Homeಕ್ರೀಡಾ ಸುದ್ದಿಶತಕ ಸಿಡಿಸಿ ಸಚಿನ್‌ರ 3 ಮಹತ್ತರ ದಾಖಲೆ ಮುರಿದ ರೋಹಿತ್‌ ಶರ್ಮಾ

ಶತಕ ಸಿಡಿಸಿ ಸಚಿನ್‌ರ 3 ಮಹತ್ತರ ದಾಖಲೆ ಮುರಿದ ರೋಹಿತ್‌ ಶರ್ಮಾ

Rohit Sharma breaks Sachin Tendulkar's 3 biggest records by scoring a century

ಲಾರ್ಡ್ಸ್ , ಜು.20- ಇಂಗ್ಲೆಂಡ್‌ ವಿರುದ್ಧ ನಡೆದ ಅಂತಿಮ ಪಂದ್ಯದಲ್ಲಿ ಟೀಮ್‌ ಇಂಡಿಯಾ 27 ರನ್‌ಗಳಿಂದ ಸೋಲು ಕಂಡು ಸರಣಿಯನ್ನು 2-1 ರಿಂದ ಕಳೆದುಕೊಂಡರೂ, ಶತಕ ಸಿಡಿಸಿದ ಮಾಜಿ ನಾಯಕ ರೋಹಿತ್‌ ಶರ್ಮಾ ಶತಕ ಸಿಡಿಸಿ (138 ರನ್‌) ಕ್ರಿಕೆಟ್‌ ದೇವರು ಸಚಿನ್‌ ತೆಂಡೂಲ್ಕರ್‌ ಹೆಸರಿನಲ್ಲಿದ್ದ 3 ಮಹತ್ತರ ದಾಖಲೆ ಮುರಿದಿದ್ದಾರೆ.

ವಿದೇಶದ ಒಂದೇ ದೇಶದಲ್ಲಿ ಅತಿ ಹೆಚ್ಚು ಶತಕ (8, ಇಂಗ್ಲೆಂಡ್‌) ಭಾರತದ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದ ರೋಹಿತ್‌, ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ (7)ರನ್ನು ಹಿಂದಿಕ್ಕಿದರು. ಪಾಕಿಸ್ತಾನದ ಸಯೀದ್‌ ಅನ್ವರ್‌ (7, ಯುಎಇ), ದಕ್ಷಿಣ ಆಫ್ರಿಕಾದ ಎಬಿಡಿವಿಲಿಯರ್ಸ್‌ (7,ಭಾರತ) ಹಾಗೂ ಕ್ವಿಂಟನ್‌ ಡಿ ಕಾಕ್‌ (7, ಭಾರತ) ನಂತರದ ಸ್ಥಾನದಲ್ಲಿದ್ದಾರೆ.

ಆರಂಭಿಕ ಆಟಗಾರನಾಗಿ ಮೂರು ಮಾದರಿಗಳಲ್ಲೂ ಒಟ್ಟಾರೆ 46 ಶತಕ ಸಿಡಿಸಿದ ರೋಹಿತ್‌ ಶರ್ಮಾ ಇಲ್ಲೂ ತೆಂಡೂಲ್ಕರ್‌ (45)ರನ್ನು ಹಿಂದಿಕ್ಕಿದ್ದಾರೆ.ಸಚಿನ್‌ ತೆಂಡೂಲ್ಕರ್‌ ಅವರು ತಮ 38 ವರ್ಷ 327 ದಿನಗಳಲ್ಲಿ ಏಕದಿನ ಶತಕ ಸಿಡಿಸಿದ ಭಾರತದ ಹಿರಿಯ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದರು. ಇದೀಗ ರೋಹಿತ್‌ಶರ್ಮಾ (39 ವರ್ಷ 80 ದಿನ) ಹೆಗಲೇರಿದೆ.

27ರನ್‌ ಸೋಲು:
ಪಂದ್ಯದಲ್ಲಿ 388 ರನ್‌ಗಳ ಬೃಹತ್‌ ಮೊತ್ತ ಹಿಂಬಾಲಿಸಿದ ಟೀಮ್‌ ಇಂಡಿಯಾ ರೋಹಿತ್‌ ಶರ್ಮಾ (138 ರನ್‌, 17 ಬೌಂಡರಿ, 5 ಸಿಕ್ಸರ್‌), ಶುಭಮನ್‌ ಗಿಲ್‌ (77ರನ್‌) ಹಾಗೂ ವಿರಾಟ್‌ ಕೊಹ್ಲಿ (74ರನ್‌)ರ ಅರ್ಧಶತಕಗಳ ನೆರವಿದ್ದರೂ 50 ಓವರ್‌ಗಳಲ್ಲಿ 360/7 ರನ್‌ ಗಳಿಸಿ 27 ರನ್‌ ಗಳ ಸೋಲು ಕಂಡಿತು. ಇಂಗ್ಲೆಂಡ್‌ ಪರ ಬೆನ್‌ ಡೆಕಟ್‌ (141 ರನ್‌), ಜೇಕಬ್‌ ಬೆಥಲ್‌ (91ರನ್‌) ಗಳಿಸಿದರೆ, ಸ್ಯಾಮ್‌ ಕರನ್‌ (75ಕ್ಕೆ4) ಯಶಸ್ವಿ ಬೌಲರ್‌ ಆದರು.

RELATED ARTICLES

Latest News