Thursday, April 16, 2026
Homeರಾಜ್ಯಹಿರಿಯೂರು ಬಸ್ ಬೆಂಕಿ ದುರಂತದಲ್ಲಿ ಮೃತರ ಸಂಖ್ಯೆ 6ಕ್ಕೆ ಏರಿಕೆ

ಹಿರಿಯೂರು ಬಸ್ ಬೆಂಕಿ ದುರಂತದಲ್ಲಿ ಮೃತರ ಸಂಖ್ಯೆ 6ಕ್ಕೆ ಏರಿಕೆ

10 Killed As Bus Catches Fire After Collision With Truck In Karnataka

ಚಿತ್ರದುರ್ಗ,ಡಿ.25- ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಜನವಗೊಂಡನಹಳ್ಳಿ ಬಳಿ ಇಂದು ಮುಂಜಾನೆ ಟ್ರಕ್‌ ಮತ್ತು ಖಾಸಗಿ ಬಸ್‌‍ ನಡುವೆ ಭೀಕರ ಅಪಘಾತ ಸಂಭವಿಸಿ, ಬೆಂಕಿ ಹತ್ತಿಕೊಂಡು ಉರಿದ ಪರಿಣಾಮ ಬಸ್‌‍ನಲ್ಲಿದ್ದ ತಾಯಿ ಮಗು ಸೇರಿದಂತೆ 5 ಮಂದಿ ಹಾಗೂ ಟ್ರಕ್‌ನ ಚಾಲಕ ಮೃತಪಟ್ಟಿದಾನೆ. ಮೃತಪಟ್ಟವರ ಸಂಖ್ಯೆ 6ಕ್ಕೆ ಏರಿದೆ.

ಬಸ್‌‍ನಲ್ಲಿದ್ದ 4 ಮಹಿಳೆಯರು ಸೇರಿ 5 ವರ್ಷದ ಮಗು ಸಾವನಪ್ಪಿದ್ದು, ಇವರುಗಳ ಮರಣೋತ್ತರ ಪರೀಕ್ಷೆ ನಡೆಸಿ ಸದಸ್ಯದಲ್ಲೇ ಅವರ ವಾರಸುದಾರರಿಗೆ ಶವಗಳನ್ನು ಪೊಲೀಸರು ನೀಡಲಿದ್ದಾರೆ. ಬಿಂದು, ಗ್ರೇಯ (ಬಿಂದು ಅವರ 5 ವರ್ಷದ ಮಗಳು), ಮಾನಸ, ನವ್ಯ, ರಶಿ ಮಹಲೆ ಎಂಬುವವರು ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ.

ಆಂಧ್ರಪ್ರದೇಶದ ಕರ್ನೂಲ್‌ ಬಳಿ ಸಂಭವಿಸಿದ ಬೆಂಕಿ ಅವಘಡ ಮಾಸುವ ಮುನ್ನವೇ ಇಂದು ಬೆಳಗಿನ ಜಾವ ರಾಷ್ಟ್ರೀಯ ಹೆದ್ದಾರಿ -48 ರಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಖಾಸಗಿ ಬಸ್‌‍ ಬೆಂಕಿಯಿಂದ ಹೊತ್ತಿ ಉರಿದಿದ್ದು, ಐದು ಮಂದಿ ಸಜೀವ ದಹನವಾಗಿರುವ ದಾರುಣ ಘಟನೆ ನಡೆದಿದೆ.

ಅಪಘಾತವೆಸಗಿದ ಕಂಟೈನರ್‌ ಲಾರಿ ಚಾಲಕ ಕುಲದೀಪ್‌ ಹಾಗೂ ಬಸ್‌‍ನಲ್ಲಿದ್ದ ನಾಲ್ಕು ಮಂದಿ ಪ್ರಯಾಣಿಕರು ಮೃತಪಟ್ಟಿದ್ದು ಸದ್ಯಕ್ಕೆ ಅವರ ಹೆಸರು, ವಿಳಾಸ ತಿಳಿದು ಬಂದಿಲ್ಲ. ಇಂದು ಬೆಳಗಿನ ಜಾವ 2 ಗಂಟೆ ಸುಮಾರಿನಲ್ಲಿ ಹರಿಯಾಣ ಮೂಲದ ಕಂಟೇನರ್‌ ಲಾರಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವಗೊಂಡನಹಳ್ಳಿ ಬಳಿ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ನಂತರ ಪಕ್ಕದ ರಸ್ತೆಗೆ ಹಾರಿ ಬೆಂಗಳೂರಿನಿಂದ ಗೋಕರ್ಣಕ್ಕೆ ಹೋಗುತ್ತಿದ್ದ ಸೀಬರ್ಡ್‌ ಖಾಸಗಿ ಬಸ್‌‍ಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿ ಹೊಡೆದ ರಭಸಕ್ಕೆ ನೋಡ ನೋಡುತ್ತಿದ್ದಂತೆ ಖಾಸಗಿ ಬಸ್‌‍ ಹೊತ್ತಿ ಉರಿದಿದ್ದು ಹೊರಗೆ ಬರಲಾಗದೆ ನಾಲ್ವರು ಪ್ರಯಾಣಿಕರು ಸುಟ್ಟು ಕರಕಲಾಗಿದ್ದಾರೆ. ಈ ಬೆಂಕಿ ಅವಘಡದಲ್ಲಿ ಗಾಯಗೊಂಡಿರುವ ಬಸ್‌‍ ಪ್ರಯಾಣಿಕರನ್ನು ಶಿರಾ, ಹಿರಿಯೂರು, ಬೆಂಗಳೂರು ಹಾಗೂ ಚಿತ್ರದುರ್ಗ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ .

ಬೆಂಗಳೂರಿನ ಆನಂದರಾವ್‌ ಸರ್ಕಲ್‌ನಿಂದ ರಾತ್ರಿ 8.45ಕ್ಕೆ ಗೋಕರ್ಣಕ್ಕೆ ಹೊರಟಿದ್ದ ಸೀಬರ್ಡ್‌ ಟ್ರಾವಲ್‌್ಸಗೆ ಸೇರಿದ ಸ್ಲೀಪರ್‌ ಕೋಚ್‌ ಖಾಸಗಿ ಬಸ್‌‍ನಲ್ಲಿ ಚಾಲಕ, ನಿರ್ವಾಹಕ ಸೇರಿ ಒಟ್ಟು 32 ಮಂದಿ ಪ್ರಯಾಣಿಸುತ್ತಿದ್ದರು. ಈ ಪೈಕಿ 15 ಮಂದಿ ಮಹಿಳೆಯರು ಹಾಗೂ 14 ಮಂದಿ ಪುರುಷರು ಪ್ರಯಾಣಿಕರಿದ್ದರು. ಗೋಕರ್ಣಕ್ಕೆ 25 ಮಂದಿ ಹಾಗೂ ಕುಮುಟಾದ ಇಬ್ಬರು ಹಾಗೂ ಶಿವಮೊಗ್ಗದ ಇಬ್ಬರು ಪ್ರಯಾಣಿಸುತ್ತಿದ್ದರು.

ಬಸ್‌‍ನಲ್ಲಿ ಮಂಜುನಾಥ್‌, ಸಂಧ್ಯಾ, ಶಶಾಂಕ್‌, ದಿಲೀಪ್‌, ಪ್ರೀತೀಶ್ವರನ್‌, ಬಿಂದು, ಕವಿತಾ, ಅನಿರುದ್‌್ಧ ಬೆನರ್ಜಿ, ಅಮೃತಾ, ಇಶಾ, ಸೂರಜ್‌, ಮಾನಸಾ, ಮಿಲನಾ, ಹೇಮರಾಜ್‌ಕುಮಾರ್‌, ಕಲ್ಪನಾ ಪ್ರಜಾಪತಿ, ಶಶಿಕಾಂತ್‌, ವಿಜಯ್‌ಭಂಡಾರಿ, ನವ್ಯಾ, ಅಭಿಷೇಕ್‌, ಕಿರಣ್‌ ಪಾಲ್‌, ಕೀರ್ತನಾ ಎಂಬುವವರು ಪ್ರಯಾಣಿಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.ಕೆಲವು ಪ್ರಯಾಣಿಕರು ಕ್ರಿಸ್‌‍ಮಸ್‌‍ ರಜೆಯ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಗೋಕರ್ಣಕ್ಕೆ ದೇವರ ದರ್ಶನಕ್ಕೆ ಹೊರಟಿದ್ದರೆ ಇನ್ನೂ ಕೆಲವು ಪ್ರಯಾಣಿಕರು ಮಾರ್ಗಮಧ್ಯೆ ತಮ ತಮ ಊರುಗಳಿಗೆ ಹೋಗಲು ಈ ಬಸ್‌‍ನಲ್ಲಿ ಪ್ರಯಾಣಿಸುತ್ತಿದ್ದರು.

ಇಂದು ಬೆಳಗಿನ ಜಾವ 2 ಗಂಟೆ ಸುಮಾರಿನಲ್ಲಿ ರಾಷ್ಟ್ರೀಯ ಹೆದ್ದಾರಿ 48ರ ಹಿರಿಯೂರು ತಾಲ್ಲೂಕಿನ ಗೊರ್ಲತ್ತು ಕ್ರಾಸ್‌‍ ಬಳಿ ಈ ಬಸ್‌‍ ಹೋಗುತ್ತಿದ್ದಾಗ ಹರಿಯಾಣ ಮೂಲದ ಕಂಟೈನರ್‌ ಲಾರಿ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಅಪ್ಪಳಿಸಿ ಪಕ್ಕದ ರಸ್ತೆಗೆ ಹಾರಿ ಬಸ್‌‍ಗೆ ಅಪ್ಪಳಿಸಿದ್ದರಿಂದ ಕ್ಷಣಾರ್ಧದಲ್ಲಿ ಬಸ್‌‍ ಪೂರ್ತಿ ಬೆಂಕಿ ಆವರಿಸಿಕೊಂಡು ಹೊತ್ತಿ ಉರಿದಿದೆ.ಈ ಮಾರ್ಗದಲ್ಲಿ ಹೋಗುತ್ತಿದ್ದವರು ತಕ್ಷಣ ಸಹಾಯಕ್ಕೆ ಆಗಮಿಸಿ ಅಗ್ನಿಶಾಮಕ ದಳ ಹಾಗೂ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಬಸ್‌‍ಗೆ ಬೆಂಕಿ ಹೊತ್ತಿಕೊಂಡಿರುವುದು ಗಮನಿಸಿದ ಬಸ್‌‍ ಚಾಲಕ, ನಿರ್ವಾಹಕ ಸೇರಿದಂತೆ ಪ್ರಯಾಣಿಕರು ಸಹಾಯಕ್ಕಾಗಿ ಕಿರುಚಾಡುತ್ತಾ ತಮ ಪ್ರಾಣವನ್ನು ಉಳಿಸಿಕೊಳ್ಳಲು ಹೊರಗೆ ಹಾರಿದರೆ, ಇನ್ನೂ ಕೆಲವು ಪ್ರಯಾಣಿಕರಿಗೆ ಸುಟ್ಟ ಗಾಯಗಳಾದರೆ, ನಾಲ್ವರು ಹೊರಗೆ ಬರಲಾಗದೇ ಸುಟ್ಟು ಕರಕಲಾಗಿದ್ದಾರೆ.

ಸ್ಥಳೀಯರು ತಕ್ಷಣ 108ಗೆ ಕರೆ ಮಾಡಿ ಗಾಯಾಳುಗಳನ್ನು ಆಂಬ್ಯುಲೆನ್‌್ಸನಲ್ಲಿ ವಿವಿಧ ಆಸ್ಪತ್ರೆಗಳಿಗೆ ಕರೆದೊಯ್ದು ಚಿಕಿತ್ಸೆಗೆ ದಾಖಲಿಸುವಲ್ಲಿ ನೆರವಾಗಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.ಸುದ್ದಿ ತಿಳಿದು ಪೂರ್ವವಲಯದ ಐಜಿಪಿ ರವಿಕಾಂತೇಗೌಡ, ಎಸ್‌‍ಪಿ ರಂಜಿತ್‌ ಕುಮಾರ್‌ ಬಂಡಾರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಿರಿಯೂರು ಗ್ರಾಮಂತರ ಪೊಲೀಸ್‌‍ ಠಾಣೆಯಲ್ಲಿ ದೂರು ದಾಖಲಾಗಿದೆ.

ಲಾರಿ ಚಾಲಕನ ಅತೀ ವೇಗ ಹಾಗೂ ನಿರ್ಲಕ್ಷ್ಯ ಚಾಲನೆಯೇ ಅಪಘಾತಕ್ಕೆ ಕಾರಣವೆಂಬುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.ಟ್ರಾಫಿಕ್‌ ಜಾಮ್‌: ಅಪಘಾತದಿಂದಾಗಿ ನಡು ರಸ್ತೆಯಲ್ಲೇ ಬಸ್‌‍ ಹೊತ್ತಿ ಉರಿಯುತ್ತಿದ್ದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು 30 ಕಿಮೀ ಅಂದರೆ ಶಿರಾವರೆಗೂ ಟ್ರಾಫಿಕ್‌ ಜಾಮ್‌ ಆಗಿ ವಾಹನಗಳು ನಿಂತಲ್ಲೇ ನಿಂತಿರುವುದು ಕಂಡು ಬಂತು.ಕೆಲ ಸಮಯದ ಬಳಿಕ ಬಸ್‌‍ನ್ನು ರಸ್ತೆ ಬದಿಗೆ ತಂದು ನಂತರ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಇತ್ತೀಚೆಗೆ ಆಂಧ್ರಪ್ರದೇಶದ ಕರ್ನೂಲ್‌ ಸಮೀಪ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್‌‍ ಬೈಕ್‌ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಸಂಭವಿಸಿದ ಅಪಘಾತದಲ್ಲಿ ಏಕಾಏಕಿ ಬಸ್‌‍ಗೆ ಬೆಂಕಿ ಹೊತ್ತಿಕೊಂಡಿದ್ದರಿಂದ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ 20 ಪ್ರಯಾಣಿಕರು ದಾರುಣವಾಗಿ ಜೀವ ಕಳೆದುಕೊಂಡಿದ್ದರು. ಇದೀಗ ಮತ್ತೊಂದು ಘಟನೆ ಸಂಭವಿಸಿರುವುದು ವಿಷಾದಕರ.

ಚಿಕಿತ್ಸೆ ಪಡೆಯುತ್ತಿರುವವರ ವಿವರ:
ಖಾಸಗಿ ಬಸ್‌‍ ಅಪಘಾತದಲ್ಲಿ ಗಾಯಗೊಂಡು ಹಿರಿಯೂರು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಯಾಣಿಕರಾದ ವಿಜಯ್‌ ಬಂಢಾರಿ, ಆದಿತ್ಯ.ಎನ್‌, ಪ್ರತೀಶ್ವರನ್‌, ಮೇಘರಾಜ್‌, ಅಭಿಶೇಕ್‌, ಸೂರಜ್‌, ಶಶಾಂಕ್‌, ಮಹಿಳಾ ಪ್ರಯಾಣಿಕರಾದ ಮಿಲನಾ, ಕವಿತಾ, ಸಂದ್ಯ ಹಾಗೂ ಮಹಮದ್‌ ರಫಿ (ಚಾಲಕ) , ಮಹಮದ್‌ ಸಾಧಿಕ್‌ ( ನಿರ್ವಾಹಕ), ಚಿಕಿತ್ಸೆ ಪಡೆಯುತ್ತಿದ್ದಾರೆ. ಶಿರಾ ಸರ್ಕಾರಿ ಆಸ್ಪತ್ರೆಯಲ್ಲಿ ಕೀರ್ತನ್‌.ಎಂ, ಕಿರಣ್‌ ಪಾಲ್‌, ದಿಲೀಪ್‌, ಮಂಜುನಾಥ್‌, ಅನಿರುದ್ಧ್ , ಮಹಿಳಾ ಪ್ರಯಾಣಿಕರಾದ ಅಮೃತ, ಈಶ, ದೇವಿಕಾ, ನಂದಿತಾ ಚಿಕಿತ್ಸೆಗೆ ದಾಖಲಾಗಿದ್ದಾರೆ.

ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಯಲ್ಲಿ ಗಗನಶ್ರೀ ಮತ್ತು ರಕ್ಷಿತಾ ದಾಖಲಾಗಿದ್ದರೆ, ತುಮಕೂರು ಸರ್ಕಾರಿ ಆಸ್ಪತ್ರೆಯಲ್ಲಿ ಹೇಮರಾಜ್‌ ಕುಮಾರ್‌ ಮತ್ತು ಕಲ್ಪನಾ ಪ್ರಜಾಪತಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳು ಹೊರತುಪಡಿಸಿ, ಬಿಂದು ವಿ, ಮಾನಸಾ, ಶಶಿಕಾಂತ್‌, ನವ್ಯಾ, ಮಸ್ರತುನ್ನಿಸಾ, ಸೈಯದ್‌ ಜಮೀರ್‌ ಹಾಗೂ ರಶಿ ಮಹಲೆ ಎಂಬುವವರು ಸಂಪರ್ಕಕ್ಕೆ ಸಿಕ್ಕಿಲ್ಲ.
ಹೆಚ್ಚಿನ ಮಾಹಿತಿಗಾಗಿ ಚಿತ್ರದುರ್ಗ ಕಂಟ್ರೋಲ್‌ ರೂಂ 9480803100, ಹಿರಿಯೂರು ಪೊಲೀಸ್‌‍ ಉಪಾಧೀಕ್ಷಕರು-9480803122 ಹಾಗೂ ಗ್ರಾಮಾಂತರ ಪೊಲೀಸ್‌‍ ಠಾಣೆ ನಿರೀಕ್ಷಕರು 9480803115 ಸಂಪರ್ಕಿಸಲು ಕೋರಲಾಗಿದೆ.

ಬಸ್ ಚಾಲಕ ಹೇಳಿದ್ದೇನು..?

ಚಿತ್ರದುರ್ಗ, ಡಿ.25-ಅತಿ ವೇಗದ ಟ್ರಕ್‌ ಬರುತ್ತಿರುವುದನ್ನು ನೋಡಿದೆ, ತನ್ನ ವಾಹನವನ್ನು ನಿಯಂತ್ರಿಸಲು ಪ್ರಯತ್ನಿಸಿದೆ, ಆದರೆ ಸಾಧ್ಯವಾಗಲಿಲ್ಲ ಎಂದು ಬದುಕುಳಿದಿರುವ ಬಸ್‌‍ ಚಾಲಕ ತಿಳಿಸಿದ್ದಾನೆ.ಬೆಳಗಿನ ಜಾವ 2 ಗಂಟೆ ಸಂದರ್ಭದಲ್ಲಿ ಟ್ರಕ್‌ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಇನ್ನೊಂದು ಬದಿಯಲ್ಲಿ ಬರುತ್ತಿದ್ದ ಬಸ್‌‍ಗೆ ಡಿಕ್ಕಿ ಹೊಡೆದಿದೆ.

ಟ್ರಕ್‌ ಅತಿ ವೇಗದಲ್ಲಿ ಚಲಿಸುತ್ತಿತ್ತು. ಆ ಸಮಯದಲ್ಲಿ ನಾನು 60-70 ಕಿಮೀ ವೇಗವನ್ನು ಕಾಯ್ದುಕೊಂಡಿದ್ದೆ. ವಾಹನವು ಮುಂಭಾಗದಿಂದ ಬರುತ್ತಿರುವುದನ್ನು ನಾನು ನೋಡಿದೆ ಎಂದಿದ್ದಾರೆ. ನಾನು ಅಪಾಯ ಅರಿತು ಬಸ್‌‍ ನಿಯಂತ್ರಿಸಲು ಪ್ರಯತ್ನಿಸಿದೆ ಆದರೆ ಟ್ರಕ್‌ಡಿಕ್ಕಿ ಹೊಡೆಯಿತು,ನಂತರ ಏನಾಯಿತು ಮತ್ತು ನನ್ನನ್ನು ಹೇಗೆ ಹೊರಗೆ ತರಲಾಯಿತು ಎಂದು ನನಗೆ ತಿಳಿದಿಲ್ಲ ಎಂದು ಚಿಕಿತ್ಸೆ ಪಡೆಯುತ್ತಿರುವ ಬಸ್‌‍ ಚಾಲಕ ರಫೀಕ್‌ ಸುದ್ದಿಗಾರರಿಗೆ ತಿಳಿಸಿದರು.
ನನ್ನ ಬಸ್‌‍ ಪಕ್ಕದಲ್ಲಿ ಚಲಿಸುತ್ತಿದ್ದ ಇನ್ನೊಂದು ವಾಹನಕ್ಕೂ ತಾಗಿದೆ ಅದು ಯಾವ ವಾಹನ ಎಂದು ನನಗೆ ತಿಳಿದಿಲ್ಲ. ಆದರೆ,ಸಾಧ್ಯವಾಗಲಿಲ್ಲ ಎಂದು ವಿವರಿಸಿದ್ದಾನೆ.

ಸಣ್ಣಪುಟ್ಟ ಗಾಯಗಳೊಂದಿಗೆ ಚಿಕಿತ್ಸೆ ಪಡೆಯುತ್ತಿರುವ ಬಸ್‌‍ನ ಕ್ಲೀನರ್‌ ಮೊಹಮ್ಮದ್‌ ಸಾದಿಕ್‌‍, ಡಿಕ್ಕಿಯ ರಭಸಕ್ಕೆ ಬಸ್‌‍ನಿಂದ ಹೊರಗೆ ಬಿದ್ದೆ ಎಂದು ಹೇಳಿದರು.ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಟ್ರಕ್‌ ನೇರವಾಗಿ ಡೀಸೆಲ್‌ ಟ್ಯಾಂಕ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತ ಸಂಭವಿಸಿದಾಗ ನಾನು ಬಸ್‌‍ನ ಮುಂಭಾಗದಲ್ಲಿದ್ದೆ ಮತ್ತು ನಿದ್ರಿಸುತ್ತಿದ್ದೆ. ಅಪಘಾತದಿಮದ , ನಾನು ಹೊರಗೆ ಬಿದ್ದೆ ಬಸ್‌‍ನ ಗಾಜು ಒಡೆದಿದ್ದೇನೆ ಎಂದು ಅವರು ಹೇಳಿದರು.

ಮೂವರು ನಾಪತ್ತೆ :
ಬೆಂಗಳೂರು,ಡಿ.25-ಅಪಘಾತಕ್ಕೀಡಾದ ಬಸ್‌‍ನಲ್ಲಿ 32 ಮಂದಿ ಪ್ರಯಾಣಿಸುತ್ತಿದ್ದರು. ಅವರಲ್ಲಿ ನಾಲ್ವರ ಮೃತದೇಹ ಪತ್ತೆಯಾಗಿದೆ. ಉಳಿದ ಮೂವರು ನಾಪತ್ತೆಯಾಗಿದ್ದಾರೆ ಎಂದು ಚಿತ್ರದುರ್ಗ ಎಸ್‌‍ಪಿ ರಂಜಿತ್‌ಕುಮಾರ್‌ ತಿಳಿಸಿದ್ದಾರೆ. ಘಟನಾ ಸ್ಥಳದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, 25 ಮಂದಿ ಪ್ರಯಾಣಿಕರು ಬಸ್‌‍ನಿಂದ ಜಿಗಿದು ಪ್ರಾಣ ರಕ್ಷಿಸಿಕೊಂಡಿದ್ದಾರೆ. ನಾಪತ್ತೆಯಾಗಿರುವ ಮೂವರು ಸಂಪರ್ಕಕ್ಕೆ ಸಿಕ್ಕಿಲ್ಲ. ಅವರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಹೇಳಿದರು.ಬೆಂಕಿಯಿಂದ ಸುಟ್ಟು ಕರಕಲಾಗಿರುವ ನಾಲ್ವರ ಗುರುತು ಪತ್ತೆಗಾಗಿ ಮೃತರ ಸಂಬಂಧಿಕರು ಬಂದಿದ್ದಾರೆ. ಡಿಎನ್‌ಎ ಪರೀಕ್ಷೆ ನಂತರ ಮೃತದೇಹಗಳನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗುತ್ತದೆ ಎಂದರು.

ಏಳು ಪ್ರಯಾಣಿಕರನ್ನು ರಕ್ಷಿಸಿದೆ :

ಬೆಂಗಳೂರು,ಡಿ.25-ಅಪಘಾತ ಸಂಭವಿಸಿದಾಗ ಅದೇ ಬಸ್‌‍ ಪಕ್ಕದಲ್ಲೇ ಶಾಲಾ ಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ಯುತ್ತಿದ್ದ ಬಸ್‌‍ನ ಚಾಲಕ ಕಣ್ಣಾರೆ ಕಂಡ ಘಟನೆಯನ್ನು ವಿವರಿಸಿದ್ದಾರೆ. ಶಾಲಾ ಪ್ರವಾಸಿ ಬಸ್‌‍ ಚಾಲಕ ಸಚಿನ್‌ ಅಪಘಾತದ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿ, ಬೆಳಗಿನ ಜಾವ 2 ಗಂಟೆ ಸುಮಾರಿಗೆ ಲಾರಿಯೊಂದು ಡಿವೈಡರ್‌ ಹಾರಿ ಪಕ್ಕದ ರಸ್ತೆಗೆ ನುಗ್ಗಿ ಬಸ್‌‍ಗೆ ಡಿಕ್ಕಿ ಹೊಡೆದಿದ್ದರಿಂದ ಬೆಂಕಿ ಕಾಣಿಸಿಕೊಂಡು ಸ್ಫೋಟವು ಸಂಭವಿಸಿತು.ತಕ್ಷಣ ನಾನು ಶಾಲಾ ಬಸ್‌‍ ಅನ್ನು ಸ್ವಲ್ಪ ದೂರ ನಿಲ್ಲಿಸಿ, ಪ್ರಯಾಣಿಕರ ರಕ್ಷಣೆಗೆ ಬಂದು ಏಳು ಜನರನ್ನು ರಕ್ಷಿಸಿದೆ ಎಂದು ತಿಳಿಸಿದ್ದಾರೆ. ಗಾಯಗೊಂಡವರನ್ನು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆ ಮತ್ತು ಶಿರಾ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಿಸಲಾಯಿತು ಎಂದು ಅವರು ವಿವರಿಸಿದರು.

ಅಪಘಾತದ ಸೂಕ್ತ ತನಿಖೆಗೆ ಸಿಎಂ ಸೂಚನೆ :

ಚಿತ್ರದುರ್ಗದಲ್ಲಿ ಸಂಭವಿಸಿದ ಲಾರಿ ಮತ್ತು ಬಸ್‌‍ ನಡುವಿನ ಅಪಘಾತದಲ್ಲಿ ಹಲವು ಪ್ರಯಾಣಿಕರು ಸಜೀವ ದಹನವಾದ ಘೋರ ದುರಂತದ ಸುದ್ದಿ ಕೇಳಿ ಎದೆ ನಡುಗಿತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಘಾತ ವ್ಯಕ್ತಪಡಿಸಿದ್ದಾರೆ. ಕ್ರಿಸ್ಮಸ್ ರಜೆಯಲ್ಲಿ ಊರಿಗೆ ತೆರಳುತ್ತಿದ್ದವರ ಪ್ರಯಾಣ ಈ ರೀತಿ ದುರಂತದಲ್ಲಿ ಕೊನೆಗೊಂಡಿರುವುದು ಅತ್ಯಂತ ವಿಷಾದನೀಯ ಎಂದು ಅವರು ತಮ ಎಕ್‌್ಸ ಖಾತೆಯಲ್ಲಿ ತಿಳಿಸಿದ್ದಾರೆ.ಅಪಘಾತದ ಬಗ್ಗೆ ಸೂಕ್ತ ತನಿಖೆ ನಡೆಸಿ ಕಾರಣವನ್ನು ಪತ್ತೆ ಹಚ್ಚಲಾಗುವುದು. ಮೃತರ ಆತಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿರುವ ಅವರು, ಅಪಘಾತದಲ್ಲಿ ಮಡಿದ ಕುಟುಂಬಸ್ಥರ ದುಃಖದಲ್ಲಿ ನಾನು ಕೂಡಾ ಭಾಗಿ ಎಂದು ಹೇಳಿದ್ದಾರೆ.

ಡಿಸಿಎಂ ಸಂತಾಪ :

ಬಸ್‌‍ ಮತ್ತು ಲಾರಿ ನಡುವೆ ಹಿರಿಯೂರು ಬಳಿ ಅಪಘಾತ ಸಂಭವಿಸಿ ಹಲವರು ಸಜೀವ ದಹನಗೊಂಡಿರುವ ಸುದ್ದಿ ಕೇಳಿ ತೀವ್ರ ಆಘಾತವಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ವಿಷಾದ ವ್ಯಕ್ತಪಡಿಸಿದ್ದಾರೆ.ಮೃತರಿಗೆ ಸಂತಾಪ ವ್ಯಕ್ತಪಡಿಸಿರುವ ಅವರು, ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.ಇಂತಹ ದುರಂತಗಳು ಮರುಕಳಿಸದಿರಲಿ ಎಂದು ಅವರು ತಮ ಎಕ್ಸ್ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ.

ಮೃತರ ಕುಟುಂಬಕ್ಕೆ ಪ್ರಧಾನಿ ಸಂತಾಪ : 2 ಲಕ್ಷ ರೂ. ಪರಿಹಾರ ಘೋಷಣೆ

ಕರ್ನಾಟಕದ ಚಿತ್ರದುರ್ಗ ಜಿಲ್ಲೆಯಲ್ಲಿ ಸಂಭವಿಸಿದ ಬಸ್‌‍ಗೆ ಬೆಂಕಿ ಹೊತ್ತಿಕೊಂಡು ಸಂಭವಿಸಿದ ಭೀಕರ ದುರಂತದಲ್ಲಿ ಮೃತಪಟ್ಟವರಿಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿ,ಘಟನೆಯ ಬಗ್ಗೆ ದಿಘ್ರಮೆ ವ್ಯಕ್ತಪಡಿಸಿದ್ದಾರೆ.ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತರಿಗೆ 2 ಲಕ್ಷ ರೂ. ಮತ್ತು ಗಾಯಾಳುಗಳಿಗೆ 50,000 ರೂ. ಪರಿಹಾರ ಘೋಷಿಸಿದ್ದಾರೆ.

ಅಪಘಾತದಿಂದ ಸಂಭವಿಸಿದ ಜೀವಹಾನಿಯಿಂದ ತೀವ್ರ ದುಃಖಿತನಾಗಿದ್ದೇನೆ. ತಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತ್ವಾನ ಹೇಳಿ ಅಗಲಿದ ಜೀವಗಳಿಗೆ ಸಂತಾಪ ಸೂಚಿಸುತ್ತೇನೆ. ಗಾಯಾಳುಗಳು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದಿದ್ದಾರೆ.

ಬಸ್ಸಿನ ಡೀಸೆಲ್ ಟ್ಯಾಂಕ್‌ಗೆ ನೇರವಾಗಿ ಡಿಕ್ಕಿ :

ಪೂರ್ವ ವಲಯದ ಐಜಿಪಿ ರವಿಕಾಂತೇಗೌಡ ಅವರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ನೀಡಿದ್ದು, ‘ಬೆಂಗಳೂರಿನಿಂದ ಗೋಕರ್ಣಕ್ಕೆ ಹೊರಟಿದ್ದ ಬಸ್ (KA 01 AE 5217) ಸುಗಮವಾಗಿ ಸಂಚರಿಸುತ್ತಿತ್ತು. ಆದರೆ ಎದುರಿನಿಂದ ಬರುತ್ತಿದ್ದ ಕಂಟೇನರ್ ಲಾರಿ ಚಾಲಕನ ನಿರ್ಲಕ್ಷ್ಯದಿಂದ ಡಿವೈಡರ್ ದಾಟಿ ಬಂದು ಬಸ್ಸಿನ ಡೀಸೆಲ್ ಟ್ಯಾಂಕ್‌ಗೆ ನೇರವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೆಂಕಿ ಕಿಡಿ ಉಂಟಾಗಿ ಕ್ಷಣಾರ್ಧದಲ್ಲಿ ಇಡೀ ಬಸ್ ಬೆಂಕಿಯ ಕೆನ್ನಾಲಿಗೆಗೆ ತುತ್ತಾಗಿದೆ’ ಎಂದು ವಿವರಿಸಿದ್ದಾರೆ.

ಸಾವಿನ ಸಂಖ್ಯೆ ಮತ್ತು ಗುರುತು ಪತ್ತೆ ಸವಾಲು:

ಸದ್ಯದ ಮಾಹಿತಿ ಪ್ರಕಾರ ಲಾರಿ ಚಾಲಕ ಸೇರಿದಂತೆ ಒಟ್ಟು 9 ಮಂದಿ ಸಾವನ್ನಪ್ಪಿದ್ದಾರೆ. ಬೆಂಕಿಯ ತೀವ್ರತೆ ಎಷ್ಟಿತ್ತೆಂದರೆ ಮೃತ ದೇಹಗಳು ಗುರುತು ಹಿಡಿಯಲಾರದಷ್ಟು ಸುಟ್ಟು ಕರಕಲಾಗಿವೆ. ಬಸ್ಸಿನಿಂದ ಎಂಟು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಮೃತರ ಗುರುತು ಪತ್ತೆ ಹಚ್ಚುವುದು ಕಷ್ಟವಾಗಿರುವುದರಿಂದ ಬೆಂಗಳೂರಿನಿಂದ ವಿಧಿವಿಜ್ಞಾನ ಮತ್ತು ಡಿಎನ್‌ಎ (DNA) ತಂಡಗಳನ್ನು ಕರೆಸಲಾಗಿದೆ’ ಎಂದು ಐಜಿಪಿ ತಿಳಿಸಿದ್ದಾರೆ.

RELATED ARTICLES

Latest News