ರಾಂಚಿ,ಮಾ.4- ಅತಿ ವೇಗದ ಸಂಚಾರಕ್ಕಾಗಿ ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ರಾಂಚಿ ಸಂಚಾರಿ ಠಾಣೆ ಪೊಲೀಸರು ದಂಡ ವಿಧಿಸಿದ್ದಾರೆ.
ಮೋಟಾರು ವಾಹನ ಕಾಯ್ದೆ ಪ್ರಕಾರ ಎಂ.ಎಸ್.ಧೋನಿ ಅವರು ತಮ ನಿವೇಶನದ ಸಮೀಪವೇ ಅತಿ ವೇಗವಾಗಿ ಕಾರನ್ನು ಚಾಲನೆ ಮಾಡಿಕೊಂಡು ಹೋಗಿರುವುದು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.
ಈ ಹಿನ್ನೆಲೆಯಲ್ಲಿ ರಾಂಚಿ ಸಂಚಾರಿ ಠಾಣೆ ಪೊಲೀಸರು 183 ಸೆಕ್ಷನ್‌ನಡಿ ಚೆನ್ನೈ ಸೂಪರ್ ಕಿಂಗ್‌್ಸ ತಂಡದ ಆಟಗಾರನಿಗೆ ಡಿಜಿಟಲ್ ಚಲಾನ್ ಮೂಲಕ 1 ಸಾವಿರ ರೂ. ದಂಡ ವಿಧಿಸಿದೆ.
19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಧೋನಿ ಅವರು ಕಠಿಣ ತರಬೇತಿ ನಡೆಸುತ್ತಿದ್ದು, ಈ ಸಮಯದಲ್ಲೇ ಅವರು ವೇಗದ ಮಿತಿಯನ್ನು ಮೀರಿ ಕಾರನ್ನು ಚಲಾಯಿಸಿರುವುದು ಕಂಡುಬಂದಿದೆ.
