Friday, November 22, 2024
Homeಬೆಂಗಳೂರುಕುಡಿದು ಶಾಲಾ ವಾಹನಗಳ ಚಾಲನೆ ಮಾಡಿದ 16 ಚಾಲಕರ ವಿರುದ್ಧ ಕೇಸ್

ಕುಡಿದು ಶಾಲಾ ವಾಹನಗಳ ಚಾಲನೆ ಮಾಡಿದ 16 ಚಾಲಕರ ವಿರುದ್ಧ ಕೇಸ್

ಬೆಂಗಳೂರು,ಜ.23- ಮದ್ಯಪಾನ ಮಾಡಿ ಚಾಲನೆ ಮಾಡುತ್ತಿದ್ದ ಶಾಲಾ ವಾಹನಗಳ ಚಾಲಕರುಗಳ ವಿರುದ್ಧ ನಗರ ಸಂಚಾರಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ 16 ಚಾಲಕರ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ನಗರದಲ್ಲಿ ಮದ್ಯಪಾನ ಮಾಡಿ ಚಾಲನೆ ಮಾಡುತ್ತಿದ್ದ ಶಾಲಾ ವಾಹನಗಳ ಚಾಲಕರುಗಳ ವಿರುದ್ಧ ನಗರ ಸಂಚಾರಿ ಪೊಲೀಸರು ಇಂದು ಬೆಳಿಗ್ಗೆ 7 ಗಂಟೆಯಿಂದ 9.30 ರವರೆಗೆ ವಿಶೇಷ ಕಾರ್ಯಾಚರಣೆ ಹಮ್ಮಿಕೊಂಡು 3,414 ವಾಹನಗಳನ್ನು ತಪಾಸಣೆ ನಡೆಸಿದರು.

ಆ ಸಂದರ್ಭದಲ್ಲಿ ಮದ್ಯಪಾನ ಮಾಡಿ ಶಾಲಾ ವಾಹನವನ್ನು ಚಾಲನೆ ಮಾಡುತ್ತಿದ್ದ 16 ಚಾಲಕರನ್ನು ಪತ್ತೆ ಹಚ್ಚಿ ಪ್ರಕರಣಗಳನ್ನು ದಾಖಲು ಮಾಡಲಾಗಿದ್ದು, ಅವರುಗಳ ಚಾಲನಾ ಅನುಜ್ಞಾ ಪತ್ರಗಳನ್ನು ಅಮಾನತುಪಡಿಸಲು ಸಂಬಂಧಪಟ್ಟ ಆರ್‍ಟಿಒ ಕಚೇರಿಗೆ ಸಲ್ಲಿಸಲಾಗಿರುತ್ತದೆ.

ಅಮೆರಿಕದಲ್ಲಿ ಬಂದೂಕುದಾರಿಯಿಂದ ಗುಂಡಿನ ದಾಳಿ, 8 ಮಂದಿ ಬಲಿ

ತಲೆಮರೆಸಿಕೊಂಡಿದ್ದ ರೌಡಿಶೀಟರ್ ಖಾಕಿ ವಶಕ್ಕೆ
ಬೆಂಗಳೂರು, ಜ.23- ಆರಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡು, ಉದ್ಘೋಷಣೆ (ಪ್ರೋಕ್ಲಮೇಷನ್) ಹೊರಡಿಸಲಾಗಿದ್ದ, ರಾಜಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿಶೀಟರ್‍ನನ್ನು ಸಿಸಿಬಿ ಪೊಲೀಸರು ಪತ್ತೆಹಚ್ಚಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿರುತ್ತಾರೆ.

ಉಗ್ರೇಗೌಡ ಅಲಿಯಾಸ್ ಗಿರೀಶ್(30) ಪೊಲೀಸರ ವಶದಲ್ಲಿರುವ ರೌಡಿಶೀಟರ್. ಈತನ ವಿರುದ್ದ ರಾಜಗೋಪಾಲನಗರ ಮತ್ತು ಕೊಡಿಗೆಹಳ್ಳಿಪೊಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆಗೆ ಯತ್ನ, ದರೋಡೆಗೆ ಯತ್ನ ಮತ್ತು ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ಪ್ರಕರಣಗಳು ದಾಖಲಾಗಿರುತ್ತದೆ.

ರಾಜಗೋಪಾಲನಗರ ನಗರ ಪೊಲೀಸ್ ಠಾಣೆಯ ಪ್ರಕರಣ ವೊಂದರಲ್ಲಿ ಈತ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದನು. ವಶಕ್ಕೆ ಪಡೆದ ರೌಡಿಶೀಟರ್‍ನನ್ನು ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಹಾಜರುಪಡಿಸಿ, ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗಿದ್ದು, ನಂತರ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಸಿ.ಸಿ.ಬಿಯ ಸಂಘಟಿತ ಅಪರಾಧ ದಳ (ಪೂರ್ವ) ದ ಅಧಿಕಾರಿ ಮತ್ತು ಸಿಬ್ಬಂದಿಗಳು ರೌಡಿಶೀಟರ್‍ನನ್ನು ಪತ್ತೆಹಚ್ಚಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿರುತ್ತಾರೆ.

RELATED ARTICLES

Latest News