Thursday, December 5, 2024
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (03-02-2024)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (03-02-2024)

ನಿತ್ಯ ನೀತಿ : ಪ್ರಪಂಚಕ್ಕೆ ನೀವು ಕೇವಲ ಒಬ್ಬ ವ್ಯಕ್ತಿ ಮಾತ್ರ. ಆದರೆ ನಿಮ್ಮನ್ನು ನಂಬಿಕೊಂಡು ಇರುವವರಿಗೆ ನೀವೇ ಒಂದು ಪ್ರಪಂಚ. ನೆನಪಿರಲಿ.

ಪಂಚಾಂಗ ಶನಿವಾರ 03-02-2024
ಶೋಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಹೇಮಂತ ಋತು / ಪುಷ್ಯ ಮಾಸ / ಕೃಷ್ಣ ಪಕ್ಷ / ತಿಥಿ: ಅಷ್ಟಮಿ / ನಕ್ಷತ್ರ: ವಿಶಾಖಾ / ಯೋಗ: ಗಂಡ / ಕರಣ: ತೈತಿಲ

ಸೂರ್ಯೋದಯ : ಬೆ.06.46
ಸೂರ್ಯಾಸ್ತ : 06.21
ರಾಹುಕಾಲ : 9.00-10.30
ಯಮಗಂಡ ಕಾಲ : 1.30-3.00
ಗುಳಿಕ ಕಾಲ : 6.00-7.30

ರಾಶಿ ಭವಿಷ್ಯ
ಮೇಷ
: ಕಾರ್ಯ ಸಾಧನೆಗಾಗಿ ಹೆಚ್ಚು ತಿರುಗಾಟ ನಡೆಸುವಿರಿ. ಸಗಟು ವ್ಯಾಪಾರಿಗಳಿಗೆ ಉತ್ತಮ ಲಾಭ.
ವೃಷಭ: ಮನೆಯಲ್ಲಿ ಸಂತಸದ ವಾತಾವರಣ ವಿರಲಿದೆ. ಆರ್ಥಿಕ ಸ್ಥಿತಿಯಲ್ಲಿ ಚೇತರಿಕೆ.
ಮಿಥುನ: ಹಳೆ ವಾಹನ ಖರೀದಿಸುವುದರಿಂದ ರಿಪೇರಿ ವೆಚ್ಚ ಹೆಚ್ಚಾಗಬಹುದು. ವ್ಯಾಪಾರದಲ್ಲಿ ನಷ್ಟ.

ಕಟಕ: ಆತ್ಮೀಯರ ಸಹಾಯ ಸಿಗಲಿದೆ. ವಸ್ತ್ರ ವಿನ್ಯಾಸಕರಿಗೆ ಅಧಿಕ ಲಾಭ ದೊರೆಯಲಿದೆ.
ಸಿಂಹ: ಮನೆ ಬಗ್ಗೆ ಉದಾ ಸೀನ ತೋರದೆ ಹೆಚ್ಚಿನ ಕಾಳಜಿ ವಹಿಸುವುದು ಸೂಕ್ತ.
ಕನ್ಯಾ: ಸದ್ಯಕ್ಕೆ ಕೆಲಸದ ಬದಲಾವಣೆ ಬೇಡ. ಆಹಾರ ಪದ್ಧತಿಯಲ್ಲಿ ಸರಿಯಾದ ನಿಯಮ ಪಾಲಿಸಿ.

ತುಲಾ: ಸರ್ಕಾರದಿಂದ ಆಗಬೇಕಾದ ಕೆಲಸಗಳು ಪ್ರಭಾವಿಗಳ ಮಧ್ಯಸ್ಥಿಕೆ ಯಿಂದ ನಡೆಯಲಿವೆ.
ವೃಶ್ಚಿಕ: ಮಕ್ಕಳ ಉನ್ನತ ವಿದ್ಯಾಭ್ಯಾಸದ ಕುರಿತು ಹೆಚ್ಚು ಚಿಂತೆ ಮಾಡದರಿರುವುದು ಒಳಿತು.
ಧನುಸ್ಸು: ಸಣ್ಣ ಪುಟ್ಟ ಅಡಚಣೆಗಳು ಕೆಲಸ-ಕಾರ್ಯಗಳಿಗೆ ಅಡ್ಡಿಯನ್ನುಂಟುಮಾಡಲಿವೆ.

ಮಕರ: ಉನ್ನತ ಸ್ಥಾನಮಾನ ದೊರೆಯಲಿದೆ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ.
ಕುಂಭ: ಹೊಸ ಯೋಜನೆಗಳಿಂದ ಲಾಭ. ಸರ್ಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಕಾರ್ಯಸಿದ್ಧಿ.
ಮೀನ: ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಪ್ರಭಾವಿ ವ್ಯಕ್ತಿಗಳಿಂದ ಪ್ರಶಂಸೆ ದೊರೆಯಲಿದೆ.

RELATED ARTICLES

Latest News