Tuesday, April 30, 2024
Homeರಾಜ್ಯಮತ್ತೆ ಗಗನಕ್ಕೇರಿದ ಈರುಳ್ಳಿ ಬೆಲೆ

ಮತ್ತೆ ಗಗನಕ್ಕೇರಿದ ಈರುಳ್ಳಿ ಬೆಲೆ

ಬೆಂಗಳೂರು, ಅ.28- ಟೊಮ್ಯಾಟೋ ಬಳಿಕ ಈಗ ಈರುಳ್ಳಿ ಬೆಲೆ ಗಗನಕ್ಕೆ ಏರಿಕೆಯಾಗುತ್ತಿದೆ. 20-30ರೂ. ಆಸುಪಾಸಿನಲ್ಲಿದ್ದ ಈರುಳ್ಳಿ ಕೆಜಿಗೆ 60-70ರೂ.ಗೆ ತಲುಪಿದ್ದು, ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳತೊಡಗಿದೆ. ಕಳೆದ ತಿಂಗಳಷ್ಟೇ ಟೊಮ್ಯಾಟೋ ಬೆಲೆ ಗಗನಕ್ಕೇರಿದ್ದು ಕೆಜಿಗೆ 200ರೂ. ತಲುಪಿತ್ತು. ಗ್ರಾಂ ಲೆಕ್ಕದಲ್ಲಿ ಜನರು ಟೊಮ್ಯಾಟೋ ಕೊಳ್ಳುವ ಪರಿಸ್ಥಿತಿ ಬಂದಿತ್ತು. ಈಗ ದೇಶಾದ್ಯಂತ ಈರುಳ್ಳಿ ಬೆಲೆ ಏರಿಕೆಯಾಗಿದೆ.

ಚಿಲ್ಲರೆ ಮಾರುಕಟ್ಟೆಯಲ್ಲಿ ಶೇ.50ಕ್ಕಿಂತ ಹೆಚ್ಚು ಬೆಲೆ ಏರಿಕೆಯಾಗಿದ್ದು, ಸಂಕಷ್ಟಕ್ಕೆ ಸಿಲುಕಿದ್ದಾರೆ. ನವದೆಹಲಿ, ಬೆಂಗಳೂರು, ಕೋಲ್ಕತ್ತಾ, ಮುಂಬೈ, ಚೆನ್ನೈ ಸೇರಿದಂತೆ ಬಹುತೇಕ ಎಲ್ಲ ನಗರಗಳಲ್ಲೂ ಕೂಡ ಈರುಳ್ಳಿ ಬೆಲೆ ಏರಿಕೆಯಾಗಿದೆ. ಅಷ್ಟೇ ಅಲ್ಲದೆ ದೇಶದೆಲ್ಲೆಡೆ ಈರುಳ್ಳಿ ಬೆಲೆ ಏರಿಕೆಯಾಗುತ್ತಲೇ ಇದ್ದು, ಬೆಲೆ ಏರಿಕೆಯಿಂದ ಜನ ತತ್ತರಿಸತೊಡಗಿದ್ದಾರೆ.

ಕಳೆದ ಸಾಲಿನಲ್ಲಿ ಇದೇ ಸಮಯದಲ್ಲಿ ಕೆಜಿಗೆ 25 ರಿಂದ 30ರೂ. ಇತ್ತು. ಆದರೆ, ಈಗ 50 ರಿಂದ 60ರೂ. ತಲುಪಿದೆ. ದೆಹಲಿಯಲ್ಲಿ 50ರೂ., ಬೆಂಗಳೂರಿನಲ್ಲಿ 55ರೂ., ತೆಲಂಗಾಣದಲ್ಲಿ 60ರೂ. ಆಗಿದೆ. ಕೆಲವೆಡೆ ಅತಿವೃಷ್ಟಿಯಿಂದ ಬೆಳೆ ಹಾನಿಯಾದರೆ ಮತ್ತೆ ಕೆಲವೆಡೆ ಅನಾವೃಷ್ಠಿಯಿಂದ ಬೆಳೆ ಇಲ್ಲದೆ ಈರುಳ್ಳಿ ಕೊರತೆ ಕಂಡುಬಂದಿದೆ.

ತಮಿಳುನಾಡಿನ 12 ಮೀನುಗಾರರನ್ನು ಬಂಧಿಸಿದ ಮಾಲ್ಡೀವ್ಸ್

ಹೀಗಾಗಿ ಈರುಳ್ಳಿ ಬೆಲೆ ಏರಿಕೆಯಾಗುತ್ತಿದೆ. ದೇಶಾದ್ಯಂತ ಈರುಳ್ಳಿ ದರ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಜನರಿಗೆ ಹೊರೆಯಾಗುವುದನ್ನು ತಪ್ಪಿಸಲು ಕೇಂದ್ರ ಸರ್ಕಾರ ರಿಯಾಯಿತಿ ದರದಲ್ಲಿ ಈರುಳ್ಳಿ ಮಾರಾಟ ಮಾಡಲು ನಿರ್ಧರಿಸಿದೆ. ಯಾವ ರಾಜ್ಯಗಳಲ್ಲಿ ಈರುಳ್ಳಿ ದರ ಭಾರೀ ಏರಿಕೆ ಕಂಡಿದೆಯೋ ಅಲ್ಲೆಲ್ಲ ಕೇಂದ್ರದ ಬಳಿ ಇರುವ ದಾಸ್ತಾನಿನಿಂದ ಈರುಳ್ಳಿ ಸರಬರಾಜು ಮಾಡಿ ರಿಯಾಯಿತಿ ದರದಲ್ಲಿ ಅಂದರೆ ಕೆಜಿಗೆ 25ರೂ.ನಂತೆ ಮಾರಾಟ ಮಾಡಲು ನಿರ್ಧರಿಸಲಾಗಿದೆ.

ರಾಜ್ಯದಲ್ಲಿ ಪ್ರತಿಯೊಂದು ವಸ್ತುಗಳ ಬೆಲೆ ಏರಿಕೆಯಿಂದ ಈಗಾಗಲೇ ಜನ ತತ್ತರಿಸಿದ್ದಾರೆ. ಒಂದೆಡೆ ಬರಗಾಲ, ಮತ್ತೊಂದೆಡೆ ಬೆಲೆ ಏರಿಕೆ, ಬಸ್ ದರ, ವಿದ್ಯುತ್ ದರ, ಆಹಾರ ಪದಾರ್ಥಗಳ ದರದ ಜತೆಗೆ ಹಣ್ಣು-ತರಕಾರಿಗಳ ಬೆಲೆಯೂ ಏರಿಕೆಯಾಗಿದೆ. ಈಗ ಈರುಳ್ಳಿ ಬೆಲೆ ಕೂಡ ಗಗನಕ್ಕೇರುತ್ತಿದ್ದು, ಜನ ತತ್ತರಿಸಿಹೋಗಿದ್ದಾರೆ.

ಬಾಂಗ್ಲಾದಲ್ಲಿ ಹಿಂಸಾಚಾರ ಭುಗಿಲೇಳುವ ಸಾಧ್ಯತೆ

ಕಳೆದ ಬಾರಿ ರಾಜ್ಯದಲ್ಲಿ ಭಾರೀ ಮಳೆಯಿಂದ ಈರುಳ್ಳಿ ಬೆಳೆ ಹಾಳಾಗಿತ್ತಾದರೂ ಈರುಳ್ಳಿ ಬೆಲೆ ಏರಿಕೆಯಾಗಿರಲಿಲ್ಲ. ಆದರೆ, ಈ ಬಾರಿ ಮಳೆ ಇಲ್ಲದೆ ಬೆಳೆ ಇಲ್ಲದೆ ಜನಸಾಮಾನ್ಯರಿಗೆ ಈರುಳ್ಳಿ ಕೈಗೆಟಕುತ್ತಿಲ್ಲ. ಪ್ರತಿದಿನ ಜನಸಾಮಾನ್ಯರಿಗೆ ಅಗತ್ಯವಾಗಿರುವ ಈರುಳ್ಳಿ, ಆಲೂಗಡ್ಡೆ, ಟೊಮ್ಯಾಟೋ ಬೆಲೆ ಏರಿಕೆಯಾದರೆ ಜೀವನ ನಡೆಸುವುದು ಕಷ್ಟಸಾಧ್ಯ. ಸರ್ಕಾರ ಮಧ್ಯ ಪ್ರವೇಶಿಸಿ ದಿನವಹಿ ವಸ್ತುಗಳು ಕೈಗೆಟಕುವ ದರದಲ್ಲಿ ಜನಸಾಮಾನ್ಯರಿಗೆ ಸಿಗುವಂತೆ ನೋಡಿಕೊಳ್ಳಬೇಕಾಗಿದೆ.

RELATED ARTICLES

Latest News