ವ್ಯಾಂಕೂವರ್,ಜುಲೈ.3- ಅದ್ಬುತ ಆಟದ ಮೂಲಕ ಸ್ವಿಟ್ಜರ್ಲೆಂಡ್ ತಂಡ ಅಲ್ಜೀರಿಯಾವನ್ನು 2-0 ಗೋಲುಗಳಿಂದ ಸೋಲಿಸಿ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯ 16ರ ಸುತ್ತಿಗೆ ಪ್ರವೇಶಿಸಿದೆ,.ಮುಂದಿನ ಸುತ್ತಿನಲ್ಲಿ ಸ್ವಿಟ್ಜರ್ಲೆಂಡ್ ತಂಡ ಮುಂದಿನ ಶುಕ್ರವಾರ ನಡೆಯಲಿರುವ ಕೊಲಂಬಿಯಾ ಮತ್ತು ಘಾನಾ ನಡುವಿನ ಪಂದ್ಯದ ವಿಜೇತರನ್ನು ಎದುರಿಸಲಿದೆ. ಈ ಪಂದ್ಯವು ಮುಂದಿನ ಮಂಗಳವಾರ ಕೆನಡಾದ ವ್ಯಾಂಕೂವರ್‌ನಲ್ಲಿ ನಡೆಯಲಿದೆ.
1938ರಲ್ಲಿ ಫ್ರಾನ್‌್ಸನಲ್ಲಿ ನಡೆದ ವಿಶ್ವಕಪ್‌ನಲ್ಲಿ ನಾಕೌಟ್ ಹಂತದ ಪಂದ್ಯವನ್ನು ಗೆದ್ದ ಬಳಿಕ ಸ್ವಿಟ್ಜರ್ಲೆಂಡ್ ಮತ್ತೊಮೆ ಆ ಸಾಧನೆ ಮಾಡಲು ಸಾಧ್ಯವಾಗಿಲ್ಲ. ಆದರೆ 1954ರ ವಿಶ್ವಕಪ್‌ನಲ್ಲಿ ಪ್ಲೇಆಫ್ ಪಂದ್ಯದಲ್ಲಿ ಜಯ ಸಾಧಿಸಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿತ್ತು.
ಕಳೆದ ಮೂರು ವಿಶ್ವಕಪ್‌ಗಳಲ್ಲೂ ಸ್ವಿಟ್ಜರ್ಲೆಂಡ್ 16ರ ಸುತ್ತಿಗೆ ತಲುಪಿದ್ದರೂ, ಆಗ ಟೂರ್ನಿಯಲ್ಲಿ ಕೇವಲ 32 ತಂಡಗಳು ಮಾತ್ರ ಭಾಗವಹಿಸಿದ್ದವು. ಆದರೆ ಆ ಹಂತವನ್ನು ಮೀರಿ ಮುಂದುವರಿಯಲು ತಂಡಕ್ಕೆ ಸಾಧ್ಯವಾಗಿರಲಿಲ್ಲ.
2014ರ ಬಳಿಕ ಮೊದಲ ಬಾರಿಗೆ ವಿಶ್ವಕಪ್‌ಗೆ ಮರಳಿದ್ದ ಅಲ್ಜೀರಿಯಾ, ಈ ಸೋಲಿನೊಂದಿಗೆ ಟೂರ್ನಿಯಿಂದ ಹೊರಬಿದ್ದಿದೆ. 2014ರ ವಿಶ್ವಕಪ್‌ನಲ್ಲಿ ಅಲ್ಜೀರಿಯಾ ನಾಕೌಟ್ ಹಂತ ತಲುಪಿದ್ದರೂ, ಬಳಿಕ ಚಾಂಪಿಯನ್ ಆಗಿದ್ದ ಜರ್ಮನಿ ವಿರುದ್ಧ ಸೋತು ನಿರ್ಗಮಿಸಿತ್ತು.ಬ್ರೀಲ್ ಎಂಬೊಲೊ ಹಾಗೂ ಡ್ಯಾನ್ ಎನ್‌ಡೊಯೆ ಗಳಿಸಿದ ತಲಾ ಒಂದು ಗೋಲಿನ ನೆರವಿನಿಂದ ಸ್ವಿಟ್ಜರ್ಲೆಂಡ್ ದಿಟ್ಟ ಹೋರಾಟದ ಮೂಲಕ ಕ್ವಟರ್ ಪೈನಲ್‌ಗೆ ಟಂಟ್ರಿ ಕೊಟ್ಟಿದೆ. ಅಲ್ಜೀರಿಯ ತಂಡಕ್ಕೆ ಯಾವುದೇ ಅವಕಾಶ ನೀಡದೆ ಪಮದ್ಯದ ಬಹುತೇಕ ಸಮಯ ಚಂಡಿನ ಮೇಲೆ ಹಿಡಿತ ಸಾಧಿಸಿತ್ತು.
