ನವದೆಹಲಿ,ಮಾ.26- ಭಾರತೀಯ ಜನತಾ ಪಕ್ಷದ ನಾರಿ ಶಕ್ತಿ ಘೋಷಣೆಗಳು ನಿಜವಾದ ಕ್ರಿಯೆಯಿಲ್ಲದ ಪದಗಳಾಗಿ ಉಳಿದಿವೆ ಎಂದು ಆರೋಪಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ವಿರುದ್ಧ ಕೇಂದ್ರ ಸಚಿವೆ ಸ್ಮೃತಿ ಇರಾನಿ ವಾಗ್ದಾಳಿ ನಡೆಸಿದ್ದಾರೆ.
ಮಹಿಳೆಯರಿಗೆ ಸಂಬಂಧಿಸಿದ ವಿಷಯಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಟೀಕೆಗೆ ತಿರುಗೇಟು ನೀಡಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಜೈರಾಮ್ ರಮೇಶ್ ಅವರನ್ನು ಗಾಂಧಿಗಳ ಆಸ್ಥಾನಿಕ ಎಂದು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ನಲ್ಲಿ ಪೊಸ್ಟ್ ಮಾಡಿದ್ದಾರೆ.
ಭಾರತದ ನಿಜವಾದ ವಾರಸುದಾರರು ಅದರ ಸಂಪತ್ತನ್ನು ಲೂಟಿ ಮಾಡಿದ್ದಾರೆ, ಅವರ ಪತನದ ನಂತರವೂ, ಅವರ ಆಸ್ಥಾನಿಕರು ಸತ್ಯಗಳನ್ನು ತಿರುಚುವುದನ್ನು ಮುಂದುವರೆಸಿದ್ದಾರೆ, ಮಹಿಳಾ ಕಲ್ಯಾಣಕ್ಕಾಗಿ ಬಿಜೆಪಿ ಸರ್ಕಾರದ ಪ್ರಯತ್ನಗಳನ್ನು ಹಾಳುಮಾಡಲು ಅಂಕಿಅಂಶಗಳನ್ನು ದುರ್ಬಳಕೆ ಮಾಡುತ್ತಿದ್ದಾರೆ ಎಂದು ಇರಾನಿ ವಾಗ್ದಾಳಿ ನಡೆಸಿದ್ದಾರೆ. ಕಳೆದ 10 ವರ್ಷಗಳಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ದೊಡ್ಡ ವೈಫಲ್ಯ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಸೋಮವಾರ ಆರೋಪಿಸಿದ್ದರು.
ಜೂನ್ 2024 ರಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಯು ಮಹಿಳೆಯರಿಗೆ 10 ವರ್ಷಗಳ ಅನ್ಯಾಯ-ಕಾಲ ಕೊನೆಗೊಳ್ಳುತ್ತದೆ ಎಂದು ಅವರು ಹೇಳಿದರು. 10 ವರ್ಷಗಳಿಂದ, ಸಚಿವಾಲಯವು ಅಸಮರ್ಥತೆ, ನಿರಾಸಕ್ತಿ ಮತ್ತು ಮಹಿಳಾ ವಿರೋ ಮನಸ್ಥಿತಿಯನ್ನು ಮಾತ್ರ ನೋಡಿದೆ ಎಂದು ಅವರು ಆರೋಪಿಸಿದ್ದರು.
ಕಾಂಗ್ರೆಸ್ನ ಆರೋಪದ ನಂತರ, ಸ್ಮೃತಿ ಇರಾನಿ ಎಕ್ಸ್ನಲ್ಲಿ ಸುದೀರ್ಘ ಸಂದೇಶದ ಥ್ರೆಡ್ ಅನ್ನು ಪೊಸ್ಟ್ ಮಾಡಿ, ಮೂರ್ಖರು ಇತರರನ್ನು ಮರುಳು ಮಾಡಲು ಪ್ರಯತ್ನಿಸಿದಾಗ, ಅವರು ಎಷ್ಟು ಮೂರ್ಖರು ಎಂಬುದನ್ನು ಅವರು ನಿಜವಾಗಿ ತೋರಿಸುತ್ತಾರೆ. ಶಾಶ್ವತ ಉತ್ತರಾಧಿಕಾರಿಯ ಪರವಾಗಿ ದಯಪಾಲಿಸುವ ಅಬ್ಬರದ ಮತ್ತು ಸ್ವಲ್ಪ ಕರುಣಾಜನಕ ಪ್ರಯತ್ನದಲ್ಲಿ, ಒಬ್ಬ ನಿರ್ದಿಷ್ಟ ಆಸ್ಥಾನಿಕನು ಅರಿವಿಲ್ಲದೆ ತನ್ನದೇ ಆದ ಪ್ರಜ್ವಲಿಸುವ ಅಸಾಮಥ್ರ್ಯವನ್ನು ಬಹಿರಂಗಪಡಿಸಿದ್ದಾನೆ, ಬೌದ್ಧಿಕತೆಯ ಸೋಗಿನಲ್ಲಿ ಅವನ ದಾರಿತಪ್ಪಿದ ಪ್ರಯತ್ನಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಪಾತ್ರ ಮತ್ತು ಆದೇಶದ ಮುಜುಗರದ ತಪ್ಪು ವ್ಯಾಖ್ಯಾನಕ್ಕೆ ಕಾರಣವಾಗಿವೆ ಎಂದಿದ್ದಾರೆ.