Tuesday, October 8, 2024
Homeರಾಜ್ಯಮೇ ತಿಂಗಳಿನಲ್ಲಿ ಮೈಸೂರಿಗೆ ಬಂದಿದ್ದ ಸಾಗರ್ ಶರ್ಮಾ

ಮೇ ತಿಂಗಳಿನಲ್ಲಿ ಮೈಸೂರಿಗೆ ಬಂದಿದ್ದ ಸಾಗರ್ ಶರ್ಮಾ

ಮೈಸೂರು, ಡಿ.14- ಸಂಸತ್ ಒಳಗೆ ಕೋಲಾಹಲ ಪ್ರಕರಣ ಆರೋಪಿ ಮೈಸೂರಿಗೆ ಆಗಮಿಸಿದ್ದ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಪ್ರಮುಖ ಆರೋಪಿ ಸಾಗರ್ ಶರ್ಮಾ ಕಳೆದ ಮೇ ತಿಂಗಳಿನಲ್ಲಿ ಮೈಸೂರಿಗೆ ಆಗಮಿಸಿದ್ದ. ಕುತೂಹಲಕ್ಕೆ ಕಾರಣವಾದ ಉತ್ತರಪ್ರದೇಶ ಮೂಲದ ಸಾಗರ್ ಶರ್ಮಾ ಮೈಸೂರು ಭೇಟಿ ವೇಳೆ ಮತ್ತೊಬ್ಬ ಆರೋಪಿ ಮನೋರಂಜನ್‍ನ ಭೇಟಿಗೆ ಆಗಮಿಸಿದ್ದನಾ ಅಥವಾ ಬೇರೆ ಕಾರಣಕ್ಕೆ ಆಗಮಿಸಿದ್ದನಾ ಎಂಬ ಬಗ್ಗೆ ಪೊಲೀಸರು ಈಗ ಪರಿಶೀಲನೆ ನಡೆಸುತ್ತಿದ್ದಾರೆ.

ಅನುದಾನಿತ ಸಂಸ್ಥೆಗಳ ನೌಕರರಿಗೂ ಜ್ಯೋತಿ ಸಂಜೀವಿನಿ ಯೋಜನೆ ವಿಸ್ತರಣೆ : ಸಿಎಂ

ಸಾಗರ್ ಶರ್ಮಾ ಮೈಸೂರು ಭೇಟಿ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು, ಅವನು ಮೈಸೂರಿಗೆ ಬಂದಾಗ ಯಾರ್ಯಾರನ್ನು ಭೇಟಿ ಮಾಡಿದ್ದ ಮೈಸೂರಿನ ಇನ್ಯಾವ ಸ್ಥಳಗಳಿಗೆ ಈತ ತೆರಳಿದ್ದ ಎಂಬ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

RELATED ARTICLES

Latest News