Sunday, May 5, 2024
Homeರಾಷ್ಟ್ರೀಯಹಿಂದೂ ಸನಾತನ ಧರ್ಮದ ಬಗ್ಗೆ ತಿರುಪತಿಯಲ್ಲಿ ಮಠಾಧೀಶರ ಚರ್ಚೆ

ಹಿಂದೂ ಸನಾತನ ಧರ್ಮದ ಬಗ್ಗೆ ತಿರುಪತಿಯಲ್ಲಿ ಮಠಾಧೀಶರ ಚರ್ಚೆ

ಹೈದರಾಬಾದ್,ಫೆ.3- ಇಂದಿನಿಂದ ಮೂರು ದಿನಗಳ ಕಾಲ ತಿರುಮಲ ತಿರುಪತಿಯಲ್ಲಿ ಹಿಂದೂ ಸನಾತನ ಧರ್ಮದ ಮೌಲ್ಯಗಳ ಕುರಿತಂತೆ ನಾಡಿನ ಪ್ರಸಿದ್ಧ 57 ಮಠಾಧೀಶರು ಸಭೆ ನಡೆಸಲಿದ್ದಾರೆ. ಹಿಂದೂ ಸನಾತನ ಧರ್ಮದ ಮೌಲ್ಯಗಳನ್ನು ಎತ್ತಿಹಿಡಿಯುವ ಬಗ್ಗೆ ಚರ್ಚೆಗಳನ್ನು ನಡೆಸುತ್ತದೆ ಮತ್ತು ಧಾರ್ಮಿಕ ಮತಾಂತರದ ಬಗ್ಗೆಯೂ ಚರ್ಚಿಸಲಾಗುವುದು.

ಇಂದಿನಿಂದ ಆರಂಭವಾಗಲಿರುವ ಸನಾತನ ಧಾರ್ಮಿಕ ಸದಸ್ಯದಲ್ಲಿ ಪೀಠಾಪತಿಗಳು (ಮಠಾಧೀಶರು) ಮುಂದಿನ ಪೀಳಿಗೆಗೆ ಸನಾತನ ಧರ್ಮದ ಮೌಲ್ಯಗಳನ್ನು ಉಳಿಸಿಕೊಳ್ಳಲು ಆಧ್ಯಾತ್ಮಿಕ ಆಂದೋಲನವನ್ನು ನಡೆಸಲಿದ್ದಾರೆ ಎಂದು ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಟ್ರಸ್ಟ್ ಬೋರ್ಡ್ ಅಧ್ಯಕ್ಷ ಭೂಮನ ಕರುಣಾಕರ ರೆಡ್ಡಿ ತಿಳಿಸಿದ್ದಾರೆ.

ತಿರುಮಲದ ಅಸ್ತಾನ ಮಂಟಪದಲ್ಲಿ ನಡೆಯುವ ಧಾರ್ಮಿಕ ಸದಸ್‍ನಲ್ಲಿ ದೂರದ ಮತ್ತು ಹಿಂದುಳಿದ ಪ್ರದೇಶಗಳಲ್ಲಿ ನಡೆಯುವ ಧಾರ್ಮಿಕ ಮತಾಂತರವನ್ನು ತಡೆಯುವ ಬಗ್ಗೆಯೂ ಚರ್ಚಿಸಲಾಗುವುದು. ಟಿಟಿಡಿಯು ಈ ಹಿಂದೆ ದಲಿತ ಗೋವಿಂದಂ, ಕಲ್ಯಾಣಮಸ್ತು ಮತ್ತು ಕೈಸಿಕ ದ್ವಾದಶಿಯಂತಹ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ದೂರದ ಪ್ರದೇಶಗಳಲ್ಲಿ ಧಾರ್ಮಿಕ ಮತಾಂತರವನ್ನು ತಡೆಯಲು ಸಹಕಾರಿಯಾಗಿದೆ.

ರಾಜ್ಯಕ್ಕಾದ ಅನ್ಯಾಯ ಮರೆಮಾಚಲು ಅನಗತ್ಯ ವಿವಾದ : ಡಿ.ಕೆ.ಸುರೇಶ್ ಕಿಡಿ

ಹಿಂದೂ ಧರ್ಮದ ಮಹಾಕಾವ್ಯಗಳು, ಪರಂಪರೆ, ಸಂಸ್ಕøತಿ ಮತ್ತು ಧಾರ್ಮಿಕ ಪಠ್ಯಗಳಲ್ಲಿ ಹುದುಗಿರುವ ಮೌಲ್ಯಗಳನ್ನು ಸಾರ್ವಜನಿಕರಿಗೆ ಅದರಲ್ಲೂ ವಿಶೇಷವಾಗಿ ಇಂದಿನ ಯುವ ಪೀಳಿಗೆಗೆ ತಲುಪಲು ಉದ್ದೇಶಿಸಲಾಗಿದೆ. ನಾವು ಮಠಾಧೀಶರು ಮತ್ತು ಧರ್ಮದರ್ಶಿಗಳ ಸಲಹೆಗಳನ್ನು ಸ್ವಾಗತಿಸುತ್ತೇವೆ ಮತ್ತು ಅವರ ಸಲಹೆಗಳನ್ನು ಕಾರ್ಯಗತಗೊಳಿಸಲು ಯೋಜಿಸುತ್ತೇವೆ. ಹೆಚ್ಚಿನ ಧಾರ್ಮಿಕ ಕಾರ್ಯಕ್ರಮಗಳನ್ನು ಸಮಗ್ರ ರೀತಿಯಲ್ಲಿ ಕೈಗೊಳ್ಳಲಾಗುವುದು ಎಂದು ರೆಡ್ಡಿ ಹೇಳಿದರು.

ಕಳೆದ ಹಲವಾರು ದಶಕಗಳಿಂದ, ತಿರುಮಲವು ಆಧ್ಯಾತ್ಮಿಕತೆಯ ದ್ಯೋತಕವಾಗಿ, ಇಡೀ ದೇಶಕ್ಕೆ ಆಧ್ಯಾತ್ಮಿಕ ರಾಜಧಾನಿಯಾಗಿ ಕಂಡುಬರುತ್ತದೆ ಮತ್ತು ಇಂದು ಮತ್ತೆ, ಯಾತ್ರಿಕ ಕೇಂದ್ರವು ವಿದ್ವಾಂಸರ ಸಲಹೆಗಳನ್ನು ಸ್ವೀಕರಿಸಿದ ನಂತರ ದೇಶದಾದ್ಯಂತ ಮತ್ತೊಂದು ಆಧ್ಯಾತ್ಮಿಕ ಚಳುವಳಿಯನ್ನು ಮುನ್ನಡೆಸಲು ಸಜ್ಜಾಗಿದೆ. ನಮ್ಮ ಸನಾತನ ಧರ್ಮವನ್ನು ಮತ್ತಷ್ಟು ಬಲಪಡಿಸಲು ಮಠಾೀಶರು ಮತ್ತು ಧಾರ್ಮಿಕ ಸದಸ್‍ಗಳಲ್ಲಿ ದಾರ್ಶನಿಕರು ಭಾಗವಹಿಸುತ್ತಿದ್ದಾರೆ ಎಂದು ಅವರು ಹೇಳಿದರು.

RELATED ARTICLES

Latest News