ಟೂರ್ನಿ ಆರಂಭಿಸಿತ್ತು. ಕ್ರಿಕೆಟ್ನ ರಂಗನ್ನು ಮತ್ತಷ್ಟು ಹೆಚ್ಚಿಸುವ ದೃಷ್ಟಿಯಿಂದ 2007 ರಲ್ಲಿ ಟಿ20 ವಿಶ್ವಕಪ್ ಟೂರ್ನಿಯನ್ನು ಆಯೋಜಿಸಿತು. ನಂತರ ಟೆಸ್್ಟ ಕ್ರಿಕೆಟ್ ನ ಮಹತ್ವವನ್ನು ಹೆಚ್ಚಿಸುವ ದೃಷ್ಟಿಯಿಂದ ವಿಶ್ವ ಟೆಸ್್ಟ ಚಾಂಪಿಯನ್ ಶಿಪ್ ನಡೆಸುತ್ತಿದೆ. ಭಾರತ ತಂಡವು ಈ ಎಲ್ಲ ಸ್ವರೂಪದ ಫೈನಲ್ ಹಂತ ತಲುಪಿದೆ. ಆದರೆ ಚಾಂಪಿಯನ್ ಪಟ್ಟ ದಕ್ಕಿಸಿಕೊಡಲು ಸಾಧ್ಯವಾಗಿದ್ದು ಕಪಿಲ್ ದೇವ್ ಹಾಗೂ ಮಹೇಂದ್ರ ಸಿಂಗ್ ಧೋನಿಗೆ ಮಾತ್ರ.
2023ರ ಏಕದಿನ ವಿಶ್ವಕಪ್ ಟೂರ್ನಿಗಳಲ್ಲಿ ಟೀಮ್ ಇಂಡಿಯಾಗೆ ಐಸಿಸಿ ಟ್ರೋಫಿ ಗೆದ್ದುಕೊಡುವ ಅವಕಾಶ ಹಿಟ್ ಮ್ಯಾನ್ ರೋಹಿತ್ ಶರ್ಮಾಗಿತ್ತು. ಆದರೆ ಫೈನಲ್ ಪಂದ್ಯದಲ್ಲಿ ಪ್ಯಾಟ್ ಕಮಿನ್ಸ್ ಸಾರಥ್ಯದ ಆಸ್ಟ್ರೇಲಿಯಾ ವಿರುದ್ಧ 5 ವಿಕೆಟ್ ಗಳ ಸೋಲು ಕಂಡಿತು. ಅದಕ್ಕೂ ಮುಂಚೆ ಟೆಸ್್ಟ ಚಾಂಪಿಯನ್ ಶಿಪ್ ಗೆಲ್ಲುವ ಅವಕಾಶವಿದ್ದರೂ ಆಸೀಸ್ ವಿರುದ್ಧ ಸೋಲು ಕಂಡು ನಿರಾಸೆ ಅನುಭವಿಸಿದ್ದರು. ಆದರೆ ಈಗ ಚುಟುಕು ವಿಶ್ವಕಪ್ ಟೂರ್ನಿಯಲ್ಲಿ ಟ್ರೋಫಿ ಗೆದ್ದು ಸಂಭ್ರಮಿಸಲು ಹಿಟ್ ಮ್ಯಾನ್ ರೋಹಿತ್ ಶರ್ಮಾ ಹೊರಟಿದ್ದಾರೆ.

*1983 ರಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ 2ಬಾರಿಯ ಚಾಂಪಿಯನ್ ವೆಸ್್ಟ ಇಂಡೀಸ್ ತಂಡವನ್ನು 43 ರನ್ ನಿಂದ ಮಣಿಸಿದ್ದ ಕಪಿಲ್ ದೇವ್ ಸಾರಥ್ಯದ ಭಾರತ ತಂಡ ಚೊಚ್ಚಲ ವಿಶ್ವಕಪ್ ಗೆದ್ದುಕೊಂಡಿತ್ತು. ಅಂದಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಭಾರತ 54.4 ಓವರ್ ಗಳಲ್ಲಿ 183 ರನ್ ಗಳಿಗೆ ಅಲ್ ಔಟ್ ಆದರೆ, ನಂತರ ಬ್ಯಾಟ್ ಮಾಡಿದ ವೆಸ್್ಟ ಇಂಡೀಸ್ 52 ಓವರ್ ಗಳಲ್ಲಿ 140 ರನ್ ಗಳಿಗೆ ಸರ್ವಪತನವಾಗಿತ್ತು.

2011ರ ಏಪ್ರಿಲ್ 2ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ಮಹೇಲಾ ಜಯವರ್ಧನೆ (103 ರನ್) ಶತಕದ ನೆರವಿನಿಂದ 274/6 ರನ್ ಗಳಿಸಿತು. ಈ ಗುರಿ ಹಿಂಬಾಲಿಸಿದ ಭಾರತ ಮಹೇಂದ್ರ ಸಿಂಗ್ ಧೋನಿ (91* ರನ್) ಹಾಗೂ ಗೌತಮ್ ಗಂಭೀರ್ (97 ರನ್) ಅರ್ಧಶತಕಗಳ ನೆರವಿನಿಂದ 48.2 ಓವರ್ ಗಳಲ್ಲಿ 277/4 ರನ್ ಗಳಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.

*24 ಸೆಪ್ಟೆಂಬರ್ 2007ರಂದು ಜೋಹಾನ್್ಸ ಬರ್ಗ್ ನಲ್ಲಿ ನಡೆದ ಚೊಚ್ಚಲ ಚುಟುಕು ವಿಶ್ವಕಪ್ ಐಸಿಸಿ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಎಂಎಸ್ ಧೋನಿ ಸಾರಥ್ಯದ ಟೀಮ್ ಇಂಡಿಯಾ ಗೌತಮ್ ಗಂಭೀರ್ (75 ರನ್) ಅರ್ಧಶತಕ ನೆರವಿನಿಂದ 20 ಓವರ್ ಗಳಲ್ಲಿ 157/5 ರನ್ ಗಳಿಸಿತು. ಈ ಗುರಿ ಹಿಂಬಾಲಿಸಿದ ಪಾಕಿಸ್ತಾನ, 152 ರನ್ ಗಳಿಗೆ ಸರ್ವಪತನಗೊಳ್ಳುವ ಮೂಲಕ 5 ರನ್ ಗಳ ಸೋಲು ಕಂಡಿತು. ಆ ಮೂಲಕ ಎಂಎಸ್ ಡಿ ಪಡೆ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಈಗ 17 ವರ್ಷಗಳ ನಂತರ ರೋಹಿತ್ ಶರ್ಮಾ ಸಾರಥ್ಯದಲ್ಲಿ ಚುಟುಕು ವಿಶ್ವಕಪ್ ಗೆಲ್ಲುವ ಹೊಸ್ತಿಲಲ್ಲಿ ನಿಂತಿದೆ.

RELATED ARTICLES

Latest News