Saturday, April 27, 2024
Homeರಾಜ್ಯರಾಜ್ಯಶಿಕ್ಷಣ ನೀತಿ ನಮ್ಮ ಆದ್ಯತೆ : ಸಚಿವ ಮಧು ಬಂಗಾರಪ್ಪ

ರಾಜ್ಯಶಿಕ್ಷಣ ನೀತಿ ನಮ್ಮ ಆದ್ಯತೆ : ಸಚಿವ ಮಧು ಬಂಗಾರಪ್ಪ

ಬೆಂಗಳೂರು, ಡಿ. 2- ರಾಜ್ಯಕ್ಕೆ ಪ್ರತ್ಯೇಕವಾದ ಶಿಕ್ಷಣ ನೀತಿ ರೂಪಿಸುವುದಾಗಿ ಪ್ರಣಾಳಿಕೆಯಲ್ಲಿ ಬರೆದು ಜನರಿಗೆ ಭರವಸೆ ನೀಡಿ ಮತ ಹಾಕಿಸಿಕೊಂಡು ಅಧಿಕಾರದಲ್ಲಿದ್ದೇವೆ. ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು. ಬಿಜೆಪಿಯವರು ಹೇಳಿದ್ದಾರೆ ಎಂಬ ಕಾರಣಕ್ಕೆ ಬದಲಾವಣೆ ಮಾಡಲಾಗುವುದಿಲ್ಲ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿರುಗೇಟು ನೀಡಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಶಿಕ್ಷಣ ನೀತಿಯ ಬಗ್ಗೆ ಬಿಜೆಪಿಯವರು ವಿಧಾನಮಂಡಲದಲ್ಲಿ ಪ್ರಸ್ತಾಪ ಮಾಡುವುದಾದರೆ ಅದನ್ನು ಸ್ವಾಗತಿಸುತ್ತೇವೆ. ನಾವು ಚುನಾವಣೆಯ ಸಂದರ್ಭದಲ್ಲಿ ಸ್ಪಷ್ಟ ಭರವಸೆಯನ್ನು ನೀಡಿದ್ದೇವೆ. ಜನ ಅದಕ್ಕಾಗಿಯೇ ನಮಗೆ ಮತ ಹಾಕಿದ್ದಾರೆ. ಅಧಿಕಾರಕ್ಕೆ ಬಂದ ಮೇಲೆ ಭರವಸೆಗಳನ್ನು ಈಡೇರಿಸುವುದು ನಮ್ಮ ಕರ್ತವ್ಯ ಎಂದು ಪುನರುಚ್ಚರಿಸಿದರು.

ಇತ್ತೀಚೆಗೆ ಬೆಂಗಳೂರು ಟೆಕ್ ಸಮ್ಮೇಳನದಲ್ಲಿ ಮಾತನಾಡಿದ ಇನೋಸಿಸ್‍ನ ನಾರಾಯಣಮೂರ್ತಿಯವರು, ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಭವಿಷ್ಯದ ಪ್ರಜೆಗಳನ್ನು ರೂಪಿಸುವಲ್ಲಿ ಉತ್ತಮವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಅದರ ಬೆನ್ನಲ್ಲೇ ಬಿಜೆಪಿ ಎನ್‍ಇಪಿ ಜಾರಿಯನ್ನು ರಾಜ್ಯದಲ್ಲಿ ಮುಂದುವರೆಸಬೇಕು ಎಂದು ಪಟ್ಟು ಹಿಡಿದಿದೆ. ಇದಕ್ಕೆ ತಿರುಗೇಟು ನೀಡಿದ ಮಧುಬಂಗಾರಪ್ಪ, ಭರವಸೆಗಳನ್ನು ಈಡೇರಿಸದೇ ಇದ್ದರೆ ರಾಜ್ಯದ ಜನರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಪಂಚಖಾತ್ರಿಗಳ ರೀತಿಯಲ್ಲೇ ರಾಜ್ಯ ಶಿಕ್ಷಣ ನೀತಿ ರೂಪಿಸುವುದು ನಮ್ಮ ಆದ್ಯತೆ ಎಂದರು.

ಬಾಹ್ಯಾಕಾಶದಲ್ಲಿ ಕಾರ್ಯಚರಣೆ ಆರಂಭಿಸಿದ ಆದಿತ್ಯ-ಎಲ್1

ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆಯನ್ನು ಭದ್ರತೆಯ ಲೋಪ ಎಂದು ಬಿಜೆಪಿ ಟೀಕೆ ಮಾಡುತ್ತಿರುವುದು ಅಸಮಂಜಸ. ತಮ್ಮ ಪಕ್ಷದ ಅಧ್ಯಕ್ಷರು ಹಾಗೂ ವಿಧಾನಸಭೆಯ ವಿಪಕ್ಷ ನಾಯಕನನ್ನು ಆಯ್ಕೆ ಮಾಡಲು ಆರು ತಿಂಗಳು ತೆಗೆದುಕೊಂಡವರಿಂದ ಇನ್ನೆಂಥಹ ಮಾತುಗಳನ್ನು ನಿರೀಕ್ಷಿಸಲು ಸಾಧ್ಯ ಎಂದು ಲೇವಡಿ ಮಾಡಿದರು.

ಬಿಜೆಪಿಯವರು ವಿಪಕ್ಷದಲ್ಲಿದ್ದಾರೆ. ಜವಾಬ್ದಾರಿಯುತವಾಗಿ ಮಾತನಾಡಬೇಕು. ರಾಜ್ಯಸರ್ಕಾರ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಬಿಟ್ಟು ಇಂತಹ ಘಟನೆಗಳನ್ನೇ ಮುಂದಿಟ್ಟುಕೊಂಡು ಜನರನ್ನು ಆತಂಕಕ್ಕೀಡು ಮಾಡುವಂತಹ ಹೇಳಿಕೆಗಳನ್ನು ನೀಡಬಾರದು ಎಂದರು.

ನಿನ್ನೆ ಇಡೀ ದಿನ ಶಿಕ್ಷಣ ಇಲಾಖೆ ಅಕಾರಿಗಳು ಮತ್ತು ಪೊಲೀಸರು ಜೊತೆಯಾಗಿ ಕೆಲಸ ಮಾಡಿದ್ದಾರೆ. ಯಾವನೋ ತಲೆಹರಟೆ ಮಾಡಿದ ಕೆಲಸದಿಂದ ಆತಂಕ ನಿರ್ಮಾಣವಾಗಿತ್ತು. ಪೋಷಕರು, ಶಾಲಾ ಆಡಳಿತ ಮಂಡಳಿ, ಮಕ್ಕಳು ಗೊಂದಲಕ್ಕೆ ಒಳಗಾಗಿದ್ದರು. ಇಂತಹುದನ್ನು ನಿಲ್ಲಿಸುವುದು ಹೇಗೆ ಎಂಬ ಪ್ರಶ್ನೆ ಎಲ್ಲರ ಮುಂದಿದೆ ಎಂದು ಹೇಳಿದರು.

ಶಾಲೆಗಳಿಗೆ ಬೆದರಿಕೆ ಕರೆ ಬಂದಿರುವುದರಲ್ಲಿ ಸರ್ಕಾರ ವೈಫಲ್ಯವಿಲ್ಲ. ದೇಶದಲ್ಲಿ ನಾನಾ ರೀತಿಯ ಘಟನೆಗಳಾಗುತ್ತವೆ. ಅದಕ್ಕೆಲ್ಲಾ ಬಿಜೆಪಿಯವರೇ ಹೊಣೆ ಎಂದು ಹೇಳಲು ಸಾಧ್ಯವೇ? ಬೆದರಿಕೆಯ ಮಾಹಿತಿ ದೊರೆತ ತಕ್ಷಣವೇ ಪೊಲೀಸರು ತಕ್ಷಣ ಕ್ರಮ ಕೈಗೊಂಡಿದ್ದಾರೆ. ತಪಾಸಣೆಗಳಾಗಿವೆ. ಭಾರತದಲ್ಲಷ್ಟೇ ಅಲ್ಲ, ದೇಶ-ವಿದೇಶದಲ್ಲೂ ಈ ರೀತಿಯ ಘಟನೆಗಳಾಗಿವೆ. ಹಾಗೆಂದು ನಿರ್ಲಕ್ಷಿಸಲು ಸಾಧ್ಯವಿಲ್ಲ. ಮಕ್ಕಳ ವಿಷಯ ಬಂದಾಗ ಕಾಳಜಿ ವಹಿಸಬೇಕಾಗುತ್ತದೆ. ಗೃಹಸಚಿವರು ಮತ್ತು ಪೆÇಲೀಸರ ಜೊತೆ ತಾವು ನಿರಂತರವಾಗಿ ಸಂಪರ್ಕದಲ್ಲಿದ್ದು, ಸಹಕಾರ ನೀಡಲಾಗಿದೆ. ಪೊಲೀಸರು ತಮ್ಮ ಜವಾಬ್ದಾರಿಯನ್ನು ಉತ್ತಮವಾಗಿ ನಿಭಾಯಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬಲವಂತದ ಮತಾಂತರ : 42 ಜನರ ವಿರುದ್ಧ ಎಫ್‍ಐಆರ್, 9 ಮಂದಿ ಬಂಧನ

ಮಕ್ಕಳಿಗೆ ಬೆದರಿಕೆ ಹಾಕುವುದು ಅಸತ್ಯ ಮತ್ತು ಕ್ಷುದ್ರ ಕೃತ್ಯ. ಇದಕ್ಕೆ ಸಂಬಂಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಶತಸಿದ್ಧ ಎಂದು ಸ್ಪಷ್ಟಪಡಿಸಿದರು. ನಿಗಮ ಮಂಡಳಿ ನೇಮಕಾತಿಯ ಬಗ್ಗೆ ಪಕ್ಷದ ಅಧ್ಯಕ್ಷರು, ಮುಖ್ಯಮಂತ್ರಿಗಳು ಮತ್ತು ಹೈಕಮಾಂಡ್ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ. ಶಿವಮೊಗ್ಗ ಜಿಲ್ಲೆಗೆ ಅವಕಾಶ ಸಿಗಬೇಕೆಂಬುದು ನಮ್ಮ ಅಭಿಲಾಷೆ. ಆದರೆ ಸ್ಥಳಾವಕಾಶ ಎಷ್ಟಿದೆ ಎಂಬುದು ಕೂಡ ಗಮನಾರ್ಹ ಎಂದರು.

RELATED ARTICLES

Latest News