ನಾಗೋಯಾ, ಅ.19- ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ಭಾರತ ತನ್ನ ಪದಕದ ಖಾತೆಯನ್ನು ತೆರೆದಿದ್ದು, ಮಹಿಳೆಯರ 10 ಮೀಟರ್ ಏರ್ ರೈಫಲ್ ಎಸ್ಎಚ್1(ಕಾಲುಗಳಲ್ಲಿ ಅಂಗವೈಕಲ್ಯ) ವಿಭಾಗದಲ್ಲಿ ಮೋನಾ ಅಗರ್ವಾಲ್ ಅವರು ಕ್ರೀಡಾಕೂಟದ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದರೆ, ಅವನಿ ಲೇಖರಾ ಬೆಳ್ಳಿ ಪದಕ ತಮದಾಗಿಸಿಕೊಂಡರು.
ಈ ಮೂಲಕ ಭಾರತ ಈ ಸ್ಪರ್ಧೆಯಲ್ಲಿ ಮೊದಲ ಎರಡು ಸ್ಥಾನಗಳನ್ನು ಪಡೆದುಕೊಂಡಿತು. 2024ರ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದಿದ್ದ ಮೋನಾ ಅಗರ್ವಾಲ್ ಅವರು ಈ ಭಾರಿ 250.0 ಅಂಕಗಳನ್ನು ಗಳಿಸಿ ಕ್ರೀಡಾಕೂಟದ ಹೊಸ ದಾಖಲೆ ನಿರ್ಮಿಸಿದರು. ಅವರು ತಮ ಖ್ಯಾತ ಸಹ ಆಟಗಾರ್ತಿ ಅವನಿ ಲೇಖರಾ ಅವರನ್ನು ಕೇವಲ 0.4 ಅಂಕಗಳ ಅಂತರದಿಂದ ಹಿಂದಿಕ್ಕಿದರು.
ಎರಡು ಬಾರಿ ಪ್ಯಾರಾಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದಿರುವ ಅವನಿ ಲೇಖರಾ ಅವರು 249.6 ಅಂಕಗಳೊಂದಿಗೆ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು.ಸ್ಪರ್ಧೆಯು ಕೊನೆಯ ಕ್ಷಣದವರೆಗೂ ತೀವ್ರ ಪೈಪೋಟಿಯಿಂದ ಕೂಡಿತ್ತು. ಅಂತಿಮ ಶಾಟ್ಗಳನ್ನು ಹೊಡೆಯುವ ಮೊದಲು ಮೋನಾ ಅವರು 239.2 ಅಂಕಗಳೊಂದಿಗೆ ಮುನ್ನಡೆಯಲ್ಲಿದ್ದರೆ, ಅವನಿ 239.1 ಅಂಕಗಳನ್ನು ಗಳಿಸಿ ಕೇವಲ 0.1 ಅಂಕದ ಅಂತರದಲ್ಲಿದ್ದರು.ಈ ವಿಭಾಗದಲ್ಲಿ ದಕ್ಷಿಣ ಕೊರಿಯಾದ ಯುನ್ರಿ ಲೀ ಕಂಚಿನ ಪದಕ ಗೆದ್ದರು.
