Sunday, May 19, 2024
Homeರಾಷ್ಟ್ರೀಯಭಾರತೀಯರ ಬಗ್ಗೆ ಸ್ಯಾಮ್‌ ಪಿತ್ರೋಡಾ ಮತ್ತೊಂದು ವಿವಾದಾತ್ಮಕ ಹೇಳಿಕೆ

ಭಾರತೀಯರ ಬಗ್ಗೆ ಸ್ಯಾಮ್‌ ಪಿತ್ರೋಡಾ ಮತ್ತೊಂದು ವಿವಾದಾತ್ಮಕ ಹೇಳಿಕೆ

ನವದೆಹಲಿ,ಮೇ8- ಭಾರತದ ಪೂರ್ವದಲ್ಲಿರುವವರು ಚೀನೀಯರಂತೆಯೂ ದಕ್ಷಿಣದವರು ಆಫ್ರಿಕನ್ನರಂತೆಯೂ ಕಾಣುತ್ತಾರೆ ಎಂದು ಸಾಗರೋತ್ತರ ಕಾಂಗ್ರೆಸ್‌ ಅಧ್ಯಕ್ಷ ಸ್ಯಾಮ್‌ ಪಿತ್ರೋಡಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಆಂಗ್ಲ ಪತ್ರಿಕೆ ದಿ ಸ್ಟೇಟ್ಸ್ ಮನ್‌ಗೆ ನೀಡಿದ ಸಂದರ್ಶನದಲ್ಲಿ ಸ್ಯಾಮ್‌ ಪಿತ್ರೋಡಾ ಈ ಹೇಳಿಕೆ ನೀಡಿದ್ದಾರೆ.

ಪೂರ್ವದ ಜನರು ಚೀನಿಯರಂತೆ, ಪಶ್ಚಿಮದ ಜನರು ಅರಬ್ಬರಂತೆ, ಉತ್ತರದ ಜನರು ಬಿಳಿಯರಂತೆ ಮತ್ತು ದಕ್ಷಿಣ ಭಾರತೀಯರು ಆಫ್ರಿಕನ್ನರಂತೆ ಕಾಣುವ ಭಾರತದಂತಹ ವೈವಿಧ್ಯಮಯ ದೇಶವನ್ನು ನಾವು ಒಟ್ಟಿಗೆ ಹಿಡಿದಿಟ್ಟುಕೊಳ್ಳಬಹುದು ಪರವಾಗಿಲ್ಲ ನಾವೆಲ್ಲರೂ ಸಹೋದರ ಸಹೋದರಿಯರು ನಾವು ಎಲ್ಲಾ ಭಾಷೆಯನ್ನು ಗೌರವಿಸುತ್ತೇವೆ ಎಂದಿದ್ದಾರೆ.

ಭಾರತವು ಅತ್ಯಂತ ವೈವಿಧ್ಯಮಯ ದೇಶ ಎಂದು ಹೇಳುವುದನ್ನು ವಿಡಿಯೋದಲ್ಲಿ ಕಾಣಬಹುದು. ಇತ್ತೀಚೆಗಷ್ಟೇ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಚುನಾವಣೆಯ ನಂತರ ನಮ್ಮ ಸರ್ಕಾರ ಅಧಿ ಕಾರಕ್ಕೆ ಬಂದರೆ ಸಮೀಕ್ಷೆ ನಡೆಸಿ ಯಾರ ಬಳಿ ಎಷ್ಟು ಹಣ ಇದೆ ಎಂಬುದನ್ನು ಪತ್ತೆ ಮಾಡಲಾಗುವುದು ಎಂದು ಹೇಳಿದ್ದರು.

ಈ ಕುರಿತು ಸ್ಯಾಮ್‌?ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತಾ ಅಮೆರಿಕದಲ್ಲಿ ವಿಧಿಸಲಾದ ಪಿತ್ರಾರ್ಜಿತ ತೆರಿಗೆ ಕುರಿತು ಪ್ರಸ್ತಾಪಿಸಿದ್ದರು.ಅಮೆರಿಕದಲ್ಲಿ ಪಿತ್ರಾರ್ಜಿತ ಆಸ್ತಿ ತೆರಿಗೆ ಇದೆ ಎಂದು ಹೇಳಿದ್ದರು. ಒಬ್ಬ ವ್ಯಕ್ತಿ 100 ಮಿಲಿಯನ್‌ ಡಾಲರ್‌ ಮೌಲ್ಯದ ಆಸ್ತಿಯನ್ನು ಹೊಂದಿದ್ದರೆ ಅವರ ಮರಣದ ನಂತರ 45ರಷ್ಟು ಆಸ್ತಿಯನ್ನು ಅವರ ಮಕ್ಕಳಿಗೆ ವರ್ಗಾಯಿಸಲಾಗುತ್ತದೆ ಮತ್ತು ಶೇ.55ರಷ್ಟು ಆಸ್ತಿ ಸರ್ಕಾರದ ಮಾಲೀಕತ್ವದಲ್ಲಿರುತ್ತದೆ. ಇದೊಂದು ಕುತೂಹಲಕಾರಿ ಕಾನೂನು ಎಂದು ಪಿತ್ರೋಡಾ ಹೇಳಿದ್ದರು.

ನಿಮ್ಮ ತಲೆಮಾರಿನಲ್ಲಿ ಆಸ್ತಿ ಸಂಪಾದಿಸಿ ಅದನ್ನು ಬಿಟ್ಟು ಹೋಗುತ್ತಿದ್ದೀರೆಂದರೆ, ಸಾರ್ವಜನಿಕರಿಗೆ ನೀವು ಆಸ್ತಿ ಬಿಟ್ಟುಹೋಗಬೇಕಾಗುತ್ತದೆ. ಎಲ್ಲಾವೂ ಅಲ್ಲ, ಅರ್ಧದಷ್ಟು ಆಸ್ತಿ ಮಾತ್ರ. ಇದು ನನಗೆ ನ್ಯಾಯಯುತ ಎನಿಸುತ್ತದೆ ಎಂದು ಹೇಳಿದ್ದರು.ಭಾರತದಲ್ಲಿ ಈ ಕಾನೂನು ಇಲ್ಲ. ಇಲ್ಲಿ 10 ಬಿಲಿಯನ್‌ ಹೊಂದಿರುವ ಯಾರಾದರೂ ವ್ಯಕ್ತಿ ಸತ್ತರೆ ಆತನ ಮಕ್ಕಳಿಗೆ ಎಲ್ಲಾ 10 ಬಿಲಿಯನ್‌ ಹಣ ಹೋಗುತ್ತದೆ. ಸಾರ್ವಜನಿಕರಿಗೆ ಏನೂ ಸಿಕ್ಕಲ್ಲ ಎಂದು ಆರೋಪಿಸಿದ್ದಾರೆ.

RELATED ARTICLES

Latest News