ಈಸ್ಟ್ ರುದರ್ಫೋರ್ಡ್, ಜು. 20- ಫೀಪಾ ಪುಟ್ಬಾಲ್ ವಿಶ್ವಕಪ್-2026 ಮುಕ್ತವಾಗಿದ್ದು ಫ್ರಾನ್ಸ್ ನ ಸ್ಟಾರ್ ಫಾರ್ವರ್ಡ್ ಕೈಲಿಯನ್ ಎಂಬಾಪ್ಪೆ ಸತತ ಎರಡನೇ ಬಾರಿ ಗೋಲ್ಡನ್ ಬೂಟ್ ಪ್ರಶಸ್ತಿಯನ್ನು ಗೆದ್ದರೆ, ವಿಶ್ವಕಪ್ ಚಾಂಪಿಯನ್ ಸ್ಪೇನ್ ತಂಡದ ನಾಯಕ ರೋಡ್ರಿ ಗೋಲ್ಡನ್ ಬಾಲ್ ಪ್ರಶಸ್ತಿಗೆ ಭಾಜನರಾದರು.
ಗೋಲ್ಕೀರ್ಪ ಉನೈ ಸಿಮೋನ್ ಗೋಲ್ಡನ್ ಗ್ಲೋವ್್ಸ, ಹಾಗೂ 18 ವರ್ಷದ ರಕ್ಷಣಾ ಆಟಗಾರ ಪೌ ಕುಬಾಸಿರ್ ಶ್ರೇಷ್ಠ ಯುವ ಆಟಗಾರ (ಬೆಸ್ಟ್ ಯಂಗ್ ಪ್ಲೇಯರ್)ಪ್ರಶಸ್ತಿಯನ್ನು ಪಡೆದರು.ಮ್ಯಾಂಚೆಸ್ಟರ್ ಸಿಟಿ ಮಧ್ಯಮೈದಾನದ ಆಟಗಾರ ರೋಡ್ರಿ, ಮೊಣಕಾಲಿನ ಶಸ್ತ್ರಚಿಕಿತ್ಸೆಯ ಬಳಿಕ ಎಂಟು ತಿಂಗಳು ಮೈದಾನದಿಂದ ದೂರವಿದ್ದರೂ ವಿಶ್ವಕಪ್ನಲ್ಲಿ ಸ್ಪೇನ್ ತಂಡವನ್ನು ಮುನ್ನಡೆಸಿದ ನಾಯಕತ್ವಕ್ಕಾಗಿ ಗೋಲ್ಡನ್ ಬಾಲ್ ಪ್ರಶಸ್ತಿಗೆ ಆಯ್ಕೆಯಾದರು.
ಫ್ರಾನ್್ಸನ ಸ್ಟಾರ್ ಫಾರ್ವರ್ಡ್ ಕೈಲಿಯನ್ ಎಂಬಾಪ್ಪೆ ಎರಡನೇ ಬಾರಿ ಗೋಲ್ಡನ್ ಬೂಟ್ ಪ್ರಶಸ್ತಿಯನ್ನು ಗೆದ್ದು ಹೊಸ ಇತಿಹಾಸ ನಿರ್ಮಿಸಿದ್ದಾರೆ.ವಿಶ್ವಕಪ್ನಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರನಿಗೆ ನೀಡುವ ಗೋಲ್ಡನ್ ಬೂಟ್ ಪ್ರಶಸ್ತಿಯನ್ನು ಗೆದ್ದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಎಂಬಾಪ್ಪೆ ಪಾತ್ರರಾಗಿದ್ದಾರೆ.
ಭಾನುವಾರ ನಡೆದ ಫೈನಲ್ನಲ್ಲಿ ಅರ್ಜೆಂಟೀನಾ ತಂಡವು ಸ್ಪೇನ್ ವಿರುದ್ಧ 0-1 ಗೋಲುಗಳಿಂದ ಸೋತಿತು. ಈ ಪಂದ್ಯದಲ್ಲಿ ಮೆಸ್ಸಿಗೋಲು ಅಥವಾ ಅಸಿಸ್ಟ್ ಎರಡನ್ನೂ ದಾಖಲಿಸಲು ವಿಫಲರಾದರು. ಕಳೆದ 12 ವಿಶ್ವಕಪ್ ಪಂದ್ಯಗಳಲ್ಲಿ ಇದೇ ಮೊದಲ ಬಾರಿಗೆ ಅವರು ಗೋಲು ಅಥವಾ ಅಸಿಸ್ಟ್ ಇಲ್ಲದೆ ಪಂದ್ಯ ಮುಗಿಸಿದರು.
ಟೂರ್ನಿಯಲ್ಲಿ ಫ್ರಾನ್್ಸ ನಾಲ್ಕನೇ ಸ್ಥಾನ ಪಡೆದರೂ, ಎಂಬಾಪ್ಪೆ ಒಟ್ಟು 10 ಗೋಲುಗಳು ಹಾಗೂ 4 ಅಸಿಸ್ಟ್ಗಳನ್ನು ದಾಖಲಿಸಿ ಗೋಲ್ಡನ್ ಬೂಟ್ ತಮದಾಗಿಸಿಕೊಂಡರು. ಮೆಸ್ಸಿ8 ಗೋಲುಗಳು ಮತ್ತು 4 ಅಸಿಸ್ಟ್ಗಳೊಂದಿಗೆ ಟೂರ್ನಿ ಮುಗಿಸಿದರು.
ಫೈನಲ್ಗೆ ಮುನ್ನ ಮೆಸ್ಸಿ ಮತ್ತು ಎಂಬಾಪ್ಪೆ ತಲಾ ಎಂಟು ಗೋಲುಗಳನ್ನು ಗಳಿಸಿದ್ದರೂ, ಹೆಚ್ಚುವರಿ ಅಸಿಸ್ಟ್ ಹೊಂದಿದ್ದ ಕಾರಣ ಮೆಸ್ಸಿಗೋಲ್ಡನ್ ಬೂಟ್ ಸ್ಪರ್ಧೆಯಲ್ಲಿ ಮುನ್ನಡೆಯಲ್ಲಿದ್ದರು.
ಆದರೆ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಎಂಬಾಪ್ಪೆ ಎರಡು ಗೋಲು ಮತ್ತು ಒಂದು ಅಸಿಸ್ಟ್ ದಾಖಲಿಸಿ ಒಟ್ಟು 10 ಗೋಲುಗಳಿಗೆ ಏರಿದರು. ಈ ಮೂಲಕ 1970ರ ವಿಶ್ವಕಪ್ನಲ್ಲಿ ಜರ್ಮನಿಯ ದಿಗ್ಗಜ ಗೆರ್ಡ್ ಮುಲ್ಲರ್ 10 ಗೋಲು ಗಳಿಸಿದ ಬಳಿಕ ಒಂದೇ ವಿಶ್ವಕಪ್ನಲ್ಲಿ 10 ಗೋಲು ದಾಖಲಿಸಿದ ಮೊದಲ ಆಟಗಾರರಾದರು.
ನಾಲ್ಕು ವರ್ಷಗಳ ಹಿಂದೆ ಕತಾರ್ನಲ್ಲಿ ನಡೆದ ವಿಶ್ವಕಪ್ನಲ್ಲೂ ಎಂಬಾಪ್ಪೆ ಗೋಲ್ಡನ್ ಬೂಟ್ ಗೆದ್ದಿದ್ದರು. ಆಗ ಫ್ರಾನ್್ಸತಂಡ ಅರ್ಜೆಂಟೀನಾ ವಿರುದ್ಧ ಸೋತಿತ್ತು.ಇದೇ ವೇಳೆ, ವಿಶ್ವಕಪ್ನ ಶ್ರೇಷ್ಠ ಆಟಗಾರನಿಗೆ ನೀಡುವ ಗೋಲ್ಡನ್ ಬಾಲ್ ಪ್ರಶಸ್ತಿಗಾಗಿ ಮೆಸ್ಸಿ ಮತ್ತೊಮ್ಮೆ ಪ್ರಮುಖ ಸ್ಪರ್ಧಿಯಾಗಿ ಉಳಿದಿದ್ದಾರೆ.
ಈಗಾಗಲೇ ಎರಡು ಬಾರಿ ಈ ಪ್ರಶಸ್ತಿ ಗೆದ್ದಿರುವ ಏಕೈಕ ಆಟಗಾರರಾಗಿರುವ ಅವರು, 39ನೇ ವಯಸ್ಸಿನಲ್ಲಿಯೂ ಅರ್ಜೆಂಟೀನಾವನ್ನು ಸತತ ಎರಡನೇ ಬಾರಿ ಫೈನಲ್ಗೆ ಮುನ್ನಡೆಸಿದ ಸಾಧನೆಯಿಂದ ಮತ್ತೊಮ್ಮೆ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.ಸ್ಪೇನ್ನಲ್ಲಿ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ.ತಂಡದ ಆಟಗಾರರಿಗೆ ಬರ್ಜರಿ ಬಹುಮಾನದ ಜೊತೆ ಭಾರಿ ಮೊತ್ತದ ಉಡುಗೊರೆ ಲಭಿಸಿದೆ .ಇನ್ನು ಅರ್ಜೆಂಟೀನಾ ತಂಡವು ರನರ್ಅಪ್ಆಗಿ ಬಹುಮಾನದ ಸುರಿಮಳೆಯಾಗಿದೆ.
