Saturday, July 27, 2024
Homeರಾಷ್ಟ್ರೀಯಸಲ್ಮಾನ್ ಖಾನ್‌ ಮನೆ ಸಮೀಪ ಫೈರಿಂಗ್‌ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ಬಂಧನ

ಸಲ್ಮಾನ್ ಖಾನ್‌ ಮನೆ ಸಮೀಪ ಫೈರಿಂಗ್‌ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ಬಂಧನ

ಮುಂಬೈ, ಮೇ 14 (ಪಿಟಿಐ) : ಕಳೆದ ತಿಂಗಳು ಇಲ್ಲಿನ ಬಾಲಿವುಡ್‌ ಸೂಪರ್‌ಸ್ಟಾರ್‌ ಸಲ್ಮಾನ್ ಖಾನ್‌ ಅವರ ನಿವಾಸದ ಹೊರಗೆ ಗುಂಡಿನ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾರೆನ್ಸ್ ಬಿಷ್ಣೋಯ್‌ ಗ್ಯಾಂಗ್‌ನ ಮತ್ತೊಬ್ಬ ಸದಸ್ಯನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಹರ್ಯಾಣದ ಫತೇಹಾಬಾದ್‌ ನಿವಾಸಿ ಹರ್ಪಾಲ್‌ ಸಿಂಗ್‌ (34) ಎಂದು ಗುರುತಿಸಲಾಗಿದ್ದು, ಆತನನ್ನು ಮುಂಬೈ ಅಪರಾಧ ವಿಭಾಗದ ತಂಡ ನಿನ್ನೆ ಸಂಜೆ ಆತನ ಸ್ವಗ್ರಾಮದಿಂದ ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಂದು ಮುಂಜಾನೆ ಸಿಂಗ್‌ ಅವರನ್ನು ಮುಂಬೈಗೆ ಕರೆತರಲಾಗಿದ್ದು, ನಂತರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.

ಏಪ್ರಿಲ್‌ 14 ರಂದು ಮುಂಬೈನ ಬಾಂದ್ರಾ ಪ್ರದೇಶದ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನಲ್ಲಿರುವ ಸಲ್ಮಾನ್ ಖಾನ್‌ ಅವರ ನಿವಾಸದ ಹೊರಗೆ ಮೋಟಾರ್‌ಸೈಕಲ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದರು.

ಫೈರಿಂಗ್‌ ಪ್ರಕರಣದಲ್ಲಿ ಈ ತಿಂಗಳ ಆರಂಭದಲ್ಲಿ ಬಂಧಿತನಾದ ಮತ್ತೊಬ್ಬ ಬಿಷ್ಣೋಯ್‌ ಗ್ಯಾಂಗ್‌ ಸದಸ್ಯ ಮೊಹಮದ್‌ ರಫೀಕ್‌ ಚೌಧರಿ ಅವರ ವಿಚಾರಣೆಯ ಸಮಯದಲ್ಲಿ ಸಿಂಗ್‌ ಹೆಸರು ಹೇಳಿದ್ದ ಎಂದು ಅಧಿಕಾರಿ ತಿಳಿಸಿದ್ದಾರೆ.ಸಲ್ಮಾನ್ ಖಾನ್‌ ಅವರ ನಿವಾಸದ ಸುತ್ತಲೂ ವಿಹಾರ ನಡೆಸುವಂತೆ ಸಿಂಗ್‌ ಚೌಧರಿ ಅವರನ್ನು ಕೇಳಿಕೊಂಡಿದ್ದರು ಮತ್ತು ಅವರಿಗೆ 2-3 ಲಕ್ಷ ರೂಪಾಯಿಗಳನ್ನು ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಸ್ತುತ ಗುಜರಾತ್‌ನ ಅಹಮದಾಬಾದ್‌ನ ಸಬರಮತಿ ಕೇಂದ್ರ ಕಾರಾಗಹದಲ್ಲಿರುವ ಲಾರೆನ್ಸ್ ಬಿಷ್ಣೋಯ್‌ ಮತ್ತು ಅವರ ಕಿರಿಯ ಸಹೋದರ ಅನೋಲ್‌ ಬಿಷ್ಣೋಯ್‌ ಅವರು ಯುಎಸ್‌‍ ಅಥವಾ ಕೆನಡಾದಲ್ಲಿದ್ದಾರೆ ಎಂದು ನಂಬಲಾಗಿದೆ ಎಂದು ಫೈರಿಂಗ್‌ ಪ್ರಕರಣದಲ್ಲಿ ತಿಳಿಸಲಾಗಿದೆ.

RELATED ARTICLES

Latest News