Thursday, February 29, 2024
Homeಜಿಲ್ಲಾ ಸುದ್ದಿಗಳುಬೈಕ್ ಡಿಕ್ಕಿ ಹೊಡೆದು ವಿಧಾನಪರಿಷತ್ ಸದಸ್ಯ ಅರವಿಂದ ಅರಳಿ ಅವರ ತಾಯಿ ನಿಧನ

ಬೈಕ್ ಡಿಕ್ಕಿ ಹೊಡೆದು ವಿಧಾನಪರಿಷತ್ ಸದಸ್ಯ ಅರವಿಂದ ಅರಳಿ ಅವರ ತಾಯಿ ನಿಧನ

ಕಲಬುರಗಿ,ಡಿ.14-ರಸ್ತೆ ದಾಟುವಾಗ ಬೈಕ್ ಡಿಕ್ಕಿ ಹೊಡೆದು ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಅರವಿಂದ ಕುಮಾರ್ ಅರಳಿ ಅವರ ತಾಯಿ ಮೃತಪಟ್ಟಿರುವ ಘಟನೆ ಸೇಡಂ ರಿಂಗ್ ರಸ್ತೆಯ ಟೊಯೋಟಾ ಶೋರೂಂ ಬಳಿ ನಡೆದಿದೆ.

ಬೀದರ್‍ನಿಂದ ಕಲಬುರಗಿಯಲ್ಲಿರುವ ಮಗಳನ್ನು ನೋಡಲು ಬಂದ ಸುಮೀತ್ರಾಬಾಯಿ (75)ಅವರು ಟೊಯೋಟಾ ಶೋರೂಂ ಬಳಿ ರಸ್ತೆ ದಾಟುವಾಗ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದಿದೆ.ರಸ್ತೆಗೆ ಉರುಳಿ ಬಿದ್ದ ಅವರು ತೀವ್ರವಾಗಿ ಗಾಯಗೊಂಡಿದ್ದಾರೆ ಸ್ಥಳೀತರು ಪೊಲೀಸರಿಗೆ ಮಾಹಿತಿ ನೀಡಿದ್ದು ನಂತರ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಡಿಸಿಪಿ ಕನ್ನಿಕಾ, ಇನ್ಸ್‍ಪೆಕ್ಟರ್ ಖಾಜಾ ಹುಸೇನ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇನ್ನು ಈ ಸಂಬಂಧ ಕಲಬುರಗಿ ಸಂಚಾರಿ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ಅನುದಾನಿತ ಸಂಸ್ಥೆಗಳ ನೌಕರರಿಗೂ ಜ್ಯೋತಿ ಸಂಜೀವಿನಿ ಯೋಜನೆ ವಿಸ್ತರಣೆ : ಸಿಎಂ

ಇನ್ನು ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಭಾಗಿಯಾಗಿದ್ದ ಪುತ್ರ, ಪರಿಷತ್ ಸದಸ್ಯ ಅರವಿಂದ ಕುಮಾರ್ ಅರಳಿ ಅವರು ವಿಷಯ ತಿಳಿಯುತ್ತಿದ್ದಂತೆಯೇ ಕಲಬುರಗಿಯೆ ದೌಡಾಯಿಸಿದ್ದಾರೆ. ಅಪಘಾತದ ನಂತರ ಬೈಕ್ ಸವಾರ ಪರಾರಿಯಾಗಿದ್ದಾನೆ.ರಸ್ತೆಯಲ್ಲಿನ ಸಿಸಿಟಿವಿ ಪರಿಶೀಲಿಸಿ ಈ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ.

RELATED ARTICLES

Latest News