Homeಕ್ರೀಡಾ ಸುದ್ದಿಗಾಲೆ ಟೆಸ್ಟ್‌ : ಭಾರತಕ್ಕೆ 165 ರನ್‌ಗಳ ಗೆಲುವು

ಗಾಲೆ ಟೆಸ್ಟ್‌ : ಭಾರತಕ್ಕೆ 165 ರನ್‌ಗಳ ಗೆಲುವು

Suthar ten-for seals big victory for India in Galle

ಗಾಲೆ,ಆ. 17- ಟೀಮ್‌ ಇಂಡಿಯಾದ ಯುವ ವೇಗಿ ಮಾನವ್‌ ಸೂತರ್‌ (55ಕ್ಕೆ 6) ಅವರ ಮಾರಕ ದಾಳಿಗೆ ನಲುಗಿದ ಶ್ರೀಲಂಕಾ ಮೊದಲ ಟೆಸ್ಟ್‌ ಪಂದ್ಯದಲ್ಲಿ 165 ರನ್‌ಗಳ ಸೋಲು ಕಂಡಿದೆ. ಈ ಗೆಲುವಿನೊಂದಿಗೆ ಶುಭಮನ್‌ ಗಿಲ್‌ ಸಾರಥ್ಯದ ಟೀಮ್‌ ಇಂಡಿಯಾ ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ ಫೈನಲ್‌ ಹಂತ ತಲುಪುವ ರೇಸ್‌‍ನಲ್ಲಿ ಜೀವಂತವಾಗಿ ಉಳಿದುಕೊಂಡಿದೆ.

4ನೇ ದಿನದಾಟದ ಅಂತ್ಯಕ್ಕೆ 84 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡು ಸೋಲಿನ ಹಾದಿಯಲ್ಲಿ ಸಾಗಿದ್ದ ಶ್ರೀಲಂಕಾಕ್ಕೆ ನಾಯಕ ಧನಂಜಯ ಡಿ ಸಿಲ್ವಾ (59ರನ್‌) ಹಾಗೂ ಮೊದಲ ಇನ್ನಿಂಗ್ಸ್ ನ ಶತಕ ವೀರ ಸೋನಲ್‌ ದಿನುಷಾ (84ರನ್‌) ಅವರು ಸ್ವಲ್ಪ ಚೇತರಿಕೆ ನೀಡಿದರಾದರೂ 77.4 ಓವರ್‌ಗಳಲ್ಲಿ 206ರನ್‌ಗಳಿಗೆ ಸರ್ವಪತನಗೊಂಡು 165 ರನ್‌ಗಳ ಅಂತರದಿಂದ ಸೋಲು ಕಂಡಿತು.

ಕನ್ನಡಿಗ ಪ್ರಸಿದ್ಧ್ ಕೃಷ್ಣ 2 ವಿಕೆಟ್‌, ಮೊಹಮದ್‌ ಸಿರಾಜ್‌ ಹಾಗೂ ರವೀಂದ್ರ ಜಡೇಜಾ ತಲಾ ವಿಕೆಟ್‌ ಪಡೆದರು. ಎರಡು ಇನ್ನಿಂಗ್ಸ್ ನಲ್ಲೂ ಒಟ್ಟಾರೆ 211 (167 ಹಾಗೂ 44) ರನ್‌ ಗಳಿಸಿದ ಕನ್ನಡಿಗ ದೇವದತ್‌ ಪಡಿಕ್ಕಲ್‌ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಪಾತ್ರರಾದರು.

ಸಂಕ್ಷಿಪ್ತ ಸ್ಕೋರ್‌:
ಭಾರತ ಮೊದಲ ಇನ್ನಿಂಗ್ಸ್ 462/10, ದ್ವಿತೀಯ ಇನ್ನಿಂಗ್ಸ್ 193/10.
ಶ್ರೀಲಂಕಾ ಮೊದಲ ಇನ್ನಿಂಗ್ಸ್ 284/10, ದ್ವಿತೀಯ ಇನ್ನಿಂಗ್ಸ್ 206/10

RELATED ARTICLES
spot_img

Latest News