ಬೆಂಗಳೂರು, ಅ.11- 2023ನೇ ಸಾಲಿನ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿರುವ ಪಾಕಿಸ್ತಾನ ತಂಡದ ನಾಯಕ ಬಾಬರ್ ಆಝಮ್ ಅವರು ಟೀಮ್ ಇಂಡಿಯಾ ವಿರುದ್ಧದ ಪಂದ್ಯದಲ್ಲಿ ರನ್ ಹೊಳೆ ಹರಿಸಲಿದ್ದಾರೆ ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ಶೇನ್ ವಾಟ್ಸನ್ ಭವಿಷ್ಯನುಡಿದಿದ್ದಾರೆ.
ಆಫ್ಘಾನಿಸ್ತಾನ ವಿರುದ್ಧ 5 ರನ್ ಗಳಿಗೆ ತಮ್ಮ ಆಟವನ್ನು ಮುಗಿಸಿದ್ದ ಬಾಬರ್ ಆಝಮ್, ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 10 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ತಮ್ಮ ಈ ಕಳಪೆ ಬ್ಯಾಟಿಂಗ್ ಪ್ರದರ್ಶನಕ್ಕಾಗಿ ಅವರು ಅಭಿಮಾನಿಗಳು ಹಾಗೂ ಕ್ರಿಕೆಟ್ ವಿಶ್ಲೇಷಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಬ್ಯಾಟಿಂಗ್‍ನಲ್ಲಿ ಸಂಪೂರ್ಣವಾಗಿ ವೈಫಲ್ಯತೆ ಕಂಡಿದ್ದರೂ, ಆಫ್ಘಾನಿಸ್ತಾನ ಹಾಗೂ ಶ್ರೀಲಂಕಾ ವಿರುದ್ಧದ ಪಂದ್ಯಗಳಲ್ಲಿ ತಂಡವನ್ನು ಗೆಲುವಿನ ಹಾದಿಯಲ್ಲಿ ಸಾಗಿಸಿರುವ ಪಾಕ್ ನಾಯಕ ಬಾಬರ್ ಆಝಮ್ ಅಕ್ಟೋಬರ್ 14 ರಂದು ಅಹಮದಾಬಾದ್‍ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಸಂಪ್ರದಾಯಿಕ ವೈರಿ ಟೀಮ್ ಇಂಡಿಯಾ ವಿರುದ್ಧ ತಮ್ಮ ಮುಂದಿನ ಪಂದ್ಯ ಆಡಲಿದ್ದು, ತಮ್ಮ ಎಂದಿನ ಸೋಟಕ ಫಾರ್ಮ್‍ಗೆ ಮರಳಲು ಎದುರು ನೋಡುತ್ತಿದ್ದಾರೆ.
ಮನವೊಲಿಸಿದ ಬಿಎಸ್‌ವೈ, ಧರಣಿ ಕೈಬಿಟ್ಟ ಶಾಸಕ ಮುನಿರತ್ನ
`ಬಾಬರ್ ಆಝಮ್ ಕ್ಲಾಸ್ ಆಟಗಾರನಾಗಿದ್ದು, ಕೆಲವು ಪಂದ್ಯಗಳಿಂದ ಅವರು ರನ್ ವೈಫಲ್ತೆ ಎದುರಿಸಿದ್ದಾರೆ, ಕಳೆದ ಐದು ಇನ್ನಿಂಗ್ಸ್‍ಗಳಲ್ಲಿ 30ಕ್ಕೂ ಕಡಿಮೆ ಮೊತ್ತವನ್ನು ಗಳಿಸಿದ್ದಾರೆ. ಬಾಬರ್ ಆಝಮ್ ಅವರು ತಾವು ಎದುರಿಸುವ ಮೊದಲ ಕೆಲವು ಎಸೆತಗಳಲ್ಲಿ ಅಪಾಯಕಾರಿ ಕಂಡುಬಂದರೂ, ನಂತರ ಆರಂಭದಲ್ಲಿ ಸಿಕ್ಕ ಅವಕಾಶವನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸಲು ಎಡವಿದ್ದು, ಟೀಮ್ ಇಂಡಿಯಾದ ವಿರುದ್ಧದ ಪಂದ್ಯದಲ್ಲಿ ತಮ್ಮ ಕಳಪೆ ಪ್ರದರ್ಶನದಿಂದ ಹೊರಬಂದು ಬೃಹತ್ ಮೊತ್ತ ಗಳಿಸುತ್ತಾರೆ’ ಎಂದು ವಾಟ್ಸನ್ ಹೇಳಿದ್ದಾರೆ.