ನವದೆಹಲಿ,ಮೇ14- ಯೋಗಗುರು ಬಾಬಾ ರಾಮ್‌ದೇವ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಬಾಲಕೃಷ್ಣ ಅವರ ಮೇಲೆ ದಾಖಲಾಗಿದ್ದ ನ್ಯಾಯಾಂಗ ನಿಂದನೆ ನೋಟಿಸ್ ಆದೇಶವನ್ನು ಸುಪ್ರೀಂಕೋರ್ಟ್ ಕಾಯ್ದಿರಿಸಿದೆ. ಇದೇ ವೇಳೆ ಬಾಬಾ ರಾಮ್‌ದೇವ್‌ಗೆ ದೇಶದಲ್ಲಿ ಜನರು ನೀಡಿರುವ ನಿಮ ಸ್ಥಾನಮಾನವನ್ನು ಸಕಾರಾತಕವಾಗಿ ಬಳಸಿಕೊಳ್ಳಿ ಎಂದು ನ್ಯಾಯಾಲಯ ಸಲಹೆ ನೀಡಿದೆ.
ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರ ಪೀಠವು ಪತಂಜಲಿಯ ಉತ್ಪನ್ನಗಳ ಪರವಾನಗಿಯನ್ನು ಅಮಾನತುಗೊಳಿಸಿರುವ ಜಾಹೀರಾತುಗಳನ್ನು ಹಿಂಪಡೆಯಲು ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ಸೂಚಿಸುವ ಅಫಿಡವಿಟ್ ಸಲ್ಲಿಸಲು ಸಂಸ್ಥೆಯ ಪರ ವಕೀಲರು ಸಮಯ ಕೋರಿದ್ದಾರೆ. ಮೂರು ವಾರಗಳಲ್ಲಿ ಅಫಿಡವಿಟ್ ಸಲ್ಲಿಸುವಂತೆ ಪೀಠ ಹೇಳಿದೆ.
ವಿಚಾರಣೆಯ ಸಂದರ್ಭದಲ್ಲಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಅಧ್ಯಕ್ಷ ಆರ್.ವಿ. ಅಶೋಕನ್ ಅವರು, ಪತಂಜಲಿ ಆಯುರ್ವೇದ್‌ನ ತಪ್ಪುದಾರಿಗೆಳೆಯುವ ಜಾಹೀರಾತು ಪ್ರಕರಣದ ಕುರಿತು ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಸುಪ್ರೀಂಕೋರ್ಟ್‌ನ ವಿರುದ್ಧ ನೀಡಿದ್ದ ಹೇಳಿಕೆಗಳಿಗಾಗಿ ಬೇಷರತ್ ಕ್ಷಮೆಯಾಚಿಸಿದರು.
ಇದಕ್ಕೆ ಉತ್ತರಿಸಿದ ನ್ಯಾಯಮೂರ್ತಿ ಕೊಹ್ಲಿ, ಇಂತಹ ಹಾನಿಕಾರಕ ಹೇಳಿಕೆಗಳ ನಂತರ ನಾವು ನಿಮ್ಮ ಹೇಳಿಕೆಗಳನ್ನು ಒಪ್ಪಿಕೊಳ್ಳಬೇಕೇ, ಅವರು ನಿಮ್ಮನ್ನು ಅವಹೇಳನ ಮಾಡುತ್ತಿದ್ದಾರೆ ಎಂದು ಇನ್ನೊಂದು ಕಡೆಯನ್ನು ನ್ಯಾಯಾಲಯಕ್ಕೆ ಎಳೆದು ತಂದವರು ನೀವು, ಆದರೆ ನಿಮ್ಮನ್ನು ಪರೀಕ್ಷೆಗೆ ಒಳಪಡಿಸಿದಾಗ…? ಅವರ ಅಫಿಡವಿಟ್‌ನಿಂದ ಸಂತೋಷವಾಗಿಲ್ಲ ಎಂದು ಪೀಠವು ಹೇಳಿದೆ.
ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಲಿಲ್ಲ ಏಕೆ ಎಂದು ಪ್ರಶ್ನಿಸಿದ ನ್ಯಾಯಾಲಯ, ಎಲ್ಲವನ್ನೂ ಕಪ್ಪು ಮತ್ತು ಬಿಳಿ ಬಣ್ಣದಲ್ಲಿ ಬರೆಯಲಾಗಿದೆ, ನೀವು ನಿಜವಾಗಿಯೂ ಕ್ಷಮೆಯಾಚಿಸಲು ಬಯಸಿದರೆ ನೀವು ಏಕೆ ತಿದ್ದುಪಡಿ ಮಾಡಲಿಲ್ಲ? ಸಂದರ್ಶನದ ನಂತರ ನಿಮ್ಮನ್ನು ಉದ್ಧಾರ ಮಾಡಲು ನೀವು ಏನು ಮಾಡಿದ್ದೀರಿ? ನಮಗೆ ತಿಳಿಸಿ. ನಾವು ವಾಕ್ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವಲ್ಲಿ ಮೊದಲಿಗರು. ಆದರೆ ಕೆಲವು ಸಂದರ್ಭಗಳಲ್ಲಿ ಸ್ವಯಂ ಸಂಯಮ ಇರಬೇಕು.
ಅಧ್ಯಕ್ಷರಾಗಿ, ನೀವು ಸ್ವಯಂ ಸಂಯಮವನ್ನು ಹೊಂದಿರಬೇಕು. ಅದು ನಿಮಲ್ಲಿ ಕಾಣಿಸುತ್ತಿಲ್ಲ ಎಂದು ನ್ಯಾಯಮೂರ್ತಿ ಹಿಮಾಕೊಹ್ಲಿ ಹೇಳಿದರು.ಈ ಹಂತದಲ್ಲಿ ಐಎಂಎ ಅಧ್ಯಕ್ಷರು ಸಲ್ಲಿಸಿದ ಕ್ಷಮಾಪಣೆಯ ಅಫಿಡವಿಟ್ ಅನ್ನು ಸ್ವೀಕರಿಸಲು ನ್ಯಾಯಾಲಯವು ಒಲವು ತೋರುತ್ತಿಲ್ಲ ಎಂದು ಪೀಠವು ಐಎಂಎ ಪರ ವಕೀಲರಿಗೆ ತಿಳಿಸಿದೆ.
ಮೇ 7ರಂದು ಈ ವಿಷಯದ ವಿಚಾರಣೆಯ ಸಂದರ್ಭದಲ್ಲಿ, ಅಶೋಕನ್ ನೀಡಿದ ಹೇಳಿಕೆಗಳನ್ನು ಬಹಳ ತುಂಬಾ ಸ್ವೀಕಾರಾರ್ಹವಲ್ಲ ಎಂದು ಸುಪ್ರೀಂ ಕೋರ್ಟ್ ಬಣ್ಣಿಸಿದೆ.
ಐಎಂಎ ಅಧ್ಯಕ್ಷರ ಪರ ಹಾಜರಾದ ಹಿರಿಯ ವಕೀಲ ಪಿ.ಎಸ್. ಪಟ್ವಾಲಿಯಾ ಅವರು ಪರಿಹಾರಕ್ಕಾಗಿ ನ್ಯಾಯಾಲಯವನ್ನು ಒತ್ತಾಯಿಸಿದಾಗ, ನ್ಯಾಯಮೂರ್ತಿ ಕೊಹ್ಲಿ, ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಂತಹ ಆರೋಗ್ಯ ಪರಿಸ್ಥಿತಿಗಳನ್ನು ಗುಣಪಡಿಸುವ ಪತಂಜಲಿಯ ಜಾಹೀರಾತುಗಳ ಕುರಿತು ರಾಮ್‌ದೇವ್ ಮತ್ತು ಬಾಲಕೃಷ್ಣ ಅವರಿಗೆ ನ್ಯಾಯಾಲಯವು ತಾಕೀತು ಮಾಡಿ ಇಬ್ಬರ ಕ್ಷಮಾಪಣೆಯನ್ನೂ ನ್ಯಾಯಾಲಯ ತಿರಸ್ಕರಿಸಿ ಮುಂದಿನ ವಿಚಾರಣೆಯನ್ನು ಜುಲೈ 9ಕ್ಕೆ ಮುಂದೂಡಿದೆ.