Friday, May 17, 2024
Homeರಾಷ್ಟ್ರೀಯಮತ್ತೆ ಸನಾತನ ಧರ್ಮವನ್ನು ಅವಹೇಳನ ಮಾಡಿದ ಡಿಎಂಕೆ

ಮತ್ತೆ ಸನಾತನ ಧರ್ಮವನ್ನು ಅವಹೇಳನ ಮಾಡಿದ ಡಿಎಂಕೆ

ಚೆನ್ನೈ,ಮಾ.7- ಉದಯನಿಧಿ ಸ್ಟಾಲಿನ್ ಸೇರಿದಂತೆ ತಮಿಳುನಾಡು ಸಚಿವರ ವಿರುದ್ಧದ ಕೋ ವಾರೆಂಟೊ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ಇತ್ಯರ್ಥಪಡಿಸಿದ ನಂತರ ಸನಾತನ ಧರ್ಮ ಎಂದರೇನು ಎಂಬುದನ್ನು ವಿವರಿಸುವಂತೆ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ವಕ್ತಾರ ಟಿಕೆಎಸ್ ಇಳಂಗೋವನ್ ಅವರು ಬಿಜೆಪಿಯನ್ನು ಕೇಳಿದ್ದಾರೆ.

ಸನಾತನ ಧರ್ಮ ಎಂದರೇನು ಎಂಬುದನ್ನು ಅವರು (ಬಿಜೆಪಿ) ವಿವರಿಸಬೇಕು. ಸನಾತನ ಧರ್ಮ ಎಂದರೇನು ಎಂಬುದನ್ನು ವಿವರಿಸಲು ಯಾರೂ ಮುಂದೆ ಬಂದಿಲ್ಲ ಎಂದು ಇಳಂಗೋವನ್ ಅಪಹಾಸ್ಯ ಮಾಡಿದ್ದಾರೆ. ಇದಕ್ಕೂ ಮುನ್ನ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಅನಿತಾ ಸುಮಂತ್ ಅವರು ತಮಿಳುನಾಡು ಸಚಿವರಾದ ಉದಯನಿಧಿ ಸ್ಟಾಲಿನ್, ಪಿ.ಕೆ.ಶೇಖರ್ ಬಾಬು ಮತ್ತು ಡಿಎಂಕೆ ಸಂಸದ ಎ ರಾಜಾ ವಿರುದ್ಧ ಸನಾತನ ಧರ್ಮದ ಕುರಿತಾದ ಟೀಕೆಗಳಿಗೆ ಸಂಬಂಧಿಸಿದಂತೆ ಕೋ ವಾರೆಂಟೊ ಹೊರಡಿಸುವುದನ್ನು ತಪ್ಪಿಸಿದರು.

ಹಿಂದೂ ಮುನ್ನಾನಿ ಸಂಘಟನೆಯ ಪದಾಧಿಕಾರಿಗಳು ಸಲ್ಲಿಸಿದ್ದ ಕೋ ವಾರೆಂಟೊ ಅರ್ಜಿಯ ಮೇರೆಗೆ ಈ ಆದೇಶ ಹೊರಡಿಸಲಾಗಿದೆ. ಇದಕ್ಕೂ ಮುನ್ನ ಮಾರ್ಚ್ 4 ರಂದು, ಸನಾತನ ಧರ್ಮದ ನಿರ್ಮೂಲನೆಗೆ ಕರೆ ನೀಡಿದ ಉದಯನಿಧಿ ಸ್ಟಾಲಿನ್ ಅವರ ಟೀಕೆಗಳ ಕುರಿತು ಸುಪ್ರೀಂ ಕೋರ್ಟ್ ಅವರನ್ನು ಪ್ರಶ್ನಿಸಿತು ಮತ್ತು ಅವರು ಸಾಮಾನ್ಯನಲ್ಲ ಆದರೆ ಮಂತ್ರಿ ಎನ್ನುವುದನ್ನು ಮರೆಯಬಾರದು ಎಂದು ತಿಳಿಹೇಳಿತ್ತು.

ಸ್ಟಾಲಿನ್ ಅವರು ತಮ್ಮ ಹೇಳಿಕೆಗಳ ಮೇಲೆ ಹಲವಾರು ರಾಜ್ಯಗಳಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಅನೇಕ ಎಫ್‍ಐಆರ್‍ಗಳನ್ನು ಒಂದೆ ಕಡೆ ಸೇರಿಸಬೇಕೆಂದು ಕೋರಿ ಸುಪ್ರೀಂ ಕೋರ್ಟ್‍ಗೆ ಮೊರೆ ಹೋಗಿದ್ದರು. ಮಾತನಾಡುವ ಮುನ್ನ ಸ್ಟಾಲಿನ್‍ಗೆ ಅದರ ಪರಿಣಾಮಗಳೇನು ಎಂದು ತಿಳಿದಿರಬೇಕು ಎಂದು ಪೀಠವು ಸ್ಟಾಲಿನ್‍ಗೆ ಎಚ್ಚರಿಕೆ ನೀಡಿತ್ತು. ನೀವು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಹಕ್ಕುಗಳ ಅಡಿಯಲ್ಲಿ ನಿಮ್ಮ ಹಕ್ಕುಗಳನ್ನು ದುರುಪಯೋಗಪಡಿಸಿಕೊಳ್ಳುತ್ತೀರಿ ಮತ್ತು ನಂತರ ಆರ್ಟಿಕಲ್ 32 ರ ಅಡಿಯಲ್ಲಿ ರಕ್ಷಣೆಗಾಗಿ ಸುಪ್ರೀಂ ಕೋರ್ಟ್‍ಗೆ ಬಂದಿದ್ದೀರಿ? ನೀವು ಹೇಳಿದ ಪರಿಣಾಮಗಳ ಬಗ್ಗೆ ನಿಮಗೆ ತಿಳಿದಿಲ್ಲವೇ? ಎಂದು ಪೀಠ ಖಾರವಾಗಿ ಕೇಳಿತ್ತು.

ಡಿಎಂಕೆ ನಾಯಕ ಸ್ಟಾಲಿನ್ ಅವರು ಸನಾತನ ಧರ್ಮವನ್ನು ಮಲೇರಿಯಾ ಮತ್ತು ಡೆಂಗ್ಯೂ ದಂತಹ ಕಾಯಿಲೆಗಳಿಗೆ ಹೋಲಿಸಿ ಟೀಕೆಗಳನ್ನು ಮಾಡಿದರು, ಆದರೆ ಅದು ಜಾತಿ ವ್ಯವಸ್ಥೆ ಮತ್ತು ಐತಿಹಾಸಿಕ ತಾರತಮ್ಯದಲ್ಲಿ ಬೇರೂರಿದೆ ಎಂಬ ಕಾರಣಕ್ಕಾಗಿ ಅದರ ನಿರ್ಮೂಲನೆಗೆ ಪ್ರತಿಪಾದಿಸಿದರು. ಡಿಎಂಕೆ ಸಂಸದ ಎ ರಾಜಾ ಈ ವಾರದ ಆರಂಭದಲ್ಲಿ ಬಿಜೆಪಿಯ ಜೈ ಶ್ರೀರಾಮ, ಭಾರತ್ ಮಾತಾ ಕೀ ಜೈ ಎಂಬ ಬಿಜೆಪಿ ಸಿದ್ಧಾಂತವನ್ನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿಕೆ ನೀಡುವ ಮೂಲಕ ವಿವಾದ ಸೃಷ್ಟಿಸಿದ್ದರು.

RELATED ARTICLES

Latest News